ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಖಿತಾಳ ಭರವಸೆಯ ಹೆಜ್ಜೆಗಳು...

ನಾದ ನೃತ್ಯ
Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ವೇದ, ಯೋಗ, ಸ೦ಗೀತ ಈ ಮೂರು ಮೇಳೈಸಿದರೆ ಭರತನಾಟ್ಯ. ನೃತ್ಯದ ಸಾಧನೆಯನ್ನು ರ೦ಗಪ್ರವೇಶದ ಮೂಲಕ ಒರೆಗೆಹಚ್ಚಿಕೊಳ್ಳಲು ಬಯಸುವುದು ಒ೦ದು ಅವಿಸ್ಮರಣೀಯ ಗಳಿಗೆ.

ಶ್ರೀ ನಾಟ್ಯ ಕಲಾರ್ಪಣ ನೃತ್ಯ ಕೇ೦ದ್ರದ ಗುರು ಪದ್ಮಜ ಜಯರಾಮ್ ಅವರ ಬಳಿ ಕ್ರಮಬದ್ಧವಾದ ಶಿಕ್ಷಣವನ್ನು ಪಡೆದಿದ್ದಾರೆ ಲಿಖಿತಾ ನಾಗರಾಜ್. ಇವರ ಭರತನಾಟ್ಯ ರಂಗಪ್ರವೇಶವನ್ನು ಕಲಾಗ್ರಾಮದ ಸಭಾ೦ಗಣದಲ್ಲಿ ಆಯೋಜಿಸಲಾಗಿತ್ತು.  ಪುಷ್ಪಾ೦ಜಲಿ ಕೃತಿಯೊ೦ದಿಗೆ ಮೊದಲ ಹೆಜ್ಜೆಯ ಗೆಜ್ಜೆನಾದವನ್ನು ನೀಡಿದರು.

ಮು೦ದಿನ ನೃತ್ಯಭಾಗದಲ್ಲಿ ಜತಿಸ್ವದ ಆಯ್ಕೆ. ನೃತ್ಯವು ಶುದ್ಧ ಭಾವಾಭಿನಯ, ಅ೦ಗಾ೦ಗ ಚಲನೆಗಳ ತಾಳಬದ್ಧ ಮತ್ತು ಶುದ್ಧ ನೃತ್ತ ವಿನ್ಯಾಸಗಳಿ೦ದ ಕೂಡಿತ್ತು. ಕಲಾವಿದೆ ರಸಿಕರಿಗೆ ಅದನ್ನು ಅಚ್ಚುಕಟ್ಟಾಗಿ ನೀಡಿದರು. ‘ಶ೦ಕರ ಪರಮೇಶ್ವರ ಶಶಿಶೇಖರ’ ರಾವಣನು ಶಿವನನ್ನು ಪ್ರಾರ್ಥಿಸುವ ಮತ್ತು ಬೇಡರ ಕಣ್ಣಪ್ಪ ಶಿವನಿಗೆ ಕಣ್ಣನ್ನು ನೀಡುವ ಹಾಗೂ ಭಕ್ತ ಮಾರ್ಕ೦ಡೇಯ ಶಿವನ ಮನಸ್ಸನ್ನು ಗೆಲ್ಲುವ ಪ್ರಸ೦ಗ. ಈ ಭಾಗದಲ್ಲಿ ಅದು ಗಮನ ಸೆಳೆಯುವಂತೆ ಮೂಡಿಬ೦ತು ಈ ಶಬ್ದ೦ನಲ್ಲಿನ (ರಾಗ: ಮಾಲಿಕೆ- ತಾಳ ಮಿಶ್ರಚಾಪು, (ರಚನೆ: ಎನ್.ಚನ್ನಕೇಶವಯ್ಯ)  ಅಡವುಗಳು, ಲಯಗಳು ಪ್ರಬುದ್ಧತೆಯಿ೦ದ ಕೂಡಿದ್ದವು. ಅದಕ್ಕೆ ಅರ್ಥಪೂರ್ಣವಾಗಿ ಲಿಖಿತ ನೃತ್ತವನ್ನು ಅಭಿವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೇ೦ದ್ರಬಿ೦ದು ವರ್ಣ. ಶಿವನನ್ನು ವರ್ಣಿಸುವ ಈ ನೃತ್ಯಬ೦ಧವು (ರಚನೆ: ದ೦ಡಾಯುದ ಪಾಣಿಪಿಳೈ, ರಾಗ: ಮಾಲಿಕೆ, ಆದಿತಾಳ) ನವರಾಗದಲ್ಲಿ ಸ೦ಯೋಜನೆಗೊ೦ಡಿದ್ದು, ವಿಶಿಷ್ಟವಾಗಿತ್ತು. ಚುರುಕಾದ ಮತ್ತು ಕ್ಷಿಷ್ಟಕರವಾದ ಜತಿಗಳು, ಶುದ್ಧ ನೃತ್ಯ, ಶುದ್ಧ ಅಭಿನಯ ಮತ್ತು ಲಯಜ್ಞಾನಕ್ಕೆ ಕಲಾವಿದೆ ಅಭಿನ೦ದನಾರ್ಹಳು. ಈ ನೃತ್ಯದಲ್ಲಿ ಸ್ವಲ್ವ ಚೈತನ್ಯದ ಅಗತ್ಯವಿತ್ತು, ಮು೦ದಿನ ಪ್ರಸ್ತುತಿಯಲ್ಲಿ  ಜಾವಳಿ (ರಾಗ: ಕಮಾಚ್, ಆದಿತಾಳ) ‘ಮಾತನಾಡು ಮೊಹನಾ೦ಗನೆ’ ಕೃತಿಯಲ್ಲಿ ಶುದ್ಧ ಅಭಿನಯ ಮತ್ತು ಶೃ೦ಗಾರ ರಸವನ್ನ ಕಲಾವಿದೆ ಬಿ೦ಬಿಸಿದರು.

ದೇವರನಾಮ (ಸೌರಾಷ್ಟ್ರ, ಆದಿತಾಳ, ರಚನೆ: ಪುರ೦ದದಾಸರು) ‘ಅಮ್ಮ ನಿಮ್ಮ ಮನೆಯಲ್ಲಿ ಕೃಷ್ಣನನ್ನ ಕ೦ಡಿರಾ’ ಕೃತಿಗೆ  ಶ್ರೀಕೃಷ್ಣನ ಭಕ್ತಿಯ ಪರಾಕಾಷ್ಠೆಯನ್ನು ಕಲಾವಿದೆ ಸಹಜವಾಗಿ ನೃತ್ಯದ ಮೂಲಕ ಅಭಿನಯಿಸಿ ರಸಿಕರ ಮನ ತಣಿಸಿದರು. ತಿಲ್ಲಾನ ಹಾಗೂ ಮ೦ಗಳದೊ೦ದಿಗೆ (ರಚನೆ: ಸೀತಾರಾಮ್, ರಾಗ: ದ್ವಿಚಾವ೦ತಿ, ಆದಿತಾಳ)  ನೃತ್ಯ ಸ೦ಜೆ ಕಾರ್ಯಕ್ರಮವು ಸ೦ಪನ್ನವಾಯಿತು. ಮಿಂಚಿನ ಚಲನೆಯಿಂದ ಆಕರ್ಷಿಸಿ, ಭಾವಪೂರ್ಣ ಅಭಿನಯದಿಂದ ಪ್ರೇಕ್ಷಕರನ್ನು ರ೦ಜಿಸಿದರು.

ಮತ್ತಷ್ಟು  ಪರಿಶ್ರಮ ವಹಿಸಿದರೆ  ಒಬ್ಬ ಉತ್ತಮ ಕಲಾವಿದೆಯಾಗಿ ಲಿಖಿತಾ ಈ ನೃತ್ಯ  ಕ್ಷೇತ್ರದಲ್ಲಿ ಜೀವನವನ್ನು ರೂಪಿಸಿಕೊಳ್ಳಬಹುದು. ಈ ನೃತ್ಯಗಾತಿಗೆ ಪಕ್ಕವಾದ್ಯ ಸಹಕಾರವನ್ನು ನೀಡಿದ ಕಲಾವಿದರು: ಪದ್ಮಜ ಜಯರಾಮ್ (ನೃತ್ಯ ಸ೦ಯೋಜನೆ ಮತ್ತು ನಟುವಾಂಗ),    ಬಾಲಸುಬ್ರಮಣ್ಯ ಶರ್ಮಾ (ಹಾಡುಗಾರಿಕೆ), ಗುರುಮೂರ್ತಿ (ಮೃದಂಗ) , ಕಾರ್ತಿಕ ಆರ್. ಸಾತವಳ್ಳಿ (ಕೊಳಲು),     ಕಾರ್ತಿಕ್ ವೈದಾತ್ರಿ (ವಯೋಲಿನ್), ಸತೀಶ ಬಾಬು (ಪ್ರಸಾಧನ), ರವಿಶ೦ಕರ್ (ಬೆಳಕು).

ರ೦ಜನೆಯ ನೃತ್ಯ ಸೊಬಗು
ನಯನ ಸಭಾ೦ಗಣದಲ್ಲಿ ಭರತನಾಟ್ಯದ ಸೊಬಗನ್ನು ನೃತ್ಯ ಪ್ರೇಮಿಗಳು ಆನ೦ದಿಸುವ೦ತಾಯಿತು. ವಿ.ಆರ್.ಸಿ. ಅಕಾಡೆಮಿ ವತಿಯಿ೦ದ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಯುವ ಕಲಾವಿದರಿಗೆ ನೃತ್ಯಕ್ಕೆ ಅವಕಾಶವನ್ನು ಒದಗಿಸುವುದು ಮತ್ತು ಕಲೆಯನ್ನು ಒರೆಗೆಹಚ್ಚುವ ಕೆಲಸವನ್ನು ಮೃದ೦ಗ ವಿದ್ವಾನ್ ವಿ.ಆರ್.ಚ೦ದ್ರಶೇಖರ ನಡೆಸಿಕೊ೦ಡು ಬರುತ್ತಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ಈ ರೀತಿಯ ನೃತ್ಯ ಕಾರ್ಯಕ್ರಮವನ್ನು ರಸಿಕರಿಗೆ ಉಣಬಡಿಸುವುದು ಇದರ ಉದ್ದೇಶ. ಖ್ಯಾತ ನೃತ್ಯ ಕಲಾವಿದೆ  ಮತ್ತು ಹೆಸರಾ೦ತ ಗುರು  ಶ್ರೀರ೦ಜನಿ ಉಮೇಶ್  ನೃತ್ಯ ಪ್ರದರ್ಶನ ನೀಡಿದರು.  ಮೊದಲಿಗೆ ಸಾ೦ಪ್ರದಾಯಿಕ  ಪುಷ್ಪಾ೦ಜಲಿ (ಆರಭಿರಾಗ - ಆದಿತಾಳ) ಮತ್ತು ‘ಶ್ರೀ ಮಹಾಗಣಪತಿ’ (ನಾಟರಾಗ - ಆದಿತಾಳ) ಗಣೇಶ ಸ್ತುತಿ ಪ್ರಸ್ತುತಪಡಿಸಿದರು. ಮು೦ದಿನ ಭಾಗದಲ್ಲಿ ವರ್ಣವನ್ನು ಸಾದರಪಡಿಸಿದರು.

ಸುಬ್ರಹ್ಮಣ್ಯನ ಕುರಿತ ವರ್ಣವು ಬಲು ಸೊಗಸಾಗಿತ್ತು. ಅವರ ನೃತ್ತ, ನೃತ್ಯಗಳು ಅವರ ಸಾಧನೆಗೆ ಕನ್ನಡಿ ಹಿಡಿದವು (ರಾಗ: ವಲಚಿ, ಆದಿತಾಳ). ಮು೦ದಿನ ಭಾಗದಲ್ಲಿ ಕಲಾವಿದೆಯ ಆಯ್ಕೆ ದೇವರನಾಮ ‘ನಾನೇನು ಮಾಡಿದೆನು ರ೦ಗಯ್ಯ’ (ಪುರ೦ದರದಾಸರ ರಚನೆ, ರಾಗ: ಬೃ೦ದಾವನಿ, ಆದಿತಾಳ). ಸ೦ಚಾರಿ ಭಾಗದಲ್ಲಿ ಗಜೇ೦ದ್ರ ಮೋಕ್ಷ,ದ್ರೌಪದಿ ವಸ್ತ್ರಾಪಹರಣ ಮತ್ತು ಕೃಷ್ಣ-ಕುಚೇಲರ ಪ್ರೀತಿ, ಬಾ೦ಧವ್ಯವನ್ನು ಕಲಾವಿದೆ ವ್ಯಕ್ತಪಡಿಸಿದ ಕುಶಲತೆ ಶ್ಲಾಘನೀಯವಾಗಿತ್ತು. ಮು೦ದಿನ ಪ್ರಸ್ತುತಿ ಜಾವಳಿ (ರಾಗ: ಕಮಾಚ್, ಆದಿತಾಳ). ಈ ಕೃತಿಯಲ್ಲಿ  ಶೃ೦ಗಾರ ರಸವನ್ನ ಕಲಾವಿದೆ ಅಭಿವ್ಯಕ್ತಪಡಿಸಿದರು.

ಸ೦ಜೆಯ ಕೊನೆಯ ಪ್ರಸ್ತುತಿಯು  ತಿಲ್ಲಾನ ಹಾಗೂ ಮ೦ಗಳದ  ಭಾಗವನ್ನು ಒಳಗೊ೦ಡಿತ್ತು,  ಅವರ ಅಭಿನಯ, ನೃತ್ಯ, ನೃತ್ತ, ಅ೦ಗಶುದ್ಧಿ ಮತ್ತು ಕಾಲ್ಚಳಕ ಮನೋಹರವಾಗಿದ್ದವು. ಸ೦ಜೆಯ ಮಳೆಹನಿಯ ಗೊಡೆವೆಯಿಲ್ಲದೆ ಕಲಾರಸಿಕರು ನೃತ್ಯವನ್ನು ಆಹ್ಲಾದಿಸಿದರು. ಈ ನೃತ್ಯಗಾರರಿಗೆ  ಪಕ್ಕವಾದ್ಯ ಸಹಕಾರವನ್ನು ನೀಡಿದ ಕಲಾವಿದರು: ರೇವತಿ ನರಸಿ೦ಹನ್ (ನಟುವಾಂಗ), ಭಾರತಿ ವೇಣುಗೋಪಾಲ್ (ಗಾಯನ), ಗುರುಮೂರ್ತಿ (ಮೃದ೦ಗ), ಎಚ್.ಎಸ್. ವೇಣುಗೋಪಾಲ್ (ಕೊಳಲು), ಬೆಳಕು (ವಿನಯ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT