ಮಡಿಕೇರಿ: ‘ಈ ಹಿಂದೆ ನಡೆದ ಬಹುಪಾಲು ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನಗಳಿಗಿಂತ ಮಡಿಕೇರಿ ಸಮ್ಮೇಳನ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು’ ಎಂಬ ಅಭಿಪ್ರಾಯವನ್ನು ಇಲ್ಲಿನ ಸಾಹಿತ್ಯಾಭಿಮಾನಿಗಳು ಗುರುವಾರ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ನಡೆದ ಸಾಕಷ್ಟು ಗೋಷ್ಠಿಗಳು ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗಳನ್ನು ಪ್ರತಿಭಟಿಸಿ ನಡೆದಿವೆ. ಕೊಡಗಿನ ಸಂಸ್ಕೃತಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಪ್ರತಿನಿಧಿಗಳು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂಬುದನ್ನು ರಾಯಚೂರು ಜಿಲ್ಲೆಯಿಂದ ಆಗಮಿಸಿದ ಪ್ರತಿನಿಧಿಯೊಬ್ಬರು ಸಂತಸದಿಂದ ಹೇಳಿದರು.

ಅದ್ದೂರಿ ಅಲ್ಲದಿದ್ದರೂ ಅಗತ್ಯವಾದ ಊಟದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಲಾಗಿತ್ತು. ಇದು ಕೂಡ ಸಾಕಷ್ಟು ಖುಷಿ ತಂದಿದೆ ಎಂದು ಉಡುಪಿ ಜಿಲ್ಲೆಯ ಲೇಖಕ ವಿಠ್ಠಲ್ ವಿ. ಗಾಂವಕರ್ ಹೇಳಿದರು.

ಪುಟ್ಟ ಜಿಲ್ಲೆಯಾದರೂ ಎಲ್ಲಾ ರೀತಿಯಿಂದಲೂ ದೊಡ್ಡ ಪ್ರಮಾಣದ ವ್ಯವಸ್ಥೆಯನ್ನು ಕಲ್ಪಿಸಿದ್ದು ನಿಜಕ್ಕೂ ಸಂತಸ ತಂದಿದೆ. ಅದರಲ್ಲೂ ಗೋಷ್ಠಿಗಳಲ್ಲಿ ಕುಳಿತುಕೊಳ್ಳಲು ಮಾಡಿದ್ದ ವ್ಯವಸ್ಥೆ ತುಂಬಾ ಚೆನ್ನಾಗಿತ್ತು ಎಂದರು.

ಇನ್ನು ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಕಲ್ಪಿಸಿದ್ದ ವ್ಯವಸ್ಥೆ ಅತ್ಯದ್ಭುತವಾಗಿತ್ತು ಎನ್ನುವುದು ಸಾಕಷ್ಟು ಪುಸ್ತಕಪ್ರಿಯರ ಮಾತಾಗಿತ್ತು. ಹಿಂದಿನ ಹಲವಾರು ಸಮ್ಮೇಳನಗಳಲ್ಲಿ ಇಷ್ಟೊಂದು ಉತ್ತಮ ರೀತಿಯಲ್ಲಿ ಪುಸ್ತಕಗಳನ್ನು ಕೊಳ್ಳಲು ವ್ಯವಸ್ಥೆ ಇರಲಿಲ್ಲ ಎಂದಿನಿಸುತ್ತದೆ. ಪುಸ್ತಕ ಮಳಿಗೆಗಳೊಳಕ್ಕೆ ಭೇಟಿ ನೀಡಿದರೆ ಒಂದು ಸುಂದರ ಗ್ರಂಥಾಲಯದೊಳಕ್ಕೆ ಹೋದ ಅನುಭವ ಆಯಿತು ಎಂದವರ ಸಂಖ್ಯೆಯೇ ಹೆಚ್ಚು.

ಗೋಷ್ಠಿಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಚೆನ್ನಾಗಿ ಬಿಂಬಿಸುವ ಮೂಲಕ ಸರ್ಕಾರಕ್ಕೆ ಅರ್ಥೈಹಿಸಲು ಸಾಧ್ಯವಾಗಿದೆ. ಅದರಲ್ಲೂ ಕೊಡಗಿನ ಮೂಲಭೂತ ಸಮಸ್ಯೆಗಳ ಮೇಲೆ ಗೋಷ್ಠಿಗಳು ಅಪಾರ ಬೆಳಕು ಚೆಲ್ಲಿವೆ. ಈ ಕುರಿತು ತೆಗೆದುಕೊಂಡಿರುವ ನಿರ್ಣಯಗಳು ಜಾರಿಯಾಗಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಸಾಕಷ್ಟು ಜನರು ವ್ಯಕ್ತಪಡಿಸಿದರು.

ವಯಸ್ಸಾದ ಎಷ್ಟೋ ಜನರು ಊಟಕ್ಕಾಗಿ ಪೇಚಾಡುತ್ತಿದ್ದ ದೃಶ್ಯಕಂಡುಬಂದಿದೆ ಹೀಗಾಗಿ ಊಟದ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಕಲ್ಪಿಸಬಹುದಿತ್ತು ಎಂಬ ಅಭಿಪ್ರಾಯವು ಕೇಳಿಬಂದಿರುವುದು ಸುಳ್ಳಲ್ಲ.

ಒಟ್ಟಾರೆ ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಚಿಕ್ಕ ಜಿಲ್ಲೆಯೊಳಗೆ ಸಾಕಷ್ಟು ಉತ್ತಮವಾಗಿ ಅಖಿಲ ಭಾರತ 80 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಿ ಬಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವರ ಸಂಖ್ಯೆ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.