ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಪ್ರತಿಪಕ್ಷ ನಾಯಕ ಆಜಾದ್‌?

ಕಾಂಗ್ರೆಸ್‌ ನಾಯಕರಾಗಿ ಆಯ್ಕೆ
Last Updated 8 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ರಾಜ್ಯ­ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ­ಯಾಗುವುದು ಬಹುತೇಕ ಖಚಿತವಾಗಿದೆ.

65 ವರ್ಷದ ಗುಲಾಂ ನಬಿ ಆಜಾದ್‌ ಮತ್ತು ಮತ್ತೊಬ್ಬ ಹಿರಿಯ ನಾಯಕ ಆನಂದ ಶರ್ಮಾ ಅವರನ್ನು ಕ್ರಮವಾಗಿ ರಾಜ್ಯ­ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ಉಪ ನಾಯಕನನ್ನಾಗಿ ಭಾನುವಾರ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.

ರಾಜ್ಯಸಭಾ ವಿರೋಧ ಪಕ್ಷದ ನಾಯ­ಕನ ಸ್ಥಾನಕ್ಕೆ  ದಿಗ್ವಿಜಯ್‌ ಸಿಂಗ್, ಗುಲಾಂ ನಬಿ ಆಜಾದ್ ಹಾಗೂ ಆನಂದ ಶರ್ಮಾ  ಹೆಸರು ಕೇಳಿ ಬಂದಿದ್ದವು. ಜಮ್ಮು ಮತ್ತು ಕಾಶ್ಮೀರದ  ಉದಾ­ಮ್‌­ಪುರ ಲೋಕ­ಸಭಾ ಕ್ಷೇತ್ರ­ದಿಂದ ಸ್ಪರ್ಧಿ­ಸಿದ್ದ ಆಜಾದ್‌  ಸೋಲು ಅನು­ಭವಿ­ಸಿದ್ದರು.
ಪಕ್ಷದ ಮುಖ್ಯ ಸಚೇತಕ ಮತ್ತು ಸಚೇ­ತ­ಕರ ಸ್ಥಾನಗಳಿಗೆ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲ.

245 ಸದಸ್ಯ ಬಲದ ಮೇಲ್ಮನೆ­­ಯಲ್ಲಿ  67 ಸದಸ್ಯರನ್ನು ಹೊಂದಿ­­­ರುವ ಕಾಂಗ್ರೆಸ್‌ ಸಹಜವಾಗಿ ವಿರೋಧ ಪಕ್ಷದ ಸ್ಥಾನ ಅಲಂಕರಿಸಲಿದೆ. ವಿರೋಧ ಪಕ್ಷದ ಸ್ಥಾನ ದಲ್ಲಿ ಕುಳಿತು­ಕೊಳ್ಳಲು ಒಟ್ಟು ಸದಸ್ಯ ಬಲದ ಶೇ 10 ರಷ್ಟು ಸದಸ್ಯರನ್ನು ಹೊಂದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT