ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷ ನಾಯಕ ಸ್ಥಾನ ಸೋನಿಯಾ ಒತ್ತಾಯ

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯ ವಿರೋಧಪಕ್ಷದ ನಾಯ­ಕನ ಸ್ಥಾನಕ್ಕಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರೇ ಈಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಲೋಕಸಭೆಯಲ್ಲಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿ­ರುವ ಕಾಂಗ್ರೆಸ್‌  ಲೋಕಸಭೆಯ ವಿರೋಧ ಪಕ್ಷ ನಾಯಕ ಸ್ಥಾನ ಪಡೆಯುವ ಎಲ್ಲ ಅರ್ಹತೆ ಹೊಂದಿದೆ ಎಂದು  ಸೋನಿಯಾ ಸೋಮವಾರ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಈ ವಿಷಯದ ಕುರಿತು ಬಹಿರಂಗ ಪ್ರತಿಕ್ರಿಯೆ ನೀಡಿರುವ ಸೋನಿಯಾ, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಕಾರಣ ಸಹಜವಾಗಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ  ನೀಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ. 

‘ಕಾನೂನು ಹೋರಾಟ ನಡೆಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆ­ದು­­ಕೊಂಡಿಲ್ಲ’ ಎಂದು  ಅವರು ಸ್ಪಷ್ಟ­ಪಡಿಸಿದ್ದಾರೆ. ಆದರೆ ಕಾಂಗ್ರೆಸ್‌ ವಕ್ತಾರ ಆನಂದ ಶರ್ಮಾ, ಪ್ರಜಾ­ಪ್ರಭು­ತ್ವ­ದಲ್ಲಿ ಸಾಧ್ಯ­ವಿರುವ ಎಲ್ಲ ಅವಕಾಶ­ಗಳನ್ನು ಕಾಂಗ್ರೆಸ್‌ ಬಳಸಿ­ಕೊಳ್ಳಲಿದೆ. ನ್ಯಾಯಾಲಯ ಮೆಟ್ಟಿ­­ಲೇರಲೂ ಹಿಂ­ಜ­ರಿಯು­ವು­ದಿಲ್ಲ ಎಂದು  ಸ್ಪಷ್ಟ­ಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯ  ವಿರೋಧಪಕ್ಷದ ನಾಯಕ ಸ್ಥಾನ ಪಡೆ­ಯುವ ಅರ್ಹತೆ ಇಲ್ಲ. ಚುನಾವಣಾ ಸೋಲನ್ನು  ಒಪ್ಪಿ­ಕೊ­ಳ್ಳಲು ಆ ಪಕ್ಷ ಇನ್ನೂ ಸಿದ್ಧವಿಲ್ಲ  ಎಂಬ ಬಿಜೆಪಿ ಆರೋಪ­ವನ್ನು ತಳ್ಳಿ ಹಾಕಿದ ಅವರು, ‘ನಮಗೆ ವಾಸ್ತವ ಅರಿವಿದೆ’ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಬೇಗನೆ ನಿರ್ಧಾರ ತೆಗೆದು­ಕೊಳ್ಳುವಂತೆ ಲೋಕ­ಸಭಾ ಸ್ವೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಯುಪಿಎ ಸಂಸದರು  ಪತ್ರ ಬರೆ­ಯ­­ಲಿದ್ದಾರೆ ಎಂದು  ಆನಂದ ಶರ್ಮಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT