ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ನಾಯಕ್‌ ಹೇಳಿಕೆಗೆ ಕೇಂದ್ರ ಸಚಿವ ಒತ್ತಾಸೆ

ರಾಮ ಮಂದಿರ ನಿರ್ಮಾಣ ಅಗತ್ಯ
Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್‌ ಹೇಳಿಕೆಯನ್ನು ಸಮ­ರ್ಥಿ­­­ಸಿ­­­­ಕೊಂಡಿರುವ ಕೇಂದ್ರ ಪ್ರವಾಸೋ­ದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ, ‘ರಾಮ ಈ ದೇಶದ ಆತ್ಮ’ ಎಂದು ಹೇಳಿದ್ದಾರೆ.

ಫೈಜಾಬಾದ್‌ನಲ್ಲಿ ಗುರುವಾರ ಅವಧ್ ವಿ.ವಿ ಘಟಿ­ಕೋ­ತ್ಸವದಲ್ಲಿ ಮಾತ­ನಾಡಿದ್ದ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್‌, ‘ಆದಷ್ಟು ಬೇಗ ರಾಮ ಮಂದಿರವನ್ನು ನಿರ್ಮಿಸಲೇಬೇಕು ಎಂಬುದು ಈ ದೇಶದ ನಾಗರಿಕರ ಆಶಯ’ ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮಾ, ‘ಅಯೋಧ್ಯೆ ಎಂದರೆ ರಾಮ. ರಾಮ ಈ ದೇಶದ ಆತ್ಮ. ಈ ವಿಚಾರದಲ್ಲಿ ಈಗ ಏನೋ ತಪ್ಪು ಘಟಿಸಿದೆ. ಶಾಸನಬದ್ಧ ಸ್ಥಾನ­ದಲ್ಲಿರುವ ರಾಜ್ಯಪಾಲರು ರಾಮ ಮಂದಿರ ನಿರ್ಮಿಸ­ಬೇಕು ಎಂಬ ತಮ್ಮ ಭಾವನೆ­­ಯನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸು­ವುದು ಜನರಿಗೆ ಬಿಟ್ಟ ವಿಚಾರ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಆಗ್ರಾದಲ್ಲಿ ನಡೆದ ಸಾಮೂಹಿಕ ಮತಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಲವಂತದ ಸಾಮೂಹಿಕ ಮತಾಂತ­ರಕ್ಕೆ ದೇಶದಲ್ಲಿ ಅವಕಾಶವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ನಿಚ್ಚಳ. ರಾಜ್ಯ ಸರ್ಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲಿ ನಮ್ಮ ಪಕ್ಷಕ್ಕೇನೂ ಕೆಲಸವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT