ನವದೆಹಲಿ (ಪಿಟಿಐ): 72 ರಾಷ್ಟ್ರಗಳ ಜೈಲುಗಳಲ್ಲಿ 6,200ಕ್ಕೂ ಹೆಚ್ಚು ಭಾರತೀಯರು ಸಿಲುಕಿ ನಲುಗುತ್ತಿದ್ದು, ಅತಿಹೆಚ್ಚು ಅಂದರೆ 1,508 ಜನರು ಸೌಧಿ ಅರೇಬಿಯಾದ ಕಾರಾಗೃಹಗಳಲ್ಲಿದ್ದಾರೆ ಎಂದು ಸರ್ಕಾರ ಗುರುವಾರ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್, ಮೀನುಗಾರರು ಸೇರಿದಂತೆ ಒಟ್ಟು 6,290 ಭಾರತೀಯ ಪ್ರಜೆಗಳು ವಿದೇಶಿ ಜೈಲುಗಳಲ್ಲಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಶಿಕ್ಷೆಗೆ ಒಳಗಾದ ಕೈದಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ 20 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 45 ಜನರನ್ನು ಸ್ವದೇಶಕ್ಕೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದರು.

ಸೌದಿ ಅರೇಬಿಯಾದಲ್ಲಿ 1,508, ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ 785, ನೆರಯ ನೇಪಾಳದಲ್ಲಿ 614, ಇಂಗ್ಲೆಂಡಿನಲ್ಲಿ 437 ಹಾಗೂ ಪಾಕಿಸ್ತಾನದ ಜೈಲುಗಳಲ್ಲಿ 352 ಭಾರತೀಯ ಪ್ರಜೆಗಳು ಸಿಲುಕಿದ್ದಾರೆ.

ಇನ್ನು, ಗಲ್ಫ್ ರಾಷ್ಟ್ರಗಳಾದ ಬಹ್ರೈನ್, ಇರಾಕ್, ಇರಾನ್, ಕುವೈತ್, ಓಮನ್, ಕತಾರ್ ಮತ್ತು ಯೆಮೆನ್ಗಳಲ್ಲಿ ಒಟ್ಟು 2,909 ಭಾರತೀಯರು ದಿನದೂಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.