ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್ ಓಪನ್: 3ನೇ ಸುತ್ತಿಗೆ ಫೆಡರರ್, ವಾವ್ರಿಂಕ

Last Updated 4 ಸೆಪ್ಟೆಂಬರ್ 2015, 10:24 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ): ಸ್ವಿಟ್ಜರ್‌ ಲೆಂಡ್‌ನ ರೋಜರ್‌ ಫೆಡರರ್‌, ಎರಡು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಮುನ್ನಡೆ ಸಾಧಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರೋಜರ್‌ ಫೆಡರರ್‌ 6-1, 6-2, 6-1 ಸೆಟ್ ನಲ್ಲಿ ಬೆಲ್ಜಿಯಂನ ಸ್ಟೀವ್ ಡಾರ್ಕಿಸ್ ವಿರುದ್ಧ ಜಯ ಗಳಿಸಿದರು. ಈ ಇಬ್ಬರ ಮಧ್ಯೆ 80 ನಿಮಿಷಗಳ ಸೆಣಸಾಟ ನಡೆಯಿತು.

ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ 7-6(7), 7-6(7), 7-6(8) ಸೆಟ್ ಗಳಲ್ಲಿ ದಕ್ಷಿಣ ಕೊರಿಯಾದ ಹೈಯಿನ್ ಚುಂಗ್ ವಿರುದ್ಧ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್ ನಲ್ಲಿ ಥಾಮಸ್ ಬೆರ್ಡಿಕ್ 7-6, 6-1, 6-3 ಸೆಟ್ ನಲ್ಲಿ ಆಸ್ಟ್ರೇಲಿಯಾದ ಜೆ. ಮಿಲ್ಜಿರ್ ವಿರುದ್ಧ ಗೆಲುವು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT