ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗೊಂದು ಗಿಡ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಈ ವರ್ಷ ಮುಂಗಾರಂತೂ ಕೈ ಕೊಟ್ಟಾಯಿತು. ಒಂದು ವೇಳೆ ಹಿಂಗಾರೂ ಕೈ ಕೊಟ್ಟರೆ ಭೀಕರ ಬರಗಾಲ ಎದುರಿಸಬೇಕಾಗುತ್ತದೆ. ಅದರ ಮುನ್ಸೂಚನೆ ಈಗಾಗಲೇ ಕಾಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಜ್ಞಾವಂತ ಜನನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಅವರು ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ಸೀರೆಯಂಥ ವಸ್ತುಗಳನ್ನು ನೀಡಿ ಮತ ಪಡೆಯುವ ಬದಲು ‘ಒಂದು ವೋಟಿಗೆ ಒಂದು ಗಿಡ’ ಎಂಬ ಕ್ರಾಂತಿ ನಡೆಸಬೇಕಾಗಿದೆ. ಸರ್ಕಾರ ಕೂಡ ಇಂಥ ಆಂದೋಲನ ನಡೆಸಿ ಗಿಡ ನೀಡಿ, ಹೆಚ್ಚು ಗಿಡಗಳನ್ನು ಜತನ ಮಾಡಿ ಬೆಳೆಸುವವರಿಗೆ ಪ್ರೋತ್ಸಾಹಧನ ನೀಡಬೇಕಾಗಿದೆ.

ಮರಗಳಿದ್ದರೆ ಅದರ ಸುತ್ತಮುತ್ತ ಯಾವ ಬೆಳೆಯೂ ಬರುವುದಿಲ್ಲ ಮತ್ತು ಅದರ ಮೇಲೆ ಪಕ್ಷಿಗಳು ಬಂದು ಕೂತು ಇರುವ ಬೆಳೆಯನ್ನೂ ತಿಂದು ಹಾಕುತ್ತವೆ ಎಂಬ ಕಾರಣದಿಂದ ಬಹಳಷ್ಟು ರೈತರು ತಮ್ಮ ಹೊಲ ಗದ್ದೆ ಸಮೀಪದ ಮರಗಿಡಗಳನ್ನು ಕಡಿದು ಹಾಕುತ್ತಾರೆ.

ಅಂಥ ರೈತರಿಗೆ ಮರಗಿಡಗಳ ಉಪಯೋಗದ ಬಗ್ಗೆ ತಿಳಿವಳಿಕೆ ನೀಡಬೇಕಿದೆ. ಇಂತಹ ಕ್ರಾಂತಿ ಶೀಘ್ರದಲ್ಲೇ ಆಗಬೇಕು. ಇಲ್ಲದಿದ್ದರೆ ‘ಬೆಂಕಿ ಹೊತ್ತಿ ಉರಿಯುವಾಗ ಬಾವಿ ತೋಡಿದಂತೆ’ ಬರಗಾಲ ಆವರಿಸಿದಾಗ ‘ಗಿಡ ನೆಡಿ’ ಎಂದು ಬೊಬ್ಬೆ ಹಾಕುವುದರಿಂದ ಪ್ರಯೋಜನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT