ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಾಂತ್ ಒಡೆಯುವ ಕೆಲಸ ಆರಂಭ

ಇತಿಹಾಸ ಸೇರಲಿರುವ ದೇಶದ ಮೊದಲ ವಿಮಾನವಾಹಕ ನೌಕೆ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶದ ಮೊದಲ ವಿಮಾನ­ವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಒಡೆ­ಯುವ ಕೆಲಸ ದಕ್ಷಿಣ ಮುಂಬೈನ ದರುಕಾನ ಯಾರ್ಡ್‌­ನಲ್ಲಿರುವ ಹಡಗು ಒಡೆಯುವ ಕಟ್ಟೆ­ಯಲ್ಲಿ  ಗುರುವಾರ ಆರಂಭವಾಗಿದೆ.

ಐಎನ್‌ಎಸ್ ವಿಕ್ರಾಂತ್ ಅನ್ನು ಒಡೆ­ಯು­ವುದರ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ­ಯನ್ನು ಸುಪ್ರೀಂಕೋರ್ಟ್ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು. ನೌಕೆಯನ್ನು ಒಡೆಯಲು ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಪಡೆಯಲು ಮೂರು ತಿಂಗಳ ಸಮಯ ಹಿಡಿಯಿತು. ಹಡಗನ್ನು ಸಂಪೂರ್ಣ­ವಾಗಿ ಒಡೆಯಲು ಏಳ­ರಿಂದ ಎಂಟು ತಿಂಗಳು ಹಿಡಿಯಬಹುದು ಎಂದು ಹಡ­ಗನ್ನು ಒಡೆಯಲು ಗುತ್ತಿಗೆ ಪಡೆದಿರುವ ಐಬಿ ಕಮರ್ಷಿಯಲ್‌ನ ಅಬ್ದುಲ್ ಝಾಕಾ ಹೇಳಿದ್ದಾರೆ.

ಐಎನ್‌ಎಸ್ ವಿಕ್ರಾಂತ್ ಭಾರತದ ಮೊದಲ ವಿಮಾನವಾಹಕ ಯುದ್ಧ­ನೌಕೆ. 1957ರಲ್ಲಿ ಬ್ರಿಟನ್‌­ನಿಂದ ಇದನ್ನು ಖರೀದಿಸಲಾಗಿತ್ತು. 1961­ರಿಂದ 1997­ರವೆರಗೆ ವಿಕ್ರಾಂತ್ ನೌಕಾಪಡೆ­ಯಲ್ಲಿ ಸೇವೆಯಲ್ಲಿತ್ತು. ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿಕ್ರಾಂತ್‌ ಅನ್ನು ಒಡೆಯ­ದಂತೆ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವ­ಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿವರಣೆ ನೀಡಿದ್ದ ರಕ್ಷಣಾ ಸಚಿವಾಲಯ, ನೌಕೆಯ ಜೀವಿತಾವಧಿ ಮುಗಿದಿದೆ ಎಂದಿತ್ತು. ಮಹಾ­ರಾಷ್ಟ್ರ ಸರ್ಕಾರ, ನೌಕೆ­ಯನ್ನು ವಸ್ತು ಸಂಗ್ರಹಾ­ಲಯವಾಗಿ ಪರಿವರ್ತಿಸುವುದು ಆರ್ಥಿಕ­ವಾಗಿ ಕಾರ್ಯ­ಸಾಧುವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT