ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕವಿ ಆಯ್ಕೆ 13ರಂದು ಅಂತಿಮ?

Last Updated 10 ಮಾರ್ಚ್ 2015, 20:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರಾಷ್ಟ್ರಕವಿ ಗೌರವಕ್ಕೆ ಆಯ್ಕೆ­ಯಾಗುವ ಕವಿ­ ಹೆಸರು ಇದೇ 13ರಂದು  (ಶುಕ್ರವಾರ) ಬಹುತೇಕ ಅಂತಿಮ­ವಾಗುವ ಸಾಧ್ಯತೆ ಇದೆ.

ರಾಷ್ಟ್ರಕವಿ ಆಯ್ಕೆಗೆ ರಚಿಸಲಾಗಿರುವ ಡಾ. ಕೋ. ಚೆನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿಯು 13ರಂದು ಸಭೆ ಸೇರಲಿದ್ದು, ಅಂದೇ ಅಂತಿಮ ನಿರ್ಧಾರ ಅಂದು ತೆಗೆದು­ಕೊಳ್ಳುವ ಸಾಧ್ಯತೆ ಇದೆ ಎಂದು ಸಮಿತಿಯ ಪದ ನಿಮಿತ್ತ ಸದಸ್ಯ­ರಾಗಿರುವ ಡಾ.ಬಂಜಗೆರೆ ಜಯಪ್ರಕಾಶ್‌ ಹೇಳಿದರು.

96 ಪ್ರತಿಕ್ರಿಯೆಗಳು

ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ಸಾರ್ವಜನಿಕ­ರಿಂದ 96 ಅಭಿಪ್ರಾಯಗಳು ಬಂದಿವೆ. ಮೂವರು ಇಂತಹ ಆಯ್ಕೆಯೇ ಬೇಡ ಎಂದು ಪ್ರತಿಪಾದಿಸಿ­ದ್ದಾರೆ. ಜೊತೆಗೆ, ಸೂಕ್ತ ವ್ಯಕ್ತಿಯನ್ನು ಶಿಫಾರಸು ಮಾಡುವಂತೆ 130 ವಿದ್ವಾಂಸರಿಗೆ ಸಮಿತಿ ಕೋರಿತ್ತು. 26 ಮಂದಿ ಪ್ರತಿ­ಕ್ರಿಯಿಸಿ­ದ್ದಾರೆ. ಏಳು ಮಂದಿ ರಾಷ್ಟ್ರಕವಿ ಆಯ್ಕೆಯೇ ಬೇಡ ಎಂದು ಅಭಿಪ್ರಾಯ ಪಟ್ಟಿದ್ದಾರೆ.
–ಡಾ. ಬಂಜಗೆರೆ ಜಯಪ್ರಕಾಶ್

ಮಂಗಳವಾರ ಮಾಧ್ಯಮ ಪ್ರತಿನಿಧಿ­ಗಳೊಂದಿಗೆ ಮಾತನಾಡಿದ ಅವರು, ‘ಒಂಬತ್ತು ಮಂದಿಯ ಹೆಸರು ಪ್ರಮುಖ­ವಾಗಿ ಕೇಳಿ ಬರುತ್ತಿದೆ. ಅದರಲ್ಲಿ ಮೂವರು ಹಿರಿಯರ ಹೆಸರು ಮುಂಚೂಣಿಯಲ್ಲಿದೆ’ ಎಂದರು.

‘ರಾಷ್ಟ್ರಕವಿ ಆಯ್ಕೆ ಕುರಿತಂತೆ ಸಮಿತಿಯಲ್ಲೇ ಭಿನ್ನ ಅಭಿಪ್ರಾಯ­ಗಳು ಕೇಳಿ ಬಂದಿವೆ. ಹಾಗಾಗಿ ಆಯ್ಕೆ ನಿಧಾನ­ವಾಗಿದೆ. ಇಂತಹ ಬಿರುದು ಬಾವಲಿಗಳ ಅಗತ್ಯವಿದೆಯೇ ಎಂದು ಕೆಲವರು ಅಭಿಪ್ರಾಯಪಟ್ಟರೆ, ‘ರಾಷ್ಟ್ರಕವಿ’ ಯಾಕೆ? ‘ನಾಡಕವಿ’ ಎಂದು ಕರೆದರೆ ಆಗುವುದಿಲ್ಲವೇ ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ’ ಎಂದರು.

‘ಈ ಗೌರವಕ್ಕೆ ಕವಿಗಳೇ ಆಗಬೇಕೆ? ಕವಯಿತ್ರಿಗಳು ಆಗುವುದಿಲ್ಲವೇ? ಇತರ ಸಾಹಿತಿಗಳನ್ನು ಪರಿಗಣಿಸಲು ಸಾಧ್ಯ­ವಿಲ್ಲವೇ? ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ’ ಎಂದರು.

ನಿಯಮಗಳ ರಚನೆ: ಅರ್ಹರನ್ನು ಆಯ್ಕೆ ಮಾಡುವ ಸವಾಲು ಸಮಿತಿಯ ಮುಂದಿದೆ. ಇದರ ಜೊತೆಗೆ ರಾಷ್ಟ್ರಕವಿ ಆಯ್ಕೆಗೆ ಮಾನದಂಡ ಅಥವಾ ನಿಯಮಗಳನ್ನು ರಚಿಸಿ ಸಮಿತಿಯು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT