ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ದುರಂತ: 14 ಸಾವು

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಸಂತ ಕಬೀರ ನಗರ/ಉತ್ತರಪ್ರದೇಶ:  ಸರಕು ಸಾಗಣೆ ರೈಲಿಗೆ ಗೋರಖ್‌­ಧಾಮ್‌ ಎಕ್ಸ್‌­ಪ್ರೆಸ್‌ ರೈಲು ಡಿಕ್ಕಿ ಹೊಡೆದು ಕನಿಷ್ಠ 14 ಪ್ರಯಾಣಿಕರು ಮೃತಪಟ್ಟು, 100 ಮಂದಿ ಗಾಯ­ಗೊಂಡಿ­­ರುವ ಘಟನೆ ಉತ್ತರಪ್ರದೇಶದ ಸಂತ ಕಬೀರ ನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನೆಯಲ್ಲಿ 40 ಮಂದಿ ಸತ್ತಿದ್ದಾರೆ. ಜಿಲ್ಲೆಯ ಚುರೆಬ್‌ ರೈಲು ನಿಲ್ದಾಣದ ಸಮೀಪ ಸೋಮ­ವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ.

‘ಗೋರಖ್‌ಧಾಮ್‌ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ, ಗೂಡ್ಸ್‌ ರೈಲು ಚಲಿಸು­­ತ್ತಿದ್ದ ಮಾರ್ಗದಲ್ಲಿ ಬಂದಿದ್ದೇ ಈ ದುರ್ಘಟನೆಗೆ ಕಾರಣವಾಗಿದ್ದು, ಎಕ್ಸ್‌­ಪ್ರೆಸ್‌ನ ಮೊದಲ ಬೋಗಿ ಸಂಪೂರ್ಣ­ವಾಗಿ ಹಾನಿಗೊಂಡಿದೆ’ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ‘ಘಟನೆಯಲ್ಲಿ ಎಕ್ಸ್‌ಪ್ರೆಸ್‌ನ 2 ಸಾಮಾನ್ಯ ಬೋಗಿ, ಎರಡು ಹವಾನಿ­ಯಂ­ತ್ರಿತ (ಎಸಿ), ಎಸಿ ಮೊದಲ ದರ್ಜೆ ಬೋಗಿ ಸೇರಿದಂತೆ ಒಟ್ಟು ಆರು ಬೋಗಿ­ಗಳು ಗೂಡ್ಸ್‌ ರೈಲಿಗೆ ಅಪ್ಪಳಿಸಿವೆ’ ಎಂದು ಜಿಲ್ಲಾಧಿಕಾರಿ ಭರತ್‌ಲಾಲ್‌ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಕರ್ತರು ಹಾಗೂ ವೈದ್ಯರ ತಂಡ ಘಟನಾ ಸ್ಥಳಕ್ಕೆ ತೆರ­ಳಿದ್ದು, ಗಾಯಗೊಂಡವರನ್ನು ಚಿಕಿತ್ಸೆ­ಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸ­ಲಾಗಿದೆ.

ಪರಿಹಾರ ಘೋಷಣೆ: ದುರಂತದಲ್ಲಿ ಮೃತ­ಪಟ್ಟಿ­ರುವ ಕುಟುಂಬಕ್ಕೆ ₨ 1 ಲಕ್ಷ, ಗಂಭೀರವಾಗಿ ಗಾಯ­ಗೊಂಡವರಿಗೆ ₨ 50 ಸಾವಿರ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ ₨ 10 ಸಾವಿರ ಪರಿಹಾ­ರ­­ವನ್ನು ರೈಲ್ವೆ ಇಲಾಖೆ ಘೋಷಿಸಿದೆ.

ತನಿಖೆಗೆ ಆದೇಶ: ಘಟನೆ ಕುರಿತು ತನಿ­ಖೆಗೆ ಆದೇಶಿ­ರುವ  ರೈಲ್ವೆ ಮಂಡಳಿ ಮುಖ್ಯಸ್ಥ ಅರುಣೇಂದ್ರ ಕುಮಾರ್‌, ‘ದುರಂತ­­ದಲ್ಲಿ ಸಂಭವಿಸಿರುವ ಸಾವು– ನೋವು ಕುರಿತು ನಿಖರ ಮಾಹಿತಿಯನ್ನು ಕಲೆ­ಹಾಕ­ಲಾ­ಗುತ್ತಿದೆ’ ಎಂದು ಹೇಳಿದ್ದಾರೆ. ‘ರೈಲ್ವೆ ಸುರಕ್ಷತಾ ಆಯುಕ್ತ ಪಿ.ಕೆ. ಬಾಜಪೇಯಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದೆ.

ಮೋದಿ ಸಂತಾಪ: ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಘಟನಾ ಸ್ಥಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಗಾಯಾಳುಗಳಿಗೆ ಸೂಕ್ತ ನೆರವು ದೊರೆಯುವಂತೆ ನೋಡಿಕೊ­ಳ್ಳಲು ಸಂಪುಟ ಕಾರ್ಯದರ್ಶಿ ಅಜೀತ್‌ ಸೇಠ್‌ ಅವರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT