ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನದಲ್ಲಿ ಮಿಗ್-27 ಯುದ್ಧ ವಿಮಾನ ಪತನ

Last Updated 27 ಜನವರಿ 2015, 13:16 IST
ಅಕ್ಷರ ಗಾತ್ರ

ಬಾರಮಿರ್(ಪಿಟಿಐ): ಭಾರತೀಯ ವಾಯು ಪಡೆಗೆ ಸೇರಿಗೆ ‘ಮಿಗ್-27’ ಯುದ್ಧ ವಿಮಾನ ಮಂಗಳವಾರ ರಾಜಸ್ತಾನದ ಬಾರಮಿರ್ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ವಿಮಾನದ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ. 

ಸೇನೆಯ ಯುದ್ಧ ವಿಮಾನ ಮಂಗಳವಾರ ಮಧ್ಯಾಹ್ನ 3.10ರ ಸುಮಾರಿಗೆ ಅಪಘಾತಕ್ಕೀಡಾಗಿದ್ದು, ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ ಎಂದು ಸೇನೆಯ ವಕ್ತಾರರು ದೆಹಲಿಯಲ್ಲಿ ತಿಳಿಸಿದ್ದಾರೆ.

ಈ ಯುದ್ಧ ವಿಮಾನವನ್ನು ಭೂಮಿಯ ಮೇಲಿನ ಶತ್ರುಗಳ ದಾಳಿ ನಿಯಂತ್ರಿಸಲು ಆಗಸದಿಂದ ಗುಂಡಿನ ದಾಳಿ ನಡೆಸಲು ಬಳಸಲಾಗುತ್ತದೆ. ಇದು ಜೋದ್ ಪುರದಿಂದ ರಾಜಸ್ತಾನದ ಅಟ್ರಾಲಿ ವಾಯು ನೆಲೆಗೆ ತೆರಳುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT