ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ: ಸೆರೆ

Last Updated 26 ನವೆಂಬರ್ 2014, 20:34 IST
ಅಕ್ಷರ ಗಾತ್ರ

ಬೆಂಗಳೂರು: ವಿವೇಕನಗರ ಬಳಿಯ ಅಶ್ವಿನಿ ಲೇಔಟ್‌ನ ಫ್ಲ್ಯಾಟ್‌ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀ­ಸರು ವೇಶ್ಯಾವಾಟಿಕೆ ನಡೆಸು­ತ್ತಿದ್ದ ಆರೋಪಿಗಳನ್ನು ಬಂಧಿಸಿ ಹೊರ ರಾಜ್ಯಗಳ 11 ಯುವತಿಯರನ್ನು ರಕ್ಷಿಸಿದ್ದಾರೆ.

ರಾಜೇಶ್‌, ಶರವಣ, ಸಮೋನ್, ಮಧು ಮತ್ತು ಲತಾ ಬಂಧಿತರು. ಆರೋಪಿಗಳು ಹೊರ ರಾಜ್ಯದ ಯುವತಿಯರಿಗೆ ಬ್ಯೂಟಿ ಪಾರ್ಲರ್‌­ನಲ್ಲಿ ಕೆಲಸ ಕೊಡಿಸು­ವುದಾಗಿ ನಂಬಿಸಿ ನಗರಕ್ಕೆ ಕರೆದುಕೊಂಡು ಬಂದು ಈ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಫ್ಲ್ಯಾಟ್‌ ಬಾಡಿಗೆಗೆ ಪಡೆದಿದ್ದ ಆರೋಪಿ­ಗಳು ಯುವತಿಯರಿಗೆ ಹಣದ ಆಮಿಷ-­ವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿ­ದ್ದರು.  ಆ ಫ್ಲ್ಯಾಟ್‌ನಲ್ಲಿದ್ದ ಪಶ್ಚಿಮ­ಬಂಗಾಳ, ಆಂಧ್ರ­ಪ್ರದೇಶ ಮೂಲದ ಯುವತಿಯರನ್ನು ರಕ್ಷಿಸ­ಲಾಗಿದೆ.

ಟ್ವಿಟರ್‌ನಲ್ಲಿ ದೂರು: ಆರೋಪಿಗಳ ದುಷ್ಕೃತ್ಯದ ಬಗ್ಗೆ ಅಕ್ಕಪಕ್ಕದ ನಿವಾಸಿ­ಗಳು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್.ರೆಡ್ಡಿ ಅವರಿಗೆ ಟ್ವಿಟರ್ ಮೂಲಕ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT