ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪ್ರೊ ಲಾಭ ರೂ2,286 ಕೋಟಿ

4ನೇ ತ್ರೈಮಾಸಿಕದಲ್ಲಿ ಶೇ 21ರಷ್ಟು ಅಲ್ಪ ಪ್ರಗತಿ
Last Updated 21 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು(ಪಿಟಿಐ): ದೇಶದ ಮೂರನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪೆನಿ ವಿಪ್ರೊ, 2014-15ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ2,286 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಜನವರಿ-ಮಾರ್ಚ್‌ ಅವಧಿಯಲ್ಲಿ ಗಳಿಸಿದ್ದ ರೂ2,239 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಗಳಿಕೆಯಲ್ಲಿ ಶೇ 2.1ರಷ್ಟು ಅಲ್ಪ ಹೆಚ್ಚಳವಷ್ಟೇ ಸಾಧ್ಯವಾಗಿದೆ.

4ನೇ ತ್ರೈಮಾಸಿಕದಲ್ಲಿ ಕಂಪೆನಿಯ ಒಟ್ಟು ವರಮಾನ ಶೇ 3.9ರಷ್ಟು ಹೆಚ್ಚಳ ದೊಂದಿಗೆ ರೂ12,171 ಕೋಟಿಗೆ ಏರಿಕೆ ಕಂಡಿದೆ. 2013-14ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ11,703 ಕೋಟಿ ವರಮಾನವಿತ್ತು. ಇದೇ ವೇಳೆ, ಐ.ಟಿ ಸೇವೆಗಳನ್ನು ಆಧರಿಸಿದ ವಹಿವಾಟಿ ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ವೃದ್ಧಿ ಕಂಡುಬಂದಿದೆ.

2014-15ನೇ ಹಣಕಾಸು ವರ್ಷದ ಒಟ್ಟು 4 ತ್ರೈಮಾಸಿಕಗಳಲ್ಲಿ ವಿಪ್ರೊ ನಿವ್ವಳ ಲಾಭ ಶೇ 11.03ರಷ್ಟು ಹೆಚ್ಚಳದೊಂದಿಗೆ ರೂ8,706 ಕೋಟಿಗೇರಿದೆ. ಒಟ್ಟು ವರಮಾನವೂ ಶೇ 8.14ರ ವೃದ್ಧಿಯೊಂದಿಗೆ ರೂ47,318 ಕೋಟಿಗೆ ಮುಟ್ಟಿದೆ.

ರಿಷದ್ ಪ್ರೇಮ್‌ಜಿ ನಿರ್ದೇಶಕ: ಕಂಪೆನಿಯ ಸಂಸ್ಥಾಪಕ ಅಜೀಮ್‌ ಪ್ರೇಮ್‌ಜಿ ಅವರ ಹಿರಿಯ ಪುತ್ರ ರಿಷದ್ ಪ್ರೇಮ್‌ಜಿ ಅವರು ಆಡಳಿತ ಮಂಡಳಿಗೆ ಪೂರ್ಣಾವಧಿ ನಿರ್ದೇಶಕರಾಗಿ ಮಂಗಳ ವಾರ ನೇಮಕಗೊಂಡಿದ್ದಾರೆ. ಮೇ 1ರಿಂದ ಅವರ ಅಧಿಕಾರ ಅವಧಿ ಆರಂಭ ಗೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT