ನವದೆಹಲಿ (ಪಿಟಿಐ): ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ವಿಶ್ವ ಕ್ರಮಾಂಕದಲ್ಲಿ ಗುರುವಾರ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಆದರೆ ಉದಯೋನ್ಮುಖ ಆಟಗಾರ್ತಿ ಪಿ.ವಿ.ಸಿಂಧು ಅವರು ಒಂದು ಸ್ಥಾನ ಕುಸಿದು 11ನೇ ಸ್ಥಾನದಲ್ಲಿದ್ದಾರೆ.

ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ಅವರು ಆಸ್ಟ್ರೇಲಿಯಾ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಜಯಸಿದ್ದರು. ಆದರೆ ಸಿಂಧು ಅವರ ಸವಾಲು ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯ ಕಂಡಿತ್ತು.

ಮಹಿಳಾ ಸಿಂಗಲ್ಸ್ ಕ್ರಮಾಂಕ ಪಟ್ಟಿಯ ಮೊದಲಾರ್ಧ ಯಾವುದೇ ಬದಲಾವಣೆ ಆಗಿಲ್ಲ. ಎಂದಿನಂತೆ ಚೀನಾದ ಲೀ ಕ್ಸುರುಯ್, ಶಿಕ್ಸಿಯನ್ ವಾಂಗ್ ಹಾಗೂ ಯಿಹಾನ್ ವಾಂಗ್ ಅವರು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಥಾಯ್ಲೆಂಡಿನ ರಾಚನಾಕ್ ಇಂಟನಾನ್ ಹಾಗೂ ದಕ್ಷಿಣ ಕೊರಿಯಾದ ಜಿ ಹ್ಯುನ್ ಸಂಗ್ ಅವರು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಿ.ಕಶ್ಯಪ್ ಅವರು ಒಂದು ಸ್ಥಾನ ಕುಸಿತ ಕಂಡು 21ನೇ ಸ್ಥಾನದಲ್ಲಿದ್ದು, ಲೀ ಚೊಂಗ್ ವೀ ಅವರು ಅಗ್ರಕ್ರಮಾಂಕದಲ್ಲಿ ಮುಂದುವರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.