ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕಳೆದ ಐದು ವಾರಗಳಿಂದ ಇಳಿಮುಖವಾಗಿದ್ದ ದೇಶ­ದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಅ. 10ರ ವಾರಾಂತ್ಯಕ್ಕೆ ₨79.849 ಕೋಟಿ­ಯಷ್ಟು ಏರಿಕೆ ಕಂಡಿದ್ದು, ಒಟ್ಟಾರೆ ₨19,03,200 ಕೋಟಿ­ಗಳನ್ನು ಮುಟ್ಟಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಾಹಿತಿ ನೀಡಿದೆ.

ಅ. 3ರ ವಾರಾಂತ್ಯಕ್ಕೆ ₨16,750 ಕೋಟಿ­ಗಳಷ್ಟು ಇಳಿಕೆ ಕಂಡ ವಿದೇಶಿ ಕರೆನ್ಸಿಗಳ ಸಂಗ್ರಹ ಪ್ರಮಾಣ ₨18,99,704 ಕೋಟಿಗೆ ಬಂದಿತ್ತು. ಸೆ. 26ರ ವಾರಾಂತ್ಯಕ್ಕೆ  ₨86,010 ಕೋಟಿ­ಯಷ್ಟು ಇಳಿಕೆ ಕಂಡು, ₨19,164,98 ಕೋಟಿ­ಯಷ್ಟಿತ್ತು.

ವಿದೇಶಿ ಕರೆನ್ಸಿ ಸಂಗ್ರಹವು ಅ.10ರ ವಾರಾಂತ್ಯದಲ್ಲಿ ₨78.690 ಕೋಟಿ­ ಏರಿಕೆಯಾಗಿದ್ದು, ₨17,499,68 ಕೋಟಿಯಷ್ಟಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಯಲ್ಲಿ (ಐಎಂಎಫ್‌) ಭಾರತದ ಹೊಂದಿರುವ ವಿದೇಶಿ ವಿನಿಮಯದ ಪಾಲು ₨330 ಲಕ್ಷ ಕೋಟಿಯಷ್ಟು ಏರಿಕೆ ಆಗಿದ್ದು, ಒಟ್ಟಾರೆ ₨93,940 ಕೋಟಿಯಷ್ಟಾಗಿದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT