ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಿದ ರಮ್ಜಾನ್‌ ಮಾರ್ಕೆಟ್‌...!

ಹಬ್ಬಕ್ಕೆ ಖರೀದಿ ಬಲು ಜೋರು; ತಡರಾತ್ರಿಯವರೆಗೆ ತೆರೆಯುವ ಮಾರಾಟ ಮಳಿಗೆ
Last Updated 6 ಜುಲೈ 2015, 9:04 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಮಾರ್ಕೆಟ್‌ಗಳಿಗೆ ‘ರಮ್ಜಾನ್‌’ ಖದರ್‌ ಬಂದಿದೆ. ಹಬ್ಬ ಸಮೀಪಿಸುತ್ತಿರುವುದರಿಂದ ಮಾರ್ಕೆಟ್‌ ನಲ್ಲಿ ಮುಸ್ಲಿಂ ಬಾಂಧವರಿಂದ ಖರೀದಿ ಭರಾಟೆ ಹೆಚ್ಚುತ್ತಿದೆ. ಮಾರ್ಕೆಟ್‌ ರಾತ್ರಿಯ ಹೊತ್ತು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ.

ಹೌದು! ಪವಿತ್ರ ರಮ್ಜಾನ್‌ ಹಬ್ಬಕ್ಕೆ ಎರಡು ವಾರ ಮಾತ್ರ ಬಾಕಿ ಉಳಿದಿದೆ. ಮುಸ್ಲಿಂ ಬಾಂಧವರಲ್ಲಿ ಈಗಾಗಲೇ ಹಬ್ಬದ ಸಡಗರ ಕಂಡು ಬರುತ್ತಿದೆ. ರಮ್ಜಾನ್‌ ತಿಂಗಳು ಶುರುವಾಗುತ್ತಿದ್ದಂತೆ ನಗರದ ಖಡೇಬಜಾರ್‌, ಬೆಂಡಿ ಬಜಾರ್‌, ದರ್ಬಾರ ಗಲ್ಲಿ, ಖಂಜರ್‌ ಗಲ್ಲಿಯಲ್ಲಿ ಕೆಲವು ಮುಸ್ಲಿಂ ವ್ಯಾಪಾರಿ ಗಳು ರಸ್ತೆ ಪಕ್ಕ ತಾತ್ಕಾಲಿಕವಾಗಿ ಅಂಗಡಿ ಗಳನ್ನು ತೆರೆದಿದ್ದಾರೆ. ಮುಸ್ಲಿಂ ಬಾಂಧ ವರು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಕೆ ಟ್‌ಗೆ ಲಗ್ಗೆ ಇಡುತ್ತಿರುವುದು ಕಂಡು ಬರುತ್ತಿದೆ.

ಖಡೇಬಜಾರ್‌, ಬೆಂಡಿ ಬಜಾರ್‌, ದರ್ಬಾರ ಗಲ್ಲಿಗಳಲ್ಲಿ ಮುಸ್ಲಿಂ ಬಾಂಧವರು ಹಲವು ಬಗೆಯ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿ ದ್ದಾರೆ. ಸಂಜೆಯಾಗುತ್ತಿದ್ದಂತೆ ಮಾರ್ಕೆಟ್‌ ರಂಗೇ ರುತ್ತದೆ. ತಡ ರಾತ್ರಿಯವರೆಗೂ ಮುಸ್ಲಿಂ ಬಾಂಧವರು ಖರೀದಿಗೆ ಬರುತ್ತಿದ್ದಾರೆ.

ಡ್ರೈ ಫ್ರುಟ್ಸ್‌ ಮೆರುಗು: ದಿನವಿಡೀ ‘ರೋಜಾ’ (ಉಪವಾಸ ವ್ರತ) ಕೈಗೊ ಳ್ಳುವ ಮುಸ್ಲಿಂ ಬಾಂಧವರಿಗೆ ಮುಂಜಾನೆ ‘ಸಹರಿ’ ಹಾಗೂ ರಾತ್ರಿ ‘ಇಫ್ತಾರ್‌’ ಕೂಟ ಡ್ರೈ ಫ್ರುಟ್ಸ್‌ಗಳಿಲ್ಲದೇ ನಡೆಯುವುದೇ ಇಲ್ಲ. ಹೀಗಾಗಿ ದೇಶ– ವಿದೇಶಗಳಿಂದ ಹಲವು ಬಗೆಯ ಒಣ ಹಣ್ಣುಗಳು ಮಾರ್ಕೆಟ್‌ಗೆ ಬಂದಿದೆ.

ದರ್ಬಾರ ಗಲ್ಲಿ, ಖಂಜರ್‌ ಗಲ್ಲಿ, ಖಡೇಬಜಾರ್‌ಗೆ ಕಾಲಿಟ್ಟರೆ ಡ್ರೈ ಫ್ರುಟ್ಸ್‌ ಗಳು ಕೈ ಬೀಸಿ ಕರೆಯುತ್ತಿವೆ. ಕರ್ಜೂರ, ಗೋಡಂಬಿ, ಪಿಸ್ತಾ, ಕಲ್ಲಂಗಡಿ ಬೀಜ, ಅಕ್ರೂಟ್‌, ಒಣ ದ್ರಾಕ್ಷಿ, ಸಾಂಬಾರ ಪದಾರ್ಥಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಶ್ರೀಮಂತರಿಂದ ಬಡವರೂ ಡ್ರೈ ಫ್ರುಟ್ಸ್‌ ಅನ್ನು ಈ ಸಂದರ್ಭದಲ್ಲಿ ಖರೀದಿಸು ತ್ತಾರೆ. ಉತ್ಕೃಷ್ಟ ಗುಣಮಟ್ಟದ ಒಣ ಹಣ್ಣುಗಳು ಬಂದಿರುವುದ ರಿಂದ ಇತರ ಸಮುದಾಯದವರೂ ಇವುಗಳನ್ನು ಖರೀದಿಸಲು ಮಾರ್ಕೆಟ್‌ಗೆ ಬರುತ್ತಿದ್ದಾರೆ.

ಒಂದು ಕೆ.ಜಿ. ಕಾಶ್ಮೀರದ ಅಕ್ರೂಟ್‌ಗೆ ₹ 800, ಮಧ್ಯ ಪ್ರದೇಶದ ಚಾರೋಲಿಗೆ ₹ 700, ಆಸ್ಟ್ರೇಲಿಯಾ, ಅಮೆರಿಕಾದ ಬಾದಾಮಿಗೆ ₹ 800, ಇರಾನ್‌ನ ಪಿಸ್ತಾ ₹ 1,200; ಒಣ ದ್ರಾಕ್ಷಿ ₹ 200, ಕಲ್ಲಂಗಡಿ ಹಣ್ಣಿನ ಬೀಜ ₹ 180ರಂತೆ ಮಾರಾಟವಾಗುತ್ತಿದೆ. ಒಂದು ಕೆ.ಜಿ. ಆಫ್ರಿಕಾದ ಲವಂಗ ₹ 1,200; ಯಾಲಕ್ಕಿ ₹ 400, ಅಪ ಘಾನಿಸ್ತಾನ ದಾಲ್ಚಿನಿ ₹ 600 ದರದಲ್ಲಿ ವಹಿವಾಟು ನಡೆಯುತ್ತಿದೆ. ಹೈದರಾ ಬಾದ್‌ ಶಾವಿಗೆ ₹ 60 ಹಾಗೂ ಮುಂಬೈನ ಶಾವಿಗೆ ₹ 90 ದರದಲ್ಲಿ ಮಾರಾಟವಾಗುತ್ತಿದೆ.

‘ರಮ್ಜಾನ್‌ ತಿಂಗಳಿನಲ್ಲಿ ಮಾತ್ರ ಅಂಗಡಿ ತೆರೆಯುತ್ತೇವೆ. ಮೊದಲ ಹದಿ ನೈದು ದಿನ ವ್ಯಾಪಾರ ಸಾಮಾನ್ಯವಾಗಿ ನಡೆಯುತ್ತದೆ. ಹಬ್ಬಕ್ಕೆ ಎರಡು ದಿನಗಳಿ ರುವಾಗ ಬೆಳಗಿನ ಜಾವದವರೆಗೂ ಜನರು ಮಾರ್ಕೆಟ್‌ಗೆ ಖರೀದಿಗಾಗಿ ಬರುತ್ತಾರೆ. ಒಂದು ತಿಂಗಳ ಅವಧಿಯಲ್ಲಿ ಸುಮಾರು ₹ 10 ಲಕ್ಷ ವಹಿವಾಟು ನಡೆಸುತ್ತೇವೆ’ ಎಂದು ದರ್ಬಾರ ಗಲ್ಲಿಯ ಜನತಾ ಡ್ರೈ ಫ್ರುಟ್ಸ್‌ ಅಂಗಡಿಯ ಇರ್ಶಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾದಾಮಿ, ಪಿಸ್ತಾ, ಅಕ್ರೂಟ್‌, ಗೋಡಂಬಿಯನ್ನು ಹೆಚ್ಚು ಖರೀದಿಸು ತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ರೈ ಫುಟ್ಸ್‌ಗಳ ಬೆಲೆ ಶೇ 10ರಷ್ಟು ಹೆಚ್ಚಾಗಿದೆ. ಹೀಗಿದ್ದರೂ ಖರೀದಿಸಲು ಜನ ಹಿಂದೇಟು ಹಾಕು ತ್ತಿಲ್ಲ’ ಎನ್ನುತ್ತಾರೆ ಹೀನಾ ಡ್ರೈ ಫ್ರುಟ್ಸ್‌ ಅಂಗಡಿಯ ತಬರೇಜ್‌ ಸಂಗೊಳ್ಳಿ.

ತಿನಿಸಿಗೆ ಭಾರಿ ಬೇಡಿಕೆ: ನಿತ್ಯ ಸಂಜೆ ‘ಮಗರಿಬ್‌’ ಪ್ರಾರ್ಥನೆ ಬಳಿಕ ‘ರೋಜಾ’ ಅಂತ್ಯಗೊಳಿಸುವ ಮುಸ್ಲಿಂ ಬಾಂಧವರು ಮನೆಗೆ ಅಗತ್ಯ ಆಹಾರ ಪದಾರ್ಥ ಖರೀದಿಗಾಗಿ ಮಾರ್ಕೆಟ್‌ಗೆ ಬರುತ್ತಾರೆ. ವಿವಿಧ ಭಕ್ಷ್ಯ ಭೋಜ್ಯಗಳನ್ನು ಸವಿಯು ತ್ತಾರೆ. ದರ್ಬಾರ ಗಲ್ಲಿಯಲ್ಲಿ ತೆರೆದಿರುವ ವಿವಿಧ ಮಾಂಸಾಹಾರಿ ಅಂಗಡಿಗಳಿಗೆ ಜನ ಮುಗಿ ಬೀಳುತ್ತಾರೆ. ಮಟನ್‌– ಚಿಕನ್‌ ಸಮೋಸಾ, ಚಿಕನ್‌ ರೋಲ್‌, ಕಬಾಬ್‌, ಬಿರ್ಯಾನಿ, ಫಿರನಿಯನ್ನು ಸಾಲಿನಲ್ಲಿ ನಿಂತು ಸೇವಿಸುತ್ತಾರೆ. ಸುತ್ತಲಿನ ಪ್ರದೇಶಗಳಲ್ಲಿ ವಿವಿಧ ಬಗೆಯ ತಿನಿಸುಗಳ ಪರಿಮರ ಸೂಸುತ್ತವೆ.

ರಮ್ಜಾನ್‌ ಹಬ್ಬದ ದಿನ ಹೊಸ ಬಟ್ಟೆಯನ್ನು ತಪ್ಪದೇ ಎಲ್ಲರೂ ಖರೀದಿ ಸುತ್ತಾರೆ. ಹೀಗಾಗಿ ಬಟ್ಟೆ ಅಂಗಡಿಗಳೂ ಜನದಟ್ಟಣೆಯಿಂದ ಕೂಡಿದೆ. ಹಣ್ಣುಗಳ ವ್ಯಾಪಾರವೂ ಭರದಿಂದ ಸಾಗಿದೆ. ಹಬ್ಬದ ಮುನ್ನಾ ದಿನ 24 ಗಂಟೆಯೂ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT