ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ದ ಮುಂದುವರಿದ ಎಸ್‌ಪಿ ಟೀಕೆ

Last Updated 9 ಅಕ್ಟೋಬರ್ 2014, 12:12 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಬಡವರ ಬಗ್ಗೆ ಕಾಳಜಿ ವಹಿಸದೆ ಕೇವಲ ಬಂಡವಾಳಶಾಹಿಗಳತ್ತ ಗಮನಹರಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಗುರುವಾರ ಆರೋಪಿಸಿದೆ.

‘ದೇಶದ ಜನರಿಗಾಗಿ ಕಾರ್ಯನಿರ್ವಹಿಸುವುದು ಪ್ರಧಾನ ಮಂತ್ರಿಯ ಕೆಲಸ. ಆದರೆ, ಪ್ರಧಾನಿ ಮೋದಿ ಅಮೆರಿಕ ಹಾಗೂ ಜಪಾನ್‌ ಪ್ರವಾಸದ ವೇಳೆ ವಾಣಿಜ್ಯ– ವ್ಯಾಪಾರದ ಬಗ್ಗೆ ಮಾತನಾಡಿ, ಇಲ್ಲಿಗೆ ಬಂದ ನಂತರ ಸ್ವಚ್ಛತೆ ಕುರಿತು ಮಾತನಾಡಿದರು’ ಎಂದು ಸಮಾಜವಾದಿ ಪಕ್ಷದ ನಾಯಕ ಶಿವಪಾಲ್‌ ಸಿಂಗ್‌ ಯಾದವ್‌ ಗುರುವಾರ ಇಲ್ಲಿ ನಡೆದ ಪಕ್ಷದ ಒಂಬತ್ತನೇ ರಾಷ್ಟ್ರೀಯ ಸಮಾವೇಶದಲ್ಲಿ ಟೀಕಿಸಿದರು.

‘ಚೀನಾ ಮತ್ತೆ ಮತ್ತೆ ಭಾರತದ ಗಡಿಯೊಳಗೆ ನುಸುಳುತ್ತಿದೆ. ದೇಶದ ಗಡಿ ಸುರಕ್ಷಿತವಾಗಿಲ್ಲ. ಈ  ವಿಚಾರವಾಗಿ ಚೀನಾ ಭಾರತಕ್ಕೆ ದ್ರೋಹ ಮಾಡುತ್ತಿದ್ದರೂ ಇದಕ್ಕೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಟೀಕಿಸಿದರು.

ಬುಧವಾರ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ ಅವರು, ಚೀನಾ ಪದೇ ಪದೇ ಅತಿಕ್ರಮಣ ಮಾಡುತ್ತಿರುವ ಬಗ್ಗೆ ಮೋದಿ ಸರ್ಕಾರ ಮೌನ ತಾಳಿರುವ ಕುರಿತು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT