ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನ್ 80: ‘ರಾಗ ರಸಸಂಜೆ’

Last Updated 28 ಮೇ 2015, 19:30 IST
ಅಕ್ಷರ ಗಾತ್ರ

ಹಿರಿಯ ಸಂಗೀತ ನಿರ್ದೇಶಕರಾದ ರಾಜನ್‌–ನಾಗೇಂದ್ರ ಜೋಡಿಯ ರಾಜನ್‌ ಅವರಿಗೀಗ 80ರ ಹರೆಯ. ಈ ಹುಟ್ಟುಹಬ್ಬ ದ ಸವಿನೆನಪಿಗಾಗಿ ‘ರಾಗ ರಸಸಂಜೆ’ ಎಂಬ  ಕಾರ್ಯಕ್ರಮವನ್ನು   ಭಾನುವಾರ (ಮೇ.31) ಸಂಜೆ 4.30 ರಿಂದ 9 ಗಂಟೆವರೆಗೆ ಬೆಂಗಳೂರಿನ ಕುಮಾರ್ ಸ್ವಾಮಿ ಬಡಾವಣೆಯ ದಯಾನಂದ ಸಾಗರ ವಿದ್ಯಾ ಸಂಸ್ಥಯಲ್ಲಿ ಏರ್ಪಡಿಸಲಾಗಿದೆ.

ರಾಜನ್‌ ಅವರ ಪುತ್ರರಾದ ಅನಂತಕುಮಾರ್‌  ಈ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದಾರೆ.   ಎಸ್‌.ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ, ರಾಜೇಶ್‌ ಕೃಷ್ಣನ್‌ ಸೇರಿದಂತೆ ಒಟ್ಟು 100 ಮಂದಿ ಹಿರಿಯ ಮತ್ತು ಕಿರಿಯ ಸಂಗೀತ ನಿರ್ದೇಶಕರನ್ನು ಸನ್ಮಾನಿಸಲಾಗುವುದು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT