ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಗೆದ್ದ ಮಾಂಝಿ

ಬೆನ್ನಿಗೆ ನಿಂತ ಕಾಂಗ್ರೆಸ್‌, ಲಾಲು, ಹೊರನಡೆದ ಬಿಜೆಪಿ
Last Updated 23 ಮೇ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ):  ಬಿಹಾರದಲ್ಲಿ ಮೂರು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರ ನೇತೃತ್ವದ ಜೆಡಿಯು ಸರ್ಕಾರ ಶುಕ್ರವಾರ  ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ.

237 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ  ನೂತನ ಮುಖ್ಯ­ಮಂತ್ರಿ ಮಾಂಝಿ ಯಾಚಿಸಿದ ವಿಶ್ವಾಸ­ಮತವನ್ನು ಧ್ವನಿಮತದಿಂದ ಅಂಗೀಕರಿಸ­ಲಾಯಿತು. ಜೆಡಿಯುನ 117 ಶಾಸಕರು ಸೇರಿ ಒಟ್ಟು 145 ಸದಸ್ಯರು ವಿಶ್ವಾಸ­ಮತದ ಪರ ಮತ ಚಲಾ­ಯಿಸಿದರು. ಇದಕ್ಕೂ ಮೊದಲು ವಿರೋಧಪಕ್ಷವಾದ ಬಿಜೆಪಿಯ 88 ಶಾಸಕರು ಸದನದಿಂದ ಹೊರ­ನಡೆದರು.

ಜೆಡಿಯು ಸರ್ಕಾರಕ್ಕೆ ಲಾಲು ಪ್ರಸಾದ್‌ ಬೇಷ­ರತ್‌ ಬೆಂಬಲ ಘೋಷಿ­ಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ­ದಳದ (ಆರ್‌ಜೆಡಿ) 21 ಶಾಸಕರು ವಿಶ್ವಾಸ ಮತದ ಪರ ಮತ ಹಾಕಿದರು. ಕಾಂಗ್ರೆ­ಸ್‌ನ ನಾಲ್ವರು, ಇಬ್ಬರು ಪಕ್ಷೇತರ ಶಾಸಕರು ಹಾಗೂ ಸಿಪಿಐನ ಒಬ್ಬ ಶಾಸಕ ಸರ್ಕಾ­ರದ ಬೆಂಬಲಕ್ಕೆ ನಿಂತರು. ಇದಕ್ಕೂ ಮೊದಲು ಸದನದ ಕಲಾಪ ಆರಂಭ­ವಾಗುತ್ತಿದ್ದಂತೆಯೇ ವಿರೋಧಪಕ್ಷದ ನಾಯಕ ನಂದ­ಕಿಶೋರ್ ಯಾದವ್‌ ಹಾಗೂ ಇತರ ಸದಸ್ಯರ ಬಳಿ ತೆರಳಿದ ಮಾಂಝಿ ಹಸ್ತಲಾಘವ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ನಿತೀಶ್‌­ಕುಮಾರ್‌, ತಮ್ಮ ಸ್ಥಾನಕ್ಕೆ   ರಾಜೀನಾಮೆ ಸಲ್ಲಿಸಿದ ನಂತರ ಮಾಂಝಿ  ಮಂಗಳವಾರ ನೂತನ ಮುಖ್ಯ­ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೊದಲು ಅಂಚೆ ವಿಭಾಗದಲ್ಲಿ ಗುಮಾಸ್ತ­­ರಾಗಿ  ಕೆಲಸ ನಿರ್ವಹಿಸಿದ್ದ ಅವರು, ದಲಿತರಲ್ಲಿಯೇ ಶೋಷಿತ ‘ಮಹಾದಲಿತ’ ಸಮುದಾಯ­ದವರು.

‘ಬಿಜೆಪಿಯವರು ಹೇಡಿಗಳು’: ಸದನದಿಂದ ಹೊರನಡೆದ ಬಿಜೆಪಿಯ ನಡೆ­ಯನ್ನು ‘ಪುಕ್ಕಲುತನ’ ಎಂದು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಲೇವಡಿ ಮಾಡಿದ್ದಾರೆ. ಹೇಡಿಗಳಂತೆ ಅವರು ಸದನದಿಂದ ಬಿಜೆಪಿಯವರು ಹೊರ ನಡೆದರು ಎಂದು ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌­ನಲ್ಲಿ ಬಣ್ಣಿಸಿದ್ದಾರೆ. ಬಿಜೆಪಿಯವರ ಈ ನಡೆ ಪ್ರಜಾಪ್ರಭುತ್ವದಲ್ಲಿಯ ಕಪ್ಪು­ಚುಕ್ಕೆ. ಬಿಹಾರ ಇತಿಹಾಸಕ್ಕೆ ಮಸಿ ಬಳಿದಿದ್ದಾರೆ ಎಂದರು.

‘ಮತ್ತೆ ಒಂದಾದ ಜಾಲಿಗಿಡ, ಲಾಲು’: ಬಿಜೆಪಿಯನ್ನು ಅಧಿಕಾರದಿಂದ ದೂರ­ವಿಡಲು ಜೆಡಿಯು, ಕಾಂಗ್ರೆಸ್‌ ಆರ್‌ಜೆಡಿ ಪಕ್ಷಗಳೂ ಜಾತ್ಯತೀತ ಶಕ್ತಿಯ ಹೆಸರಿ­ನಲ್ಲಿ ಒಂದಾಗಿವೆ. ಇದು ಅನೈತಿಕ ಮೈತ್ರಿ ಎಂದು  ವಿರೋಧ­ಪಕ್ಷದ ನಾಯಕ  ನಂದ­ಕಿಶೋರ್ ಯಾದವ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT