ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುದಾಳಿ: 15 ಉಗ್ರರ ಹತ್ಯೆ

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕಾಬೂಲ್‌ (ಪಿಟಿಐ,ಎಎಫ್‌ಪಿ): ಕುಂಡುಜ್‌ ನಗರದ ಆಸ್ಪತ್ರೆಯಲ್ಲಿ ಅಡಗಿದ್ದ 15 ಮಂದಿ ತಾಲಿಬಾನ್‌ ಉಗ್ರರನ್ನು ಶನಿವಾರ ಹತ್ಯೆಮಾಡಲಾಗಿದೆ.

ಆಸ್ಪತ್ರೆಯಲ್ಲಿ ಅಡಗಿದ್ದ ತಾಲಿಬಾನ್‌ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿ ಹತ್ಯೆಮಾಡಲಾಗಿದೆ ಎಂದು ಪೊಲೀಸ್‌ ವಕ್ತಾರ ಸೈಯದ್‌ ಸರ್ವರ್‌ ಹುಸೈನಿ ತಿಳಿಸಿದರು. ಆಸ್ಪತ್ರೆಯ 3 ವೈದ್ಯರು ಮೃತಪಟ್ಟಿದ್ದಾರೆ ಎಂಬ ವರದಿಯನ್ನು  ತಿರಸ್ಕರಿಸಿದ ಅವರು, ದಾಳಿ ವೇಳೆ ವೈದ್ಯರು, ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು. ಆದರೆ, ವೈಮಾನಿಕ ದಾಳಿಯಿಂದ 3 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಅಬುಜಾದಲ್ಲಿ ಸ್ಫೋಟ: ನೈಜೀರಿಯಾದ ರಾಜಧಾನಿ ಅಬುಜಾ ಹೊರವಲಯದಲ್ಲಿ ನಡೆದ 2 ಸ್ಫೋಟ ಪ್ರಕರಣಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 41 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಘಟಕ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT