ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆ

Last Updated 31 ಅಕ್ಟೋಬರ್ 2014, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ­ಗಳಾದ ಗುರುಶ್ರೀ ಭಟ್, ಆದಿತ್ಯ ಜಿ. ಶೇಟ್ ಹಾಗೂ ರೂಪೇಶ್ ಎಂ. ೧೯ ವರ್ಷಗಳ ಒಳಗಿನ ಸಿ.ಬಿ.ಎಸ್.ಸಿ. ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

ಇತ್ತೀಚೆಗೆ ಬೀದರ್‌ನ ಹುಮನಾ­ಬಾದ್‌ನಲ್ಲಿ ನಡೆದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಾಗೀಯ ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಗುರುಶ್ರೀ ಭಟ್, ಹೈ ಜಂಪ್‌ನಲ್ಲಿ ಮೊದಲ ಮತ್ತು ಲಾಂಗ್ ಜಂಪ್‌ನಲ್ಲಿ ತೃತೀಯ ಸ್ಥಾನದಲ್ಲಿ, ಆದಿತ್ಯ ಶೇಟ್ ಶಾಟ್‌ಪಟ್‌ನಲ್ಲಿ ಪ್ರಥಮ ಮತ್ತು ಡಿಸ್ಕಸ್‌್ ಥ್ರೂದಲ್ಲಿ ತೃತೀಯ ಸ್ಥಾನ, ಮತ್ತು  ರೂಪೇಶ್ ಎಂ. ೫೦೦೦ ಮೀಟರ್ ರನ್ನಿಂಗ್ ರೇಸ್‌ನಲ್ಲಿ ದ್ವಿತೀಯ ಮತ್ತು ೧೫೦೦ ಮೀಟರ್ ರನ್ನಿಂಗ್ ರೇಸ್‌ನಲ್ಲಿ ತೃತೀಯ ಸ್ಥಾನದಲ್ಲಿ ಗೆದ್ದಿದ್ದಾರೆ. ಜನವರಿಯಲ್ಲಿ  ಗುಜರಾತ್‌­ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆ ಬಗ್ಗೆ ವಾಗ್ದೇವಿ ಸಂಸ್ಥೆಯ ಅಧ್ಯಕ್ಷ ಕೆ. ಹರೀಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT