ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಲೇಖಕರ ಕಾರ್ಯಾಗಾರ

Last Updated 14 ಏಪ್ರಿಲ್ 2015, 8:21 IST
ಅಕ್ಷರ ಗಾತ್ರ

ಕಾರವಾರ: ವಿಜ್ಞಾನವನ್ನು ಜನಪ್ರಿಯ­ಗೊಳಿಸುವ ಉದ್ದೇಶದಿಂದ ಬೆಳಗಾವಿಯ ವಿಕಸನ ಕೇಂದ್ರ ಹಾಗೂ ಕಾರವಾರದ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ  ಆಶ್ರಯದಲ್ಲಿ ಮೇ 4ರಿಂದ 8ರವರೆಗೆ ಐದು ದಿನಗಳ ವಿಜ್ಞಾನ ಲೇಖಕರ ಕಾರ್ಯಾಗಾರವನ್ನು ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಾಗಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಯ್ದ 50 ಮಂದಿಗೆ ಅವಕಾಶ ಕಲ್ಪಿಸಲಾಗುವುದು. ಕನ್ನಡದಲ್ಲಿ ಲೇಖನ ಬರೆಯುವ ಹವ್ಯಾಸವಿದ್ದು, ವಿಜ್ಞಾನದ ವಿವಿಧ ವಿಷಯಗಳಾದ ಪರಿಸರ, ಶಕ್ತಿ, ಆರೋಗ್ಯ, ವೈಜ್ಞಾನಿಕ ದೃಷ್ಟಿಕೋನ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಜಾಗತಿಕ ತಾಪಮಾನ, ಸ್ವಚ್ಛತಾ ಅಭಿಯಾನ, ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು.

ಯಾವುದೇ ವಯಸ್ಸಿನ ಅಥವಾ ವಿದ್ಯಾರ್ಹತೆಯ ಮಿತಿ ಇರುವುದಿಲ್ಲ. ಕನ್ನಡವನ್ನು ಸರಾಗವಾಗಿ ಓದಲು ಮತ್ತು ಬರೆಯಲು ತಿಳಿದಿರಬೇಕು. ಕಾರ್ಯಾಗಾರದಲ್ಲಿ ಸಿದ್ಧಪಡಿಸಿದ ಲೇಖನವನ್ನು ಸಂಘಟಕರಿಗೆ ನೀಡಬೇಕು. ಅಭ್ಯರ್ಥಿಗಳ ಊಟೋಪಚಾರ ಮತ್ತು ವಸತಿ ವೆಚ್ಚವನ್ನು ಸಂಘಟಕರು ಭರಿಸುವರು.

ಆಸಕ್ತರು ವಿಜ್ಞಾನದ ಯಾವುದೇ ವಿಷಯದ ಕುರಿತು ತಾವೇ ಬರೆದಿರುವ, ಕನಿಷ್ಠ ಮೂರು ಪುಟಗಳಷ್ಟಿರುವ ಒಂದು ಲೇಖನ ಮತ್ತು ಕಿರು ಪರಿಚಯದೊಂದಿಗೆ ‘ಸಂಚಾಲಕರು, ವಿಜ್ಞಾನ ಲೇಖಕರ ಕಾರ್ಯಾಗಾರ, ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ, ಕೋಡಿಬಾಗ, ಕಾರವಾರ.’ ಈ ವಿಳಾಸಕ್ಕೆ  ಇದೇ 25ರೊಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಚಾಲಕ ಡಾ.ಎಂ. ಜಯಕರ ಭಂಡಾರಿ ( 9481110190) ಅಥವಾ ವಿಜ್ಞಾನ ಕೇಂದ್ರವನ್ನು ( 8762891448) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT