ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಸುಧಾರಣೆಗೆ ಕಠಿಣ ಕ್ರಮ: ಕೇಂದ್ರ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ರೈಲ್ವೆ ಇಲಾಖೆಗೆ ಸಂಪೂರ್ಣ ಹೊಸರೂಪ ನೀಡಿ, ಲಾಭ ದತ್ತ ಕೊಂಡೊಯ್ಯಲು  ಕೆಲವು ಕಠಿಣ ಕ್ರಮಗಳನ್ನು  ತೆಗೆದು­ಕೊಳ್ಳುವ ಸುಳಿ ವನ್ನು ಕೇಂದ್ರ ಸರ್ಕಾರ ಮಂಗಳವಾರ ನೀಡಿದೆ.

ರೈಲ್ವೆ ಸಮಾ­ವೇಶದಲ್ಲಿ ಮಾತನಾ­ಡಿದ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ, ರೈಲ್ವೆ ಇಲಾಖೆಗೆ ಕಾಯಕಲ್ಪ ಕಲ್ಪಿಸಬೇಕಾದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳು ವುದು   ಅನಿವಾರ್ಯ ಎಂದರು. ರೈಲ್ವೆ ಇಲಾಖೆಯನ್ನು ಸದೃಢ­ಗೊಳಿಸುವ ಉದ್ದೇಶ ದಿಂದಲೇ ಕಳೆದ ರೈಲ್ವೆ ಬಜೆಟ್‌ನಲ್ಲಿ ಉದ್ದೇಶ­ಪೂರ್ವಕ­ವಾಗಿ  ಯಾವುದೇ ಜನಪ್ರಿಯ ಯೋಜ­ನೆ­­ಗಳನ್ನು ಘೋಷಿ­ಸಿರಲಿಲ್ಲ ಎಂದರು.
ಆರ್ಥಿಕ ತೊಂದರೆಯಲ್ಲಿರುವ ರೈಲ್ವೆ ಇಲಾಖೆಯಲ್ಲಿ ಸುಧಾರಣೆ ತರುವುದು  ಪ್ರಧಾನಿ ನರೇಂದ್ರ ಮೋದಿ ಕನಸು. ಆ ಕನಸನ್ನು ನನಸಾಗಿಸುವ ಕಾಲ ಕೂಡಿ ಬಂದಿದೆ ಎಂದರು. 

ನಿರ್ದಿಷ್ಟವಾಗಿ ಎಂದಿನಿಂದ  ರೈಲ್ವೆ ವ್ಯವಸ್ಥೆ ಮರುರೂಪಿ­ಸುವ ಕಾರ್ಯ  ಆರಂಭವಾಗಲಿದೆ ಎಂಬುವು­ದನ್ನು ಅವರು ಬಹಿರಂಗಪಡಿಸಲಿಲ್ಲ. ಆದರೆ, ಸರ್ಕಾರ ತನ್ನ ಕಾರ್ಯ ಆರಂಭಿಸಿದಾಗ ಅದರ ಪರಿಣಾಮಗಳು ತಾವಾಗಿಯೇ ಗೋಚ­ರಿಸಲಿವೆ ಎಂದು ಹೇಳಿದರು.
 ‘ರೈಲ್ವೆ ಮಂಡಳಿಗೆ ಕಾಯಕಲ್ಪ ನೀಡಿ ಆದಾಯವನ್ನು ಹೆಚ್ಚಿಸಲು ಸರ್ಕಾರಕ್ಕೆ ಅಗತ್ಯ ಸಲಹೆ ನೀಡಲು ಇತ್ತೀಚೆಗೆ  ಖ್ಯಾತ ಅರ್ಥಶಾಸ್ತ್ರಜ್ಞ ವಿವೇಕ್‌ ದೆಬ್‌ರಾಯ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಿದೆ.   ಉಳಿದ ಕ್ಷೇತ್ರಗಳಲ್ಲಾಗುವ ತ್ವರಿತ ಬದಲಾವಣೆ ರೈಲ್ವೆಯಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿರುವ ನಾವು ಇದೀಗ ಆ ಕೆಲಸಕ್ಕೆ ಹೈಹಾಕಿದ್ದೇವೆ’ ಎಂದರು.

ರೈಲ್ವೆಯಲ್ಲಿ ಖಾಸಗಿ ಸಹಭಾಗಿತ್ವ ಕುರಿತು ಪ್ರಸ್ತಾಪಿಸಿದ ಅವರು, ‘ಸರ್ಕಾ ರದ ಉದ್ಯಮಸ್ನೇಹಿ ನೀತಿ ಯನ್ನು ಅನುಸರಿಸುತ್ತಿದೆ ಎಂದಾಕ್ಷಣ  ಬಡವರ ವಿರೋಧಿ ಎಂದು ಅರ್ಥೈಸ­ಬೇಕಿಲ್ಲ. ಉದ್ಯಮಗಳ ಒಡನಾಟದಿಂದ ಒಳ್ಳೆಯದೇ ಆಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT