ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಹೀಗೂ ಆಚರಿಸಬೇಕೇ?

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ಶುಕ್ರವಾರ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣಿಸು­ವಾಗ ಮಧ್ಯೆ ನಿಲ್ದಾಣವೊಂದರಲ್ಲಿ ನಿತ್ಯ ಪ್ರಯಾಣಿ­ಸುವ ಗುಂಪೊಂದು ಹತ್ತಿತು. ಮುಂದಿನ ನಿಲ್ದಾಣ­ಗಳಲ್ಲಿ ಇನ್ನಷ್ಟು ಮಂದಿ ಅವರನ್ನು ಸೇರಿಕೊಂಡರು. ಅವರೆಲ್ಲ ಬೋಗಿಯನ್ನು ಅಲಂಕರಿಸಿದರು. ಕಿಟಕಿಯ ಪಕ್ಕ ಓದುತ್ತಾ ಕುಳಿತಿದ್ದ ನನ್ನನ್ನು ಎದ್ದು ಬೇರೆಡೆ ಕೂರು­ವಂತೆ ಕೇಳಿದರು. ನನ್ನ ಎದುರಿನ ಆಸನ ಖಾಲಿ ಇತ್ತು.

ಅಲ್ಲಿ ಕುಳಿತುಕೊಳ್ಳಲು ಹೇಳಿದೆ. ಅವರು ಒಪ್ಪಲಿಲ್ಲ. ಆ ಜಾಗದಲ್ಲಿ ಕನ್ನಡ ತಾಯಿಯ ಚಿತ್ರಕ್ಕೆ ಪೂಜೆ ಮಾಡಿ ರಾಜ್ಯೋತ್ಸವ ಆಚರಿಸುವುದಾಗಿಯೂ, ನಾನು ಕುಳಿತಿದ್ದ ಜಾಗ ಪೂಜಾ ಸಾಮಗ್ರಿಗಳನ್ನು ಇರಿಸಲು ಬೇಕೆಂದೂ ಹೇಳಿದರು. ರಾಜ್ಯೋತ್ಸವವನ್ನು ಸಾರ್ವಜನಿಕರಿಗೆ ತೊಂದರೆ­ಯಾಗ­ದಂತೆ ಅಚರಿಸಬೇಕೆಂದೂ, ಪೂಜೆ ಇತ್ಯಾದಿ ಖಾಸಗಿ ಆಚರಣೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಡೆಸಬಾರದೆಂದೂ ಹೇಳಿದೆ.

ಅವರು ನನ್ನ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರ­ಲಿಲ್ಲ. ಎದ್ದು ಬೇರೆಡೆ ಕುಳಿತೆ. ಪೂಜೆ ಮಾಡಿ ಬೋಗಿ­ಯಲ್ಲಿದ್ದವರಿಗೆಲ್ಲ ಪ್ರಸಾದ ಹಂಚಿದರು. ನಾನು ತೆಗೆದುಕೊಳ್ಳಲಿಲ್ಲ. ಅವರ ಪೂಜೆಯು ಕಚೇರಿಗಳಲ್ಲಿ ನಡೆಸುವ ಶುಕ್ರ­ವಾರದ ಪೂಜೆಗಿಂತ ಭಿನ್ನವಾಗಿರಲಿಲ್ಲ. ಅದರಲ್ಲಿ  ಕರ್ನಾ­ಟಕ ರಾಜ್ಯೋತ್ಸವದ ಯಾವ ಲಕ್ಷಣವೂ ಇರ­ಲಿಲ್ಲ.

ಪೂಜೆ ಬದಲು  ಸಹ ಪ್ರಯಾಣಿಕರಿಗೆ  ರಾಜ್ಯೋ­ತ್ಸವದ ಸಿಹಿ ಹಂಚಿ ಕನ್ನಡ ಪತ್ರಿಕೆಗಳು, ನಿಯತ­ಕಾಲಿಕಗಳು, ಪುಸ್ತಕಗಳನ್ನು ನೀಡಬಹುದು. ತಾವೂ ಓದ­ಬಹುದು (ಇಳಿಯುವಾಗ ಬೇರೆಯವರು ಓದಲು ಸಾಧ್ಯವಾಗುವಂತೆ ಅವನ್ನು ಹಿಂದಕ್ಕೆ ಪಡೆಯ-­ಬಹುದು). ಕನ್ನಡ ಭಾಷೆಯ ಬಗ್ಗೆ, ಕನ್ನಡಿಗರ ಬಗ್ಗೆ ಪ್ರೀತಿ ಹೆಚ್ಚಿಸುವ ಇತ್ಯಾತ್ಮಕ ಕಾರ್ಯಕ್ರಮಗಳನ್ನು ನಡೆಸುವುದು ಒಳ್ಳೆಯದಲ್ಲವೇ?
–ಪಂಡಿತಾರಾಧ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT