ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ದೇವ್‌ಗೆ ‘ಜೆಡ್‌’ ಭದ್ರತೆ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯೋಗಗುರು ರಾಮ್‌ದೇವ್‌ ಅವರಿಗೆ ಕೇಂದ್ರ ಸರ್ಕಾರ ‘ಜೆಡ್‌’ ಶ್ರೇಣಿಯ ಭದ್ರತೆ ಒದಗಿಸಿದೆ. ವಿರೋಧಿಗಳಿಂದ ಹಲ್ಲೆಗೆ ಒಳಗಾಗುವ ಸಂಭವ ಇರುವುದ­ರಿಂದ ಭದ್ರತೆ ಒದಗಿಸಲಾಗಿದೆ ಎಂದು ಕೇಂದ್ರ ಹೇಳಿದೆ.

ಭದ್ರತಾ ಸಂಸ್ಥೆಗಳಿಂದ ಮಾಹಿತಿ ಪಡೆದುಕೊಂಡ ನಂತರ ಮತ್ತು ಅವರಿಗೆ ಇರುವ ಬೆದರಿಕೆಗಳ ವಿಶ್ಲೇಷಣೆ ನಡೆಸಿ ಗೃಹ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈತನಕ ಉತ್ತರಾಖಂಡ ರಾಜ್ಯದೊಳಗೆ ಮಾತ್ರ ಅವರಿಗೆ ‘ಜೆಡ್‌’ ಶ್ರೇಣಿ ಭದ್ರತೆಗೆ ಅವಕಾಶ ಇತ್ತು. ಉತ್ತರಾಖಂಡ ಸರ್ಕಾರ ಈ ಭದ್ರತೆ ಒದಗಿಸುವ ನಿರ್ಧಾರ ಕೈಗೊಂಡಿತ್ತು. ತಕ್ಷಣದಿಂದಲೇ ಅರೆ ಸೇನಾ ಪಡೆಯೊಂದರ ಕಮಾಂಡೊ­ಗಳನ್ನು ರಾಮ್‌ದೇವ್‌ ಅವರ ರಕ್ಷಣೆಗೆ ನಿಯೋಜಿಸಲಾಗುವುದು. ದಿನದ 24 ಗಂಟೆಯೂ 40 ಸಿಬ್ಬಂದಿ ರಾಮ್‌ದೇವ್ ಅವರಿಗೆ ರಕ್ಷಣೆ ಒದಗಿಸಲಿದ್ದಾರೆ.

ಬಿಜೆಪಿಗೆ ನಿಕಟವಾಗಿರುವ ರಾಮ್‌ದೇವ್‌ ಅವರು ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT