ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಗುಲಾಮರಿಗೆ ಗರ್ಭನಿರೋಧಕ

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ರಾಯಿಟರ್ಸ್): ಗರ್ಭಿಣಿಯರಾದರೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಕಷ್ಟವಾಗುತ್ತದೆ ಎಂಬ ಆಲೋಚನೆಯಿಂದ ಐಎಸ್ ಉಗ್ರರು ವಿವಿಧ ರೀತಿಯ ಗರ್ಭನಿರೋಧಕಗಳನ್ನು  ಬಳಸುವಂತೆ  ಮಹಿಳೆಯರಿಗೆ ಒತ್ತಾಯಿಸುತ್ತಿರುವ ವಿಷಯ ಬಯಲಾಗಿದೆ.

ಲೈಂಗಿಕ ಗುಲಾಮರ ಪೂರೈಕೆಗಾಗಿ ಐಎಸ್ ಇಂತಹ ಪೈಶಾಚಿಕ ಕೃತ್ಯಕ್ಕೆ ಮಹಿಳೆಯರನ್ನು ಪ್ರೇರೇಪಿಸುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್‌‘ ವರದಿ ಮಾಡಿದೆ. ಐಎಸ್‌ ಉಗ್ರರಿಂದ ತಪ್ಪಿಸಿಕೊಂಡು ಬಂದ  ಯಾಜಿಡಿ ಮಹಿಳೆಯರು ತಾವು ಅನುಭವಿಸಿದ ನೋವನ್ನು ಹೇಳಿಕೊಂಡಿದ್ದಾರೆ.  ಪತ್ರಿಕೆ ಮಹಿಳೆಯರ ನೋವಿನ ಕಥೆಯ ಸಂದರ್ಶನವನ್ನು ಪ್ರಕಟಿಸಿದೆ.

‘ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ವಿವಿಧ ರೀತಿಯ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಇಲ್ಲವೇ ಚುಚ್ಚುಮದ್ದು ರೂಪದ ಗರ್ಭನಿರೋಧಕಗಳನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತಾರೆ. ಕೆಲವು ಬಾರಿ ಎರಡನ್ನೂ ಉಪಯೋಗಿಸುವಂತೆ ಆಗ್ರಹಿಸುತ್ತಾರೆ. ಗರ್ಭಿಣಿಯರಾಗದಂತೆ ತಡೆದರೆ ಲೈಂಗಿಕ ವಾಂಛೆಗೆ ಅಡ್ಡಿಯಾಗಲಾರದು ಎಂಬುದು ಉಗ್ರರ ಆಲೋಚನೆ’ ಎಂದು ಮಹಿಳೆಯರು ಹೇಳಿದ್ದಾರೆ.

ಕಳೆದ ವರ್ಷದ ಅಂತ್ಯದವರೆಗೆ ಅಂದಾಜು 5 ಸಾವಿರ ಯಾಜಿಡಿ ಮಹಿಳೆ ಮತ್ತು ಪುರುಷರನ್ನು ಐಎಸ್‌ ಉಗ್ರರು ಅಪಹರಿಸಿದ್ದಾರೆ. ಇವರಲ್ಲಿ 2 ಸಾವಿರ ಮಂದಿ ತಪ್ಪಿಸಿಕೊಂಡಿದ್ದಾರೆ. ಐಎಸ್‌ ಉಗ್ರರಿಂದ ಅತ್ಯಾಚಾರಕ್ಕೊಳಗಾಗಿದ್ದ 700ಕ್ಕೂ ಹೆಚ್ಚು ಯಾಜಿಡಿ ಮಹಿಳೆಯರನ್ನು ಇರಾಕ್‌ನಲ್ಲಿ ವಿಶ್ವಸಂಸ್ಥೆ ನೆರವಿನ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ ಕೇವಲ ಶೇ 5 ರಷ್ಟು ಮಹಿಳೆಯರು ಮಾತ್ರ ಗರ್ಭಿಣಿಯರಾಗಿರುವುದು ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT