ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಮೌಲ್ಯ 2 ವರ್ಷದಲ್ಲೇ ಕನಿಷ್ಠ

Last Updated 27 ನವೆಂಬರ್ 2015, 13:10 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವು ಶುಕ್ರವಾರ 19 ಪೈಸೆಗಳಷ್ಟು ಕುಸಿತ ಕಂಡಿದ್ದು 2 ವರ್ಷಗಳಲ್ಲೇ ಕನಿಷ್ಠ ಮೌಲ್ಯವಾದ ₹ 66.76 ತಲುಪಿದೆ.

2013ರ ಸೆಪ್ಟೆಂಬರ್‌ನಲ್ಲಿ ರೂಪಾಯಿ ಮೌಲ್ಯ ₹ 67.07ಕ್ಕೆ ಕುಸಿದಿತ್ತು. ಇದು ಇದುವರೆಗಿನ ಕನಿಷ್ಠ ಮೌಲ್ಯವಾಗಿತ್ತು.
ಕಳೆದ 2 ದಿನಗಳಲ್ಲಿ ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ 44 ಪೈಸೆಗಳಷ್ಟು ಅಂದರೆ ಶೇ 0.66ರಷ್ಟು ಅಪಮೌಲ್ಯಗೊಂಡಿದೆ. 

ಬ್ಯಾಂಕುಗಳು ಮತ್ತು ಆಮದುದಾರರಿಂದ ಡಾಲರ್‌ ಬೇಡಿಕೆ ಹೆಚ್ಚಿರುವುದರಿಂದ ರೂಪಾಯಿ ವಿನಿಮಯ ಮೌಲ್ಯ ದಿಢೀರ್‌ ಇಳಿಕೆ ಕಂಡಿದೆ.

ರಷ್ಯಾ ಯುದ್ದ ವಿಮಾನವನ್ನು ಟರ್ಕಿ ಹೊಡೆದುರುಳಿಸಿದ ನಂತರ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿದೆ. ಇದರ ಜತೆಗೆ ಡಿಸೆಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ಅಮೆರಿಕ ಮತ್ತು ಯೂರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ಗಳ ನೀತಿ ನಿರೂಪಣೆ  ಸಭೆ ಕುರಿತ ವರದಿಗಳು ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ಅಸ್ಥಿರತೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT