ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀನಾ ಪ್ರಕರಣ: ಖನ್ನಾ ನಿವಾಸದ ಮೇಲೆ ದಾಳಿ

Last Updated 2 ಸೆಪ್ಟೆಂಬರ್ 2015, 9:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿಯ ಮಾಜಿ ಪತಿ   ಸಂಜೀವ್‌ ಖನ್ನಾನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಮುಂಬೈ ಪೊಲೀಸರು, ಬುಧವಾರ ಕೋಲ್ಕತ್ತದಲ್ಲಿರುವ ಆತನ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್‌ ಮತ್ತು ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ  ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕೋಲ್ಕತ್ತದ ಹಾಸ್ಟಿಂಗ್‌ ಏರಿಯಾದಲ್ಲಿರುವ ಖನ್ನಾ ನಿವಾಸಕ್ಕೆ ಬಂದ ಮುಂಬೈ ಪೊಲೀಸರ ತಂಡ, ಸ್ಥಳೀಯ ಪೊಲೀಸರ ನೆರವಿನೊಂದಿಗೆ  ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು ಎಂದು ಕೋಲ್ಕತ್ತ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕೋಲ್ಕತ್ತದ ಸಿದ್ಧಾರ್ಥ್‌ ದಾಸ್‌ ಎಂಬ ವ್ಯಕ್ತಿ ಶೀನಾಳ ಅಧಿಕೃತ ತಂದೆ  ನಾನು ಎಂದು ಮಂಗಳವಾರ ಘೋಷಿಸಿಕೊಂಡಿದ್ದರು. ಮುಂಬೈ ಪೊಲೀಸರ ತಂಡ ಆತನನ್ನೂ ಭೇಟಿಯಾಗಿ  ಮಾಹಿತಿ ಪಡೆಯಿತು ಎಂದು ಅವರು ಹೇಳಿದ್ದಾರೆ.

ಇಂದ್ರಾಣಿ ಮುಖರ್ಜಿಯ ಸದ್ಯದ ಪತಿ, ಸ್ಟಾರ್ ಇಂಡಿಯಾದ ಸಿಇಒ ಪೀಟರ್‌ ಮುಖರ್ಜಿ ಅವರ ಹೇಳಿಕೆಯನ್ನೂ ಬುಧವಾರ ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ಶ್ಯಾಮ್ ರಾಯ್‌ ಹೇಳಿಕೆಯನ್ನೂ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT