ಹತ್ತು ಹಲವು ವೈಶಿಷ್ಟ್ಯಗಳಿಂದ ಅಸಂಖ್ಯಾತ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿರುವ ಗೂಗಲ್ನ ಸರ್ಚ್ ಎಂಜಿನ್ಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಮೈಕ್ರೊಸಾಫ್ಟ್ ತನ್ನ ಸರ್ಚ್ ಎಂಜಿನ್ ‘ಬಿಂಗ್’ನ ಲಾಂಛನಕ್ಕೆ ಹೊಸರೂಪ ಕೊಡುವುದರ ಜತೆಗೆ ವೈಶಿಷ್ಟ್ಯಪೂರ್ಣ ಮಾಹಿತಿ ಒಳಗೊಂಡ ಸಾಮಾಜಿಕ ಹುಡುಕಾಟಗಳ ಆಯ್ಕೆ ಇರುವ ‘ಪೇಜ್ ಜಿರೊ’ ಸೌಲಭ್ಯವನ್ನೂ ಪರಿಚಯಿಸಿದೆ.

ತಂತ್ರಾಂಶ ಕ್ಷೇತ್ರದ ದಿಗ್ಗಜ ಕಂಪೆನಿಯಾದ ಮೈಕ್ರೊಸಾಫ್ಟ್ ತನ್ನ ಸರ್ಚ್ ಎಂಜಿನ್ ಬಿಂಗ್ನ ಲಾಂಛನವನ್ನು ಬಂಗಾರ ವರ್ಣದ ಹಿನ್ನೆಲೆಯಲ್ಲಿ ಮರು ವಿನ್ಯಾಸಗೊಳಿಸಿದೆ.

‘ಮೈಕ್ರೊಸಾಫ್ಟ್ನ ವಿವಿಧ ಸಾಧನಗಳು ಮತ್ತು ಸೇವೆಗಳಲ್ಲಿ ತನ್ನ ಇರುವಿಕೆ ಪ್ರತಿಫಲಿಸುವ ಈ ಲಾಂಛನ ವಿನ್ಯಾಸವನ್ನು ಮನೆಯಲ್ಲಿರುವ ಎಲ್ಲ ಮೈಕ್ರೊಸಾಫ್ಟ್ ಉತ್ಪನ್ನಗಳೊಂದಿಗೆ ಇದೆಯೆನೋ ಎನ್ನುವ ತಕ್ಷಣದ ಭಾವನೆ ಮೂಡಿಸುವಂತೆ ರೂಪಿಸಲಾಗಿದೆ’ ಎನ್ನುತ್ತಾರೆ ಬಿಂಗ್ ಬ್ರ್ಯಾಂಡ್ ತಂಡದ ಹಿರಿಯ ನಿರ್ದೇಶಕ ಸ್ಕಾಟ್ ಎರಿಕ್ಸನ್.

ಸಾಮಾಜಿಕ ಜಾಲತಾಣಗಳು ಮತ್ತು ಅಸ್ತಿತ್ವದಲ್ಲಿರುವ ವ್ಯಕ್ತಿಗಳು, ಸ್ಥಳಗಳು ಮತ್ತು ವಿಚಾರಗಳಿಗೆ ಸಂಬಂಧಿಸಿದ ಹುಡುಕಾಟದ ಫಲಿತಾಂಶಗಳು ಪ್ರಕಟವಾಗುವ ಪುಟದ ಬಲಭಾಗದಲ್ಲಿ ಸಂಯೋಜಿಸಿದ್ದ ಸ್ಥಳದಲ್ಲಿನ ದೊಡ್ಡ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ.
ಈ ಪರಿಷ್ಕರಣೆಯ ಮತ್ತೊಂದು ನೂತನ ವೈಶಿಷ್ಟ್ಯವೆಂದರೆ ‘ಪೇಜ್ ಜೀರೊ’ ಬಳಕೆದಾರರ ಪ್ರಶ್ನೆಗೆ ಸಂಬಂಧಿತ ಹುಡುಕಾಟ ಫಲಿತಾಂಶದ ಸಾಂಪ್ರದಾಯಿಕ ಪುಟಗಳು ತೆರೆದು ಕೊಳ್ಳುವ ಮುನ್ನವೇ ಉಪಯುಕ್ತ ಉತ್ತರದ ಸಹಾಯ ಒದಗಿಸಲಿದೆ.

‘ಪೇಜ್ ಜಿರೊದಲ್ಲಿ ಪ್ರಶ್ನೆಯೊಂದನ್ನು ಟೈಪಿಸಿ ಹುಡುಕಾಟಕ್ಕೆ ಚಾಲನೆ ಕೊಡುವ ಮುನ್ನವೇ ಆ ಪ್ರಶ್ನೆಗೆ ಸಂಬಂಧಿತ ಉಪಯುಕ್ತ ಮಾಹಿತಿ ತೋರಿಸುತ್ತದೆ’ ಪೇಜ್ ಜಿರೊದಲ್ಲಿ ಬಳಕೆದಾರರಿಗೆ ಬೇಡವಾದ ಒಂದೇ ವಿಧದ ಅಥವಾ ಸಂಬಂಧಿತ ವಿಷಯಗಳ ನಡುವಿನ ಅಸ್ಪಷ್ಟತೆಯನ್ನು ನಿವಾರಿಸುವ ಅವಕಾಶವಿದೆ.

‘ನೂತನ ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್, ಕಂಪ್ಯೂಟರ್ ಸೇರಿದಂತೆ ನೀವು ಉಪಯೋಗಿಸುವ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನೋಡಲು ತುಂಬಾ ಆಕರ್ಷಕವಾಗಿ ಹಾಗೂ ಚೆನ್ನಾಗಿ ಕಾರ್ಯನಿರ್ವಹಿಸುವ ತೆರದಿ ನೂತನ ಬಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ’ ಎನ್ನುತ್ತಾರೆ ಎರಿಕ್ಸನ್.

ಮೈಕ್ರೊಸಾಫ್ಟ್ ಕೂಡ ತನ್ನ ಸ್ನ್ಯಾಪ್ಶೂಟ್ ಪರಿಷ್ಕರಿಸಿದೆ. ಒಂದು ವರ್ಷದ ಹಿಂದೆ ‘ಬಿಂಗ್ ನೋಸ್’ ಎಂಬ ಹೊಸದೊಂದು ಸೌಲಭ್ಯ ಸೆರ್ಪಡೆಗೊಳಿಸಿದ್ದು, ಇದರಲ್ಲಿ ವ್ಯಕ್ತಿ, ಸ್ಥಳ ಮತ್ತು ವಸ್ತುಗಳ ಕುರಿತಾದ ಮಾಹಿತಿಗಳು ದೊರೆಯುತ್ತವೆ.

‘ಇದು ಬಿಂಗ್ಗೆ ಹೆಚ್ಚುಆಧುನಿಕ ಯುಗವಾಗಿದ್ದು, ಇತ್ತೀಚೆಗೆ ಹೊಸದಾಗಿ ಆರಂಭಿಸಲಾದ ಬಿಂಗ್ ಡಾಟ್ ಕಾಮ್ನಲ್ಲಿ ನಾವು ಸುಧಾರಣೆಗಳನ್ನು ಕುರಿತಂತೆ ಪ್ರಕಟಿಸಿದ್ದೇವೆ’ ಎನ್ನುತ್ತಾರೆ ಬಳಕೆದಾರರ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಲಾರೆನ್ಸ್ ರಿಪ್ಷೆರ್.
‘ಈ ಪುನರ್ ವಿನ್ಯಾಸದಿಂದ ಜನರು ತ್ವರಿತಗತಿಯಲ್ಲಿ ಮಾಹಿತಿಯನ್ನು ಹೆಚ್ಚು ಪರಿಣಾಕಾರಿಯಾದ ಮಾರ್ಗಗಳ ಮೂಲಕ ಪಡೆಯುವ ಜತೆಗೆ ವಿಶಿಷ್ಟ ವಾದ ಸುಂದರ ಅನುಭೂತಿ ಪಡೆಯುತ್ತಾರೆ ಎನ್ನುವ ನಂಬಿಕೆ ನಮಗಿದೆ’ ಎನ್ನುತ್ತಾರೆ ಲಾರೆನ್ಸ್.

ಅಂತರ್ಜಾಲ ವಿಶ್ಲೇಷಣಾ ಕಂಪೆನಿಯಾದ ಕಾಮ್ಸ್ಕೋರ್ ಪ್ರಕಾರ ಬಿಂಗ್, ಗೂಗಲ್ ನಂತರ ಅತಿ ಜನಪ್ರಿಯವಾದ ಸರ್ಚ್ ಎಂಜಿನ್ ಆಗಿದೆ. ಹುಡುಕಾಟದಲ್ಲಿ ಗೂಗಲ್ ಸರ್ಚ್ ಎಂಜಿನ್ ಪಾಲು ಶೇ ೭೦ ರಷ್ಟಿದ್ದರೆ, ಬಿಂಗ್ನ ಪಾಲು ಶೇ ೧೭ ರಷ್ಟಿದೆ ಎನ್ನುತ್ತದೆ ಕಾಮ್ಸ್ಕೋರ್ನ ಇತ್ತೀಚೆಗಿನ ಸಮೀಕ್ಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.