ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆರ್ಥಿಕ ಪ್ರಗತಿ ನಿರಾಶಾದಾಯಕ: ಮೂಡೀಸ್‌

Last Updated 30 ಜೂನ್ 2015, 11:43 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ‘ನಿರಾಶಾದಾಯಕವಾಗಿದೆ’ ಎಂದು ಜಾಗತಿಕ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಮೂಡೀಸ್‌ ಹೇಳಿದೆ.

ಮೋದಿ ಸರ್ಕಾರ ಜಾರಿಗೆ ತರುತ್ತಿರುವ ಕೆಲವು ಆರ್ಥಿಕ ಸುಧಾರಣಾ ಕ್ರಮಗಳು, ಭಾರತದ ಒಟ್ಟಾರೆ ಸಾಂಸ್ಥಿಕ ಬಲವನ್ನು ಹೆಚ್ಚಿಸುವಂತಿದೆಯೇ ಹೊರತು, ಇದು ನೇರವಾಗಿ ದೇಶದ ಆರ್ಥಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿಲ್ಲ. ಈ ಯೋಜನೆಗಳು ಅರ್ಥ ವ್ಯವಸ್ಥೆಗೆ ಬಲ ತುಂಬಬೇಕಾದರೆ ಹಲವು ವರ್ಷಗಳೇ ಬೇಕಾಗಬಹುದು ಎಂದು ಮೂಡೀಸ್‌ ‘ಇನ್‌ಸೈಡ್‌ ಇಂಡಿಯಾ’ ಎಂಬ ವರದಿಯಲ್ಲಿ ವಿಶ್ಲೇಷಿಸಿದೆ. 

ಕೇಂದ್ರ ಸರ್ಕಾರದ ನಗರ ಕೇಂದ್ರೀಕೃತ ಅಭಿವೃದ್ಧಿಯಿಂದ ಗ್ರಾಮೀಣ ಆರ್ಥಿಕತೆ ನಕಾರಾತ್ಮಕ ಮಟ್ಟಕ್ಕೆ ತಗ್ಗಿದೆ. ಮುಂಗಾರು ವಿಳಂಬವಾಗಿರುವುದು ಕೂಡ ಗ್ರಾಮೀಣ ಅರ್ಥವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿದೆ. 2016ರ ಮಾರ್ಚ್‌ ನಂತರ ಗ್ರಾಮೀಣ ಆರ್ಥಿಕತೆ ಸುಧಾರಿಸಬಹುದು. ಸದ್ಯದ ಮಟ್ಟಿಗಂತೂ  ಗ್ರಾಮೀಣ ಪ್ರದೇಶದಲ್ಲಿ ವಸೂಲಾಗದ ಕೃಷಿ ಸಾಲದ ಪ್ರಮಾಣ  (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಶೇ 7.5ರಷ್ಟು ಜಿಡಿಪಿ ಪ್ರಗತಿ ದಾಖಲಿಸುವ ಅಂದಾಜು ಮಾಡಲಾಗಿದೆ. ಈ ವೃದ್ಧಿ ದರವು ಜಿ20 ದೇಶಗಳಲ್ಲೇ ಗರಿಷ್ಠ ಮಟ್ಟದ್ದು.  ಒಟ್ಟಾರೆ ಆರ್ಥಿಕ ಪ್ರಗತಿ ಮುನ್ನೋಟ ಧನಾತ್ಮಕವಾಗಿದೆ. ಆದರೆ, ಹೂಡಿಕೆದಾರರ ದೃಷ್ಟಿಯಿಂದ ನೋಡಿದರೆ ಸದ್ಯ ಭಾರತಕ್ಕೆ ಕಡಿಮೆ ರೇಟಿಂಗ್‌ ನೀಡಬೇಕಾಗುತ್ತದೆ ಎಂದು ಮೂಡೀಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT