ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌: ಸಾವಿನ ಸಂಖ್ಯೆ 560ಕ್ಕೆ ಏರಿಕೆ

Last Updated 8 ಏಪ್ರಿಲ್ 2015, 9:44 IST
ಅಕ್ಷರ ಗಾತ್ರ

ಸನಾ (ಎಪಿ): ಯೆಮನ್‌ನಲ್ಲಿ ಸೌದಿ ನೇತೃತ್ವದ ವೈಮಾನಿಕ ದಾಳಿ ಹಾಗೂ ಶಿಯಾ ಬಂಡುಕೋರರ ನಡುವಣ ಸಂಘರ್ಷ ಮುಂದುವರಿದ್ದು, ಈವರೆಗೂ ಮಕ್ಕಳು ಸೇರಿದಂತೆ 560 ಜನರು ಸಾವನ್ನಪ್ಪಿದ್ದಾರೆ. ಸುಮಾರು 1700 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಮತ್ತೊಂದೆಡೆ, ಯೆಮನ್‌ಗೆ ತೆರಳಲು ಸಿದ್ಧವಿರುವ ಟನ್‌ಗಟ್ಟಲೇ ಅಗತ್ಯ ಔಷಧಿ ಅನುಮತಿ ನಿರೀಕ್ಷೆಯಲ್ಲಿದೆ. ಅದು ತಲುಪದಿದ್ದರೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಸಂಘರ್ಷ ಉಲ್ಬಣಿಸಿದ್ದರಿಂದ ಕಳೆದ ಮೂರು ವಾರಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರು ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ.

17 ಟನ್‌ಗಳಷ್ಟು ಔಷಧಿ ಹೊತ್ತ ಸರಕು ಸಾಗಣೆ ವಿಮಾನ ಜೋರ್ಡಾನ್‌ ರಾಜಧಾನಿ ಅಮನ್‌ನಲ್ಲಿ ಯೆಮನ್‌ ಪ್ರವೇಶಿಸಿಲು ಅನುಮತಿಗಾಗಿ ಕಾಯುತ್ತಿದೆ ಎಂದು ಜಿನೆವಾ ಮೂಲದ ರೆಡ್‌ ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿಯ ವಕ್ತಾರೆ ಸಿತಾರಾ ಜಬೀನ್‌ ತಿಳಿಸಿದ್ದಾರೆ.

‘ಈ ಔಷಧಿಗಳು ಯೆಮನ್‌ ತಲುಪದಿದ್ದರೆ ಮತ್ತಷ್ಟು ಜನರು ಸಾವನ್ನಪ್ಪುವ ಭೀತಿ ನಮ್ಮನ್ನು ಕಾಡುತಿದೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT