ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ಮ್ಯಾರಥಾನ್‌: 20 ಸಾವಿರ ಜನ ಭಾಗಿ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ­ಯಲ್ಲಿ ಭಾನುವಾರ ನಡೆದ ‘ಸ್ಪಿರಿಟ್‌ ಆಫ್‌ ವಿಪ್ರೊ ರನ್‌ 2014’  ಮ್ಯಾರಥಾ­ನ್‌­ನಲ್ಲಿ ಸುಮಾರು 20 ಸಾವಿರ ಮಂದಿ ಪಾಲ್ಗೊಂಡಿದ್ದರು.

ಸಾಫ್ಟ್‌ವೇರ್‌ ಕಂಪೆನಿ ವಿಪ್ರೊ ಲಿಮಿ­ಟೆಡ್‌ ವತಿಯಿಂದ ಆಯೋಜಿಸಿದ್ದ ಈ ಮ್ಯಾರಥಾನ್‌ನಲ್ಲಿ ಕಂಪೆನಿಯ
ಉದ್ಯೋ­ಗಿ­ಗಳು, ಅವರ ಕುಟುಂಬ ಸದಸ್ಯರು ಹಾಗೂ ಗ್ರಾಹಕರು ಭಾಗವಹಿಸಿದ್ದರು.

ಐದು ಕಿ.ಮೀ, 10 ಕಿ.ಮೀ ಹಾಗೂ 21 ಕಿ.ಮೀ ಹೀಗೆ ಮೂರು ವಿಭಾಗ­ಗಳಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಜಯ ಗಳಿಸಿದವರಿಗೆ ನಗದು ಬಹುಮಾನ ನೀಡಲಾಯಿತು.

ಕಂಪೆನಿಯು ಇದೇ ರೀತಿ  ಹೈದರಾ­ಬಾದ್‌, ಪುಣೆ, ಚೆನ್ನೈ ಸೇರಿದಂತೆ ಜಗ­ತ್ತಿನ 110 ನಗರಗಳಲ್ಲಿ ಭಾನುವಾರ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಸುಮಾರು 63 ಸಾವಿರ ಮಂದಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT