ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌

ಕಾಶ್ಮೀರ ಚುನಾವಣೆ: ಬಿಜೆಪಿ ‘ಮಿಷನ್‌ 44 ಪ್ಲಸ್‌’ ಕಾರ್ಯತಂತ್ರ
Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ‘ಕೋಮುವಾದಿ’ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಯತ್ನಿ ಸುತ್ತಿ­ರುವ ಬಿಜೆಪಿ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ನಡೆಯಲಿರುವ ಚುನಾ­ವಣೆಯಲ್ಲಿ  ಶೇ 40ರಷ್ಟು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರ ಮನಗೆಲ್ಲಲು ಮುಂದಾ­ಗಿದೆ.   ತನ್ನ ಮಹತ್ವಾ­ಕಾಂಕ್ಷೆಯ  ‘ಮಿಷನ್‌ 44 ಪ್ಲಸ್‌’ ಹೆಸರಿನಲ್ಲಿ ಕಣಿವೆ ರಾಜ್ಯದಲ್ಲಿ ಅಧಿ­ಕಾರಕ್ಕೆ ಬರಲು ಪಕ್ಷ ಯತ್ನಿಸುತ್ತಿದೆ.

ವಿಧಾನಸಭೆಯ 87 ಸ್ಥಾನಗಳ ಪೈಕಿ 70 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಇವರಲ್ಲಿ 32 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 25,  ಜಮ್ಮುವಿನಲ್ಲಿ ಆರು ಹಾಗೂ ಲಡಾಖ್‌ನಲ್ಲಿ ಒಂದು ಸ್ಥಾನದಲ್ಲಿ ಮುಸ್ಲಿಂ ಅಭ್ಯರ್ಥಿ­ಗಳಿದ್ದಾರೆ.
ಕಣಿವೆ ಪ್ರದೇಶದಲ್ಲಿ ಮೂವರು ಕಾಶ್ಮೀರಿ ಪಂಡಿತರನ್ನು ಹಾಗೂ ಒಬ್ಬ ಸಿಖ್‌ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ­ರುವ ಬಿಜೆಪಿ, ಲಡಾಖ್‌ನಲ್ಲಿ ಮೂವರು ಬೌದ್ಧ ಧರ್ಮೀಯರನ್ನೂ ನಿಲ್ಲಿಸಿದೆ.

‘ಕಾಶ್ಮೀರಕ್ಕೆ ಬಿಜೆಪಿ ಅಸ್ಪೃಶ್ಯವೇನೂ ಅಲ್ಲ. ನಮ್ಮ ರ್‍್ಯಾಲಿ, ರೋಡ್‌ಷೋ­ಗಳಿಗೆ ಕಣಿವೆ ಭಾಗದ ಭಾರಿ ಜನರು ಬರು­ತ್ತಾರೆ. ಬಿಜೆಪಿಯನ್ನು ಅವರು ಎನ್‌ಸಿ ಹಾಗೂ ಪಿಡಿಪಿ ಪಕ್ಷಗಳಿಗೆ ಪರ್ಯಾಯ­ವಾಗಿ ನೋಡುತ್ತಾರೆ’ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಿಜೆಪಿ ಉಸ್ತು­ವಾರಿ ಅವಿನಾಶ್ ರೈ ಖನ್ನಾ  ತಿಳಿಸಿ­ದ್ದಾರೆ.

2008ರಲ್ಲಿ ನಡೆದ ಚುನಾವಣೆ­ಯಲ್ಲಿ ಬಿಜೆಪಿಯ 24 ಮುಸ್ಲಿಂ ಅಭ್ಯರ್ಥಿ­ಗಳು ಹಾಗೂ ಏಳು ಕಾಶ್ಮೀರಿ ಪಂಡಿತರು ಸ್ಪರ್ಧಿಸಿದ್ದರು. 60 ಸ್ಥಾನ­ಗಳಿಗೆ ನಡೆದ ಚುನಾವಣೆಯಲ್ಲಿ 11 ರಲ್ಲಿ ಜಯ ದೊರೆತಿತ್ತು. 2002 ರ ಚುನಾವಣೆಯಲ್ಲಿ ಬಿಜೆಪಿ 17 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಇದೇ 25 ರಿಂದ ಚುನಾವಣೆ ನಡೆಯಲಿದೆ. 
2000 ಮೌಲ್ವಿಗಳು: ಚುನಾವಣಾ ಪ್ರಚಾ­ರಕ್ಕೆ ಬಿಜೆಪಿ ಬೇರೆ ರಾಜ್ಯಗಳ ಮುಸ್ಲಿಂ ಮೌಲ್ವಿಗಳನ್ನು ಬಳಸಿಕೊಳ್ಳು ತ್ತಿದೆ. 2000ಕ್ಕೂ ಹೆಚ್ಚು ಮೌಲ್ವಿಗಳು ಬಿಜೆಪಿ ಪರವಾಗಿ ಮನೆ ಮನೆ ಪ್ರಚಾರ­ದಲ್ಲಿ ತೊಡಗಿದ್ದಾರೆ. ಮತದಾನ ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಮೌಲ್ವಿಗಳು ಭಾಗವಹಿಸುವ ನಿರೀಕ್ಷೆ ಇದೆ.

‘ಮೌಲ್ವಿಗಳು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅವುಗಳನ್ನು ಸರ್ಕಾ­ರದ ಗಮನಕ್ಕೆ ತರುವಲ್ಲಿ ಮುಂದಾಗಿ­ದ್ದಾರೆ’ ಎಂದು ಜಮಾತ್‌ ಉಲೇಮಾ ಹಿಂದ್‌್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಸುಹೈಬ್‌್ ಕ್ವಾಸ್ಮಿ ಹೇಳಿದರು.

ಚುನಾವಣೆ ಮುಂದೂಡಲು ನಕಾರ
ನವದೆಹಲಿ: ಕೆಲ ತಿಂಗಳ ಹಿಂದೆ ಭಾರಿ ಪ್ರವಾಹದಿಂದ ತತ್ತರಿಸಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ­ಯನ್ನು ಮುಂದಕ್ಕೆ ಹಾಕಲು ಸುಪ್ರೀಂಕೋರ್ಟ್‌ ಸೋಮವಾರ ನಿರಾಕರಿಸಿದೆ.

ಚುನಾವಣೆ ಮುಂದೂಡಬೇಕು ಎಂದು ಕೋರಿ ಜಮ್ಮು ಮತ್ತು ಕಾಶ್ಮೀರ ಅವಾಮಿ ನ್ಯಾಷನಲ್‌ ಕಾನ್ಫರೆನ್ಸ್‌್ (ಎಎನ್‌ಸಿ) ಅರ್ಜಿ ಸಲ್ಲಿಸಿತ್ತು.
ಚುನಾವಣೆಯನ್ನು ಮುಂದಕ್ಕೆ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇ­ಶನ ನೀಡಬೇಕು ಎಂಬ ಮನವಿಯನ್ನು  ಮುಖ್ಯ ನ್ಯಾಯಮೂರ್ತಿ ಎಚ್‌.­ಎಲ್‌.­­­ದತ್ತು ಮತ್ತು ನ್ಯಾಯ­ಮೂರ್ತಿ ಎ.ಕೆ.ಸಿಕ್ರಿ  ಒಳಗೊಂಡ ನಿರಾಕ­ರಿಸಿದೆ. ಪ್ರವಾಹ­ದಿಂದ ನಲುಗಿರುವ ರಾಜ್ಯ­ದಲ್ಲಿ ಪರಿಹಾರ ಮತ್ತು ಪುನರ್‌ವಸತಿ ಕಾರ್ಯ ನಡೆಯುತ್ತಿರುವ ಕಾರಣದಿಂದ ಚುನಾವಣೆ ಸದ್ಯಕ್ಕೆ  ಬೇಡ ಎಂದು ಅರ್ಜಿ ಸಲ್ಲಿಸಲಾಗಿತ್ತು.

ಪ್ರವಾಹದಿಂದಾಗಿ ಕಾಶ್ಮೀರದಲ್ಲಿನ ಭಾರಿ ಸಂಖ್ಯೆಯ ಜನರು ಸ್ಥಳಾಂತರಗೊಂಡಿ­ದ್ದಾರೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯ­ಸಮ್ಮತ ರೀತಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಎಎನ್‌ಸಿ ಪರ ಹಾಜ­ರಾಗಿದ್ದ ವಕೀಲ ರಾಜೀವ್ ಧವನ್‌ ಹೇಳಿದರು. ಇದಕ್ಕೂ ಮೊದಲು ಪ್ರತ್ಯೇಕ ಪೀಠ ಚುನಾವಣೆ ಮುಂದೂಡುವ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅವರ ಪೀಠಕ್ಕೆ ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT