ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಬ್ರೌಸರ್‌ಗೆ ಗೂಗಲ್‌ ಸಜ್ಜು

Last Updated 16 ಜೂನ್ 2015, 19:30 IST
ಅಕ್ಷರ ಗಾತ್ರ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಈಗ ಅತಿ ವೇಗದಲ್ಲಿ ವೆಬ್‌ ಪುಟಗಳನ್ನು ವೀಕ್ಷಿಸಬಹುದು. ಇಂತಹ ಸೌಲಭ್ಯವನ್ನು ಗೂಗಲ್‌ ಕಲ್ಪಿಸಲಿದೆ.

ಇಂಟರ್‌ನೆಟ್ ಸಂಬಂಧಿತ ಸೇವೆ ಮತ್ತು ಉತ್ಪನ್ನಗಳನ್ನು ಒದಗಿಸುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಈಗ ‘ಕ್ರೋಮ್‌’ ಮತ್ತು ‘ಆ್ಯಂಡ್ರಾಯ್ಡ್‌’ ಬ್ರೌಸರ್‌ಗಳಿಗೆ ಹೊಸ ಸ್ವರೂಪ ನೀಡಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ವೆಬ್‌ ಪುಟಗಳನ್ನು ವೇಗವಾಗಿ ತೆರೆಯಲು ಅನುಕೂಲವಾಗುತ್ತದೆ. ಭಾರತ ಮತ್ತು ಬ್ರೆಜಿಲ್‌ನಲ್ಲಿ ಇನ್ನು 15 ದಿನಗಳಲ್ಲಿ ಹೊಸ ಗುಣಲಕ್ಷಣಗಳಿರುವ ಬ್ರೌಸರ್‌ ಜಾರಿಗೆ ಬರಲಿದೆ.

ಇದಕ್ಕಾಗಿಯೇ ಸ್ವತಂತ್ರ ಕಂಪೆನಿಯನ್ನು ಸ್ಥಾಪಿಸುವುದಾಗಿ ಗೂಗಲ್‌ ಪ್ರಕಟಿಸಿದೆ. ‘ಸೈಡ್‌ವಾಕ್‌ ಲ್ಯಾಬ್ಸ್’ ಎನ್ನುವ ಹೆಸರಿನ ಈ ಕಂಪೆನಿ ಮೂಲಕ ಹೊಸ ವಿನ್ಯಾಸದ ಬ್ರೌಸರ್‌ ಮತ್ತು ತಂತ್ರಜ್ಞಾನ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದೆ.

ಕಳೆದ ತಿಂಗಳು ಇಂಡೋನೇಷ್ಯಾದಲ್ಲಿ ಹೊಸ ಸ್ವರೂಪದ ಬ್ರೌಸರ್‌ಗಳನ್ನು ಆರಂಭಿಸಲಾಗಿತ್ತು. ಇದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರ ಲಭ್ಯ. ವೆಬ್‌ ಪುಟಗಳು ವೇಗವಾಗಿ ತೆರೆದುಕೊಳ್ಳಬೇಕು ಮತ್ತು ಕಡಿಮೆ ವೆಚ್ಚದಲ್ಲಿ ಬಳಸಲು ಅನುಕೂಲವಾಗುವಂತೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

‘ಆನ್‌ಲೈನ್‌ನಲ್ಲಿ ಪ್ರತಿಯೊಬ್ಬರಿಗೆ ವೇಗವಾಗಿ ಮತ್ತು ಸುಲಭವಾಗಿ ಮಾಹಿತಿ ದೊರೆಯಬೇಕು ಎನ್ನುವುದು ಸಂಸ್ಥೆಯ ಉದ್ದೇಶ. ಆದರೆ, ಹಲವು ಮಂದಿಗೆ ಇದು ಸಾಧ್ಯವಾಗುತ್ತಿಲ್ಲ. ಇನ್ನು ನಿಧಾನಗತಿಯ ಸಂಪರ್ಕ ಕಲ್ಪಿಸುವ ವ್ಯವಸ್ಥೆಯ ಮೊಬೈಲ್‌ ದೂರವಾಣಿಗಳನ್ನು ಹೊಂದಿದ್ದಾರೆ. ಹೀಗಾಗಿಯೇ ಶೀಘ್ರದಲ್ಲಿ ಹೊಸ ಸ್ವರೂಪದ ಕ್ರೋಮ್ ಅಥವಾ ಆ್ಯಂಡ್ರಾಯ್ಡ್‌ ಬ್ರೌಸರ್‌ ಕಲ್ಪಿಸಲಾಗುವುದು’ ಎಂದು ಗೂಗಲ್‌ ಸರ್ಚ್‌ ಪ್ರಾಡಕ್ಟ್‌ ವ್ಯವಸ್ಥಾಪಕ ಹಿರೊಟೊ ಟೊಕುಸೈ ಹೇಳುತ್ತಾರೆ.

ಸೈಡ್‌ವಾಕ್‌ ಲ್ಯಾಬ್ಸ್‌ ಬ್ರೌಸರ್‌ಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ನಗರಗಳಲ್ಲಿ ವಾಸಿಸುವ ನಾಗರಿಕರ ಜೀವನವನ್ನು ಉತ್ತಮಪಡಿಸಲು ಹೆಚ್ಚು ಗಮನಹರಿಸಲಿದೆ. ನಗರ ನಿವಾಸಿಗಳ ವ್ಯಾಪಾರ ವಹಿವಾಟು ಹೆಚ್ಚಿಸಲು, ಜೀವನದ ವೆಚ್ಚ ಕಡಿಮೆಗೊಳಿಸುವುದು, ಉತ್ತಮ ಸಾರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ನೆರವಾಗಲು ಈ ಸಂಸ್ಥೆ ಗಮನಹರಿಸಲಿದೆ ಎಂದು ಎಂದು ಗೂಗಲ್‌ ತಿಳಿಸಿದೆ.

ಇದು ಗೂಗಲ್‌ನ ಪ್ರಮುಖ ಯೋಜನೆಗಳಿಗಿಂತ ವಿಭಿನ್ನವಾಗಿದ್ದು, ಕಡಿಮೆ ಬಂಡವಾಳ ಹೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಕಂಪೆನಿಯ ನೇತೃತ್ವವನ್ನು ಡ್ಯಾನ್‌ ಡಾಕ್ಟರ್‌ ಆಫ್‌ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಬ್ಲೂಮ್‌ಬರ್ಗ್‌ ಕಂಪೆನಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಇವರು ನ್ಯೂಯಾರ್ಕ್‌ನ ಉಪ ಮೇಯರ್‌ ಆಗಿಯೂ ಸೇವೆ ಸಲ್ಲಿಸಿದ್ದರು. ಗೂಗಲ್‌ನ ಈ ಯೋಜನೆ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT