ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ: ಖಾಸಗಿ ಹೂಡಿಕೆಗೆ ರತ್ನಗಂಬಳಿ?

Last Updated 6 ಜುಲೈ 2014, 19:34 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರ ಹೇಳುತ್ತಿರುವಂತೆ ಹೈ ಸ್ಪೀಡ್‌ ರೈಲುಗಳು, ಜಾಗತಿಕ ಗುಣ­ಮಟ್ಟದ ನಿಲ್ದಾಣಗಳು ಮತ್ತು ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಿದ್ದೇ ಆದರೆ ರೈಲ್ವೆ ವಲಯದಲ್ಲಿ ದೇಶೀಯ ಮತ್ತು ವಿದೇಶಿ ಖಾಸಗಿ ಪಾಲುದಾರಿಕೆ  (ಎಫ್‌ಡಿಐ) ಗಮನಾರ್ಹವಾಗಿ ಆದ್ಯತೆ ಪಡೆಯುವ ಲಕ್ಷಣಗಳಿವೆ. ಈ ಮೂಲಕ ಜುಲೈ 8ರಂದು (ಮಂಗಳವಾರ) ಮಂಡನೆ­ಯಾಗಲಿರುವ ರೈಲ್ವೆ ಬಜೆಟ್‌­ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಛಾಪು ಕಂಡುಬರುವ ಸಾಧ್ಯತೆ ಇದೆ.

ಬಜೆಟ್‌ನಲ್ಲಿ ಪ್ರಸ್ತಾಪಗೊಳ್ಳಬೇಕಾದ ಪ್ರತಿಯೊಂದು ಸಂಗತಿಯ ಬಗ್ಗೆಯೂ ಪ್ರಧಾನಿ ಮೋದಿ ಅವರು ರೈಲ್ವೆ ಸಚಿವ ಸದಾನಂದ ಗೌಡರಿಗೆ ವಿವರವಾಗಿ ಸೂಚನೆಗಳನ್ನು ನೀಡುತ್ತಿದ್ದಾರೆ.

ಆ ಪ್ರಕಾರ, ಸದಾನಂದ ಗೌಡ ಅವರೂ ಎಲ್ಲಾ ವಿಭಾಗಗಳ ಪ್ರಮುಖರ ಜತೆ ಸಭೆ ನಡೆಸಿ, ಭವಿಷ್ಯದಲ್ಲಿ ರೈಲ್ವೆ ಇಲಾಖೆ ಕಾರ್ಯನಿರ್ವಹಣೆ ಬಗ್ಗೆ ಮೋದಿ ಅವರಿಗೆ ಇರುವ ಚಿಂತನೆಗಳೇನು ಎಂಬುದನ್ನು ವಿವರಿಸುತ್ತಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT