ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕೃಷಿ ವಲಯದ ಒಂದು ನೋಟ

Last Updated 19 ಏಪ್ರಿಲ್ 2016, 19:42 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಎಸ್‌ಜಿಡಿಪಿ) ಕೃಷಿ ಕ್ಷೇತ್ರದ ಕೊಡುಗೆ ಕ್ಷೀಣಿಸುತ್ತಿದೆ. ಆದಾಗ್ಯೂ, ಕೃಷಿ ಕ್ಷೇತ್ರವು  ಉದ್ಯೋಗ ಸೃಷ್ಟಿಸುವ ದೊಡ್ಡ ವಲಯವಾಗಿ ಮುಂದುವರಿದಿದೆ.

ಕೃಷಿಯನ್ನು ಸುಸ್ಥಿರ ಹಾಗು ಆರ್ಥಿಕವಾಗಿ ಲಾಭದಾಯಕ ಉದ್ಯೋಗವನ್ನಾಗಿ ಮಾಡಲು ಮತ್ತು ಆಹಾರ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಇದರಲ್ಲಿ ಹಿಂದುಳಿದ ಪ್ರದೇಶದ ಹಾಗೂ ಸಣ್ಣ ರೈತರಿಗೆ ವಿಶೇಷ ಗಮನ ನೀಡುವುದು ಪ್ರಮುಖ ಆದ್ಯತಾ ವಿಷಯವಾಗಿದೆ.

ಮಳೆ ಹಂಚಿಕೆ ಮತ್ತು ಪ್ರಮಾಣ, ಮಣ್ಣಿನ ಗುಣ, ಸಮುದ್ರ ಮಟ್ಟದಿಂದ ಎತ್ತರ ಮತ್ತು ಪ್ರಮುಖ ಬೆಳೆಗಳ ಆಧಾರದ ಮೇಲೆ ರಾಜ್ಯವನ್ನು 10 ಕೃಷಿ ವಲಯಗಳಲ್ಲಿ ವಿಂಗಡಿಸಲಾಗಿದೆ.

ವಿವಿಧ ಹವಾಮಾನಗಳ ಲಭ್ಯತೆಯಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ಏಕದಳಧಾನ್ಯಗಳು, ದ್ವಿದಳಧಾನ್ಯಗಳು, ಎಣ್ಣೆಕಾಳುಗಳು ಹಾಗೂ ವಾಣಿಜ್ಯ ಬೆಳೆಗಳನ್ನು ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ.
 
* 69 ಮುಂಗಾರು,  30 ಹಿಂಗಾರು,  6 ಬೇಸಿಗೆ, ಲಕ್ಷ ಹೆಕ್ಟೇರ್‌ಗಳಲ್ಲಿ, 105 ಒಟ್ಟು ಉತ್ಪಾದನೆ.

ಮಾನ್ಸೂನ್‌
* ಪೂರ್ವ ಮುಂಗಾರು

ರಾಜ್ಯದಲ್ಲಿ ಸಕಾಲಿಕ ಪೂರ್ವ ಮುಂಗಾರು ಮಳೆಯಿಂದ ಮೈಸೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರಂಭಿಕ ಮುಂಗಾರು ಬೆಳೆಗಳ  ಪೂರ್ವ ಸಿದ್ಥತೆ.

* ನೈರುತ್ಯ ಮುಂಗಾರು
ಸಾಮಾನ್ಯವಾಗಿ ಜೂನ್‌ ಮೊದಲ ವಾರ ಆರಂಭವಾಗುತ್ತದೆ. ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಪ್ರಾರಂಭವಾಗಿ ಜೂನ್‌ ಎರಡನೆ ವಾರದ ಅಂತ್ಯದ ಒಳಗೆ  ರಾಜ್ಯದ ಎಲ್ಲೆಡೆ ಆವರಿಸಿರುತ್ತದೆ.

* ಈಶಾನ್ಯ ಮುಂಗಾರು
ಅಕ್ಟೋಬರ್‌ ಕೊನೆಯ ವಾರ ಪ್ರಾರಂಭವಾಗುತ್ತದೆ. ನವೆಂಬರ್‌ ಅಂತ್ಯದವರೆಗೆ ಕೇವಲ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತದೆ.

ಸಮಗ್ರ ಕೃಷಿ ಅಭಿವೃದ್ಧಿಗೆ ಒತ್ತು
* ಕೃಷಿ ಭಾಗ್ಯ
* ಭೂಚೇತನ
* ಸಾವಯವ ಕೃಷಿ
* ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ
* ಕೃಷಿ ಯಾಂತ್ರೀಕರಣ ಮತ್ತು ಲಘು ನೀರಾವರಿ ಯೋಜನೆಗಳು
* ಪ್ರಸಕ್ತ ಹಣಕಾಸು ವರ್ಷದಿಂದ ಮಣ್ಣು ಆರೋಗ್ಯ ಅಭಿಯಾನ– ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT