ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭಾಷಣ ಆಲಿಕೆ ಕಡ್ಡಾಯವಲ್ಲ

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸ್ಪಷ್ಟನೆ
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/­ಐಎ­ಎನ್‌ಎಸ್‌): ಶಿಕ್ಷಕರ ದಿನವನ್ನು  ‘ಗುರು ಉತ್ಸವ’ ಎಂದು ಆಚರಿ­ಸುವ ಸರ್ಕಾರದ  ನಿರ್ಧಾರ ಹಾಗೂ ಆ ದಿನ ವಿದ್ಯಾರ್ಥಿ­ಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆ­­–ಸುವ ವಿಚಾರ ಈಗ ವಿವಾದದಲ್ಲಿ ಸಿಲುಕಿದೆ.

ವಿರೋಧ ಪಕ್ಷವಾದ ಕಾಂಗ್ರೆಸ್ ಜತೆ ಬಿಜೆಪಿಯ ಮಿತ್ರಪಕ್ಷಗಳಾದ ಎಂಡಿಎಂಕೆ ಹಾಗೂ ಪಿಎಂಕೆ ಸಹ ಸರ್ಕಾರದ ಈ ಕಾರ್ಯಕ್ರಮಕ್ಕೆ ತಕರಾರು ತೆಗೆದಿವೆ.

ಶಿಕ್ಷಕರ ದಿನಾಚರಣೆಗೆ ‘ಗುರು ಉತ್ಸವ‘ಎಂದು ಮರುನಾಮಕರಣ ಮಾಡಿ­­­­­ರುವ ಆದೇಶ ವಾಪಸು ಪಡೆಯ­ಬೇಕು ಎಂದು ಪಿಎಂಕೆಯ ಎಸ್‌. ರಾಮದಾಸ್‌ ಹಾಗೂ ಎಂಡಿಎಂಕೆಯ ವೈಕೊ ಒತ್ತಾಯಿಸಿದ್ದಾರೆ.

ಮಕ್ಕಳ ಜತೆ  ಪ್ರಧಾನಿ ಸಂವಾದ ನಡೆ­ಸು­ವುದು ಒಳ್ಳೆ­ಯದೆ ಆದರೂ ಎಲ್ಲ ಪ್ರಾದೇಶಿಕ ಭಾಷೆ, ಸಂಸ್ಕೃತಿ­ಗ­ಳಿಗೆ ಉತ್ತೇ­ಜನ ನೀಡಿ­­­­ದಾಗ ಮಾತ್ರ ರಾಷ್ಟ್ರೀಯ ಭಾವೈಕ್ಯ ಸಾಧ್ಯ­ವಾ­ಗು­­ತ್ತದೆ ಎಂದು ರಾಮ­ದಾಸ್‌ ‘ಗುರು ಉತ್ಸವ’ ಎಂಬ ಹೆಸರಿಗೆ  ತಕರಾರು ತೆಗೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಆಲಿಸುವುದು ಕಡ್ಡಾಯ­ವಲ್ಲ. ಅದು  ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

‘ಶಿಕ್ಷಕರ ದಿನಾಚರಣೆಯ ಹೆಸರನ್ನು ನಾವು ಬದಲಿಸಿಲ್ಲ. ‘‘ಗುರು ಉತ್ಸವ’’ ಎಂಬ ಹೆಸರಿನಲ್ಲಿ  ಶಿಕ್ಷಕರ ಮಹತ್ವ ಸಾರುವ ಪ್ರಬಂಧ ಸ್ಪರ್ಧೆಗೆ ಈ ಹೆಸರು ನೀಡ­ಲಾಗಿದೆ. ಈ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಯಾರಿಗಾದರೂ ಅನ್ನಿಸಿದಲ್ಲಿ ಅದು ವಿಷಾದಕರ’ ಎಂದೂ ಇರಾನಿ ಹೇಳಿದ್ದಾರೆ.

ಸೆಪ್ಟೆಂಬರ್‌ 5ರಂದು ಪ್ರಧಾನಿ ಮೋದಿ ದೆಹಲಿಯ ಮಾಣೆಕ್‌ಷಾ ಸಭಾಂಗ­ಣದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಆನಂತರ ಅವರೊಂದಿಗೆ ಸಂವಾದ­ದಲ್ಲಿ ಪಾಲ್ಗೊಳ್ಳು­ತ್ತಾರೆ. ದೇಶ­ದಾ­­ದ್ಯಂತ 18 ಲಕ್ಷ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಭಾಷಣದ ನೇರ ಪ್ರಸಾರ ಮಾಡ­­­ಲಾ­ಗು­ತ್ತದೆ. ವಿಡಿಯೊ ಕಾನ್ಫರೆನ್ಸಿಂಗ್‌ ಸೌಲ­ಭ್ಯದ ಮೂಲಕ ದೇಶದ ಯಾವುದೇ ಭಾಗದ ವಿದ್ಯಾ­ರ್ಥಿಯೂ ಪ್ರಧಾನಿಗೆ ಪ್ರಶ್ನೆ ಕೇಳಬಹುದಾಗಿದೆ.

ಈ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4.45ರವರೆಗೆ ನಡೆಯಲಿರುವುದರಿಂದ ಈ ಕುರಿತೂ ಕೆಲ ಶಾಲೆಗಳು ಆಕ್ಷೇಪ ವ್ಯಕ್ತಪಡಿಸಿವೆ. 

ಮಧ್ಯಾಹ್ನದ ನಂತರ ಶಾಲಾ ಅವಧಿ ಮುಕ್ತಾ­ಯ­ವಾಗುವುದರಿಂದ ವಿದ್ಯಾರ್ಥಿ­ಗ­ಳನ್ನು ಈ ಕಾರ್ಯ­ಕ್ರಮ­ಕ್ಕಾಗಿ ಶಾಲೆ­ಯಲ್ಲಿ ಇರಿಸಿಕೊಳ್ಳ­ಬೇಕಾ­ಗುತ್ತದೆ ಎಂದು ಆಡಳಿತ ವರ್ಗಗಳು ತಕರಾರು ಎತ್ತಿವೆ. ಪಶ್ಚಿಮ­ಬಂಗಾಳ ಸೇರಿ­ದಂತೆ ಕೆಲ ರಾಜ್ಯಗಳು ಈ ಕಾರ್ಯ­ಕ್ರಮಕ್ಕೆ ಸಿದ್ಧತೆ ನಡೆಸಲು ಇನ್ನಷ್ಟು ಕಾಲಾವಕಾಶ ಬೇಕಿತ್ತು ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT