ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ಗೆ ಐದನೇ ಜಯ

ಮಹೇಂದ್ರ ಸಿಂಗ್‌ ದೋನಿ ಬಳಗಕ್ಕೆ ಸೋಲಿನ ಕಹಿ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ರಾಜಸ್ತಾನ ರಾಯಲ್ಸ್ ತಂಡದ ಜಯದ ನಾಗಾಲೋಟ ಭಾನುವಾರ ಅಹಮ ದಾಬಾದಿನಲ್ಲಿಯೂ ಮುಂದುವರಿಯಿತು.

ಆರಂಭಿಕ ಜೋಡಿ ಅಜಿಂಕ್ಯ ರಹಾನೆ  (76; 55ಎ, 6ಬೌಂ, 2ಸಿ)ಮತ್ತು ಶೇನ್ ವಾಟ್ಸನ್ (73; 47ಎ, 6ಬೌಂ, 4ಸಿ) ದಾಖಲೆಯ ಜೊತೆಯಾಟದಿಂದ ರಾಜಸ್ತಾನ ರಾಯಲ್ಸ್‌ ಈ ಬಾರಿಯ ಐಪಿಎಲ್‌ನಲ್ಲಿ ಸತತ ಐದನೇ ಗೆಲುವು ಸಾಧಿಸಿತು.  ಮಹೇಂದ್ರಸಿಂಗ್ ದೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ಮೊಟೇರಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ನುಗಳನ್ನು ಗಳಿಸಿತು.

ನಂತರ ರಾಯಲ್ಸ್‌ನ ಅಜಿಂಕ್ಯ ರಹಾನೆ ಮತ್ತು ವಾಟ್ಸನ್ ಮೊದಲ ವಿಕೆಟ್‌ಗೆ 144 ರನ್ನುಗಳನ್ನು ಸೇರಿಸಿ ಗೆಲುವಿನ ಹಾದಿಯನ್ನು ಸುಗಮಗೊ ಳಿಸಿದರು.  2009ರಲ್ಲಿ ರಾಯಲ್ಸ್ ತಂಡದ ಗ್ರೆಮ್ ಸ್ಮಿತ್ ಮತ್ತು ನಮನ್ ಓಜಾ ಗಳಿಸಿದ್ದ 135 ರನ್ನುಗಳ ಪಾಲುದಾರಿಕೆ ದಾಖಲೆಯನ್ನು ಅಳಿಸಿಹಾಕಿದರು.

ಇದರಿಂದಾಗಿ ಇನ್ನೂ 10 ಎಸೆತಗಳು ಬಾಕಿಯಿರುವಾಗಲೇ ತಂಡವು ಜಯದ ನಗೆ ಬೀರಿತು.  ರಹಾನೆ ಈ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಗಳಿಸಿ ಮಿಂಚಿದರು. 

ಉರಿಬಿಸಿಲಿನ ವಾತಾವರಣದಲ್ಲಿ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡವು ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡಿತ್ತು. ಚೆನ್ನೈ ತಂಡದ ಆರಂಭ ಚೆನ್ನಾಗಿರಲಿಲ್ಲ.  65 ರನ್ನುಗಳು ಸೇರುವಷ್ಟರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರು. ಅದರಲ್ಲಿ ಡ್ವೇನ್ ಸ್ಮಿತ್ ಮಾತ್ರ 40 ರನ್ನುಗಳ ಕಾಣಿಕೆ ನೀಡಿದ್ದರು.

ನಂತರ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ ಡ್ವೆನ್ ಬ್ರಾವೊ (ಔಟಾಗದೆ 62; 36ಏ, 8ಬೌಂ, 1ಸಿ) ಮತ್ತು ನಾಯಕ ದೋನಿ (ಔಟಾಗದೆ 31; 37ಎ, 4ಬೌಂ) 92 ರನ್ನುಗಳನ್ನು ಸೇರಿಸಿ, ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು.

ಆದರೆ, ಚೆನ್ನೈ ಬೌಲಿಂಗ್ ಪಡೆಯು ರಾಯಲ್ಸ್ ಬ್ಯಾಟಿಂಗ್ ಮುಂದೆ ನಿರುತ್ತರವಾಯಿತು. ಅಜಿಂಕ್ಯ ಮತ್ತು ವಾಟ್ಸನ್ ಜೋಡಿಯಾಟ ರಂಗೇರಿತು.

ಸ್ಕೋರ್ ಕಾರ್ಡ್

ಚೆನ್ನೈ ಸೂಪರ್‌ ಕಿಂಗ್ಸ್‌  4ಕ್ಕೆ 156 (20 ಓವರ್‌)

ಡ್ವೇನ್‌ ಸ್ಮಿತ್‌ ಬಿ ಜೇಮ್ಸ್‌ ಫಾಕ್ನರ್‌  40
ಬ್ರೆಂಡನ್ ಮೆಕ್ಲಮ್‌ ಸಿ ಜೇಮ್ಸ್‌ ಫಾಕ್ನರ್‌ ಬಿ ಪ್ರವೀಣ್‌ ತಾಂಬೆ  12
ಸುರೇಶ್ ರೈನಾ ಸಿ ಸಂಜು ಸ್ಯಾಮ್ಸನ್‌ ಬಿ ಕ್ರಿಸ್‌ ಮಾರಿಸ್‌  04
ಫಾಫ್‌ ಡು ಪ್ಲೆಸಿಸ್‌ ಸಿ ಕ್ರಿಸ್‌ ಮಾರಿಸ್‌ ಬಿ ಅಂಕಿತ್ ಶರ್ಮಾ  01
ಡ್ವೇನ್‌ ಬ್ರಾವೊ ಔಟಾಗದೆ  62
ಮಹೇಂದ್ರ ಸಿಂಗ್‌ ದೋನಿ ಔಟಾಗದೆ  31
ಇತರೆ:  (ಲೆಗ್‌ ಬೈ–2, ವೈಡ್‌–4) 06
ವಿಕೆಟ್‌ ಪತನ: 1–15 (ಮೆಕ್ಲಮ್‌; 2.2), 2–38 (ರೈನಾ; 5.3), 3–39 (ಪ್ಲೆಸಿಸ್‌; 6.2), 4–65 (ಸ್ಮಿತ್‌; 9.1)
ಬೌಲಿಂಗ್‌: ಅಂಕಿತ್‌ ಶರ್ಮಾ 3–0–26–1, ಕ್ರಿಸ್ ಮಾರಿಸ್‌ 4–0–19–1, ಪ್ರವೀಣ್‌ ತಾಂಬೆ 4–0–36–1, ದೀಪಕ್‌ ಹೂಡಾ 2–0–22–0, ಜೇಮ್ಸ್‌ ಫಾಕ್ನರ್‌ 4–0–26–1, ಸ್ಟುವರ್ಟ್‌ ಬಿನ್ನಿ 1–0–5–0, ಶೇನ್‌ ವಾಟ್ಸನ್‌ 2–0–20–0.

ರಾಜಸ್ತಾನ ರಾಯಲ್ಸ್‌ 2ಕ್ಕೆ 157 (20 ಓವರ್‌)
ಅಜಿಂಕ್ಯ ರಹಾನೆ ಔಟಾಗದೆ  76
ಶೇನ್ ವಾಟ್ಸನ್ ಬಿ ರವೀಂದ್ರ ಜಡೇಜಾ  73
ಡ್ವೆನ್ ಸ್ಮಿತ್ ಸಿ ಮತ್ತು ಬಿ ಬ್ರಾವೊ  06
ಕರುಣ್ ನಾಯರ್ ಔಟಾಗದೆ  01
ಇತರೆ: (ವೈಡ್ 1)  01
ವಿಕೆಟ್‌ ಪತನ: 1–144 (ವಾಟ್ಸನ್: 16.1), 2–156 (ಸ್ಮಿತ್: 18.1)
ಬೌಲಿಂಗ್‌:  ಈಶ್ವರ್ ಪಾಂಡೆ 2–0–12–0, ಆಶಿಶ್ ನೆಹ್ರಾ 4–0–32–0 (ವೈಡ್ 1), ಮೋಹಿತ್ ಶರ್ಮಾ 4–0–33–0, ರವೀಂದ್ರ ಜಡೇಜಾ 4–0–29–1, ಆರ್. ಅಶ್ವಿನ್ 2–0–21–0, ಡ್ವೆನ್ ಬ್ರಾವೋ 2.2–0–30–1

ಫಲಿತಾಂಶ: ರಾಜಸ್ತಾನ್ ರಾಯಲ್ಸ್‌ ತಂಡಕ್ಕೆ 8 ವಿಕೆಟ್‌ಗಳ ಜಯ
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT