ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖ್ವಿ ಮರುಬಂಧನ: ಮತ್ತೆ 3 ತಿಂಗಳು ಜೈಲುವಾಸ

ಪಾಕ್‌ ಸರ್ಕಾರ ಆದೇಶ
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ/ ಐಎಎನ್‌ಎಸ್‌): ಲಷ್ಕರ್‌–ಎ–ತಯಬಾ (ಎಲ್‌ಇಟಿ) ಕಾರ್ಯಾ­ಚರಣೆ ಮುಖ್ಯಸ್ಥ ಝಕಿವುರ್‌ ರೆಹ­ಮಾನ್‌ ಲಖ್ವಿಯನ್ನು (54) ಇನ್ನೂ 3 ತಿಂಗಳು ಜೈಲಿನಲ್ಲಿ ಇಡುವಂತೆ ಪಾಕಿ­ಸ್ತಾನ ಸರ್ಕಾರ ಶುಕ್ರವಾರ ಆದೇಶಿಸಿದೆ.


ಮುಂಬೈ ದಾಳಿಯ ಸಂಚುಕೋರ­ ಲಖ್ವಿಗೆ ಈ ದಾಳಿ ಪ್ರಕರಣದಲ್ಲಿ ಇಸ್ಲಾ­ಮಾ­ಬಾದ್‌ನ ಭಯೋ­­ತ್ಪಾದನಾ ಪ್ರಕ­ರಣಗಳ ವಿಶೇಷ ನ್ಯಾಯಾಲಯ ಗುರು­ವಾರವಷ್ಟೇ ಜಾಮೀನು ಮಂಜೂರು ಮಾಡಿತ್ತು. ಇದು ಭಾರತದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸರ್ಕಾರದ ಆದೇಶ ಹೊರಬೀಳು­ತ್ತಿದ್ದಂತೆಯೇ ಪೊಲೀಸರು ಲಖ್ವಿ ವಿರುದ್ಧ ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆ (ಎಂಪಿಒ) ಎಂಬ ಕಠಿಣ ಕಾನೂನಿ­ನಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ರಾವಲ್ಪಿಂಡಿಯ ಅಡಿಯಲಾ ಜೈಲಿ­ನಿಂದ ಲಖ್ವಿ ಶುಕ್ರವಾರ ಬೆಳಿಗ್ಗೆ ಬಿಡು­ಗಡೆ­ಯಾಗಬೇಕಿತ್ತು. ಆದರೆ ಆತನ ವಕೀ­ಲರು ಜಾಮೀನು ಮಂಜೂರಿ ದಾಖ­ಲಾತಿ ಪತ್ರವನ್ನು ಜೈಲು ಅಧಿ­ಕಾರಿ­ಗಳಿಗೆ ಸಲ್ಲಿ­­ಸುವು­ದಕ್ಕೂ ಮೊದಲೇ ಆತನ ಬಂಧ­ನಕ್ಕೆ ಸರ್ಕಾರ ಹೊರಡಿಸಿ­ರುವ ಆದೇಶ­ವನ್ನು ಜೈಲು ಅಧೀಕ್ಷಕರಿಗೆ ತಲುಪಿಸ­ಲಾಯಿತು’ ಎಂದು ಪ್ರಾಸಿ­ಕ್ಯೂಷನ್‌ ಮುಖ್ಯಸ್ಥ ಚೌಧರಿ ಅಜರ್‌ ತಿಳಿಸಿದ್ದಾರೆ.

ತಾಲಿಬಾನ್‌ ಉಗ್ರರು ಪೆಶಾವರದ ಶಾಲೆ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ ಮರು ದಿವಸವೇ ಲಖ್ವಿಗೆ ಜಾಮೀನು ಸಿಕ್ಕಿದ್ದು, ಪ್ರಧಾನಿ ನವಾಜ್‌ ಷರೀಫ್‌ ಅವರ ಸರ್ಕಾರಕ್ಕೆ ತೀವ್ರ ಮುಜು­­­ಗರ ಉಂಟು ಮಾಡಿತ್ತು. ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕ್‌ ನೀತಿಯನ್ನು ಭಾರತ ತೀವ್ರವಾಗಿ ಟೀಕಿಸಿತ್ತು.

ಲಖ್ವಿ ಬಿಡುಗಡೆ­ಯಾದರೆ ಆಗುವ ಮತ್ತಷ್ಟು ಮುಖ­ಭಂಗ­ವನ್ನು ತಪ್ಪಿಸುವ ಸಲುವಾಗಿ ಷರೀಫ್‌ ಅವರು ಲಖ್ವಿ­ಯನ್ನು ಪುನಃ ಬಂಧಿಸಲು ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಸೇನಾ ಶಾಲೆಯ ಮೇಲೆ ದಾಳಿ: ನಾಲ್ಕು ಮಂದಿ ವಶಕ್ಕೆ
ಪೆಶಾವರದ ಸೇನಾ ಶಾಲೆಯಲ್ಲಿ ನಡೆದ ಹತ್ಯಾಕಾಂಡದ ಸಂಬಂಧ ಮಹಿಳೆ ಸೇರಿದಂತೆ ಶಂಕಿತ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಸಂದರ್ಭದಲ್ಲಿ ಉಗ್ರರು ಬಳಸಿರುವ ಸಿಮ್‌ ಕಾರ್ಡ್‌ ಈ ಮಹಿಳೆ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT