ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 95 ಅಂಗಾರಕ ಭಾಗ ಇನ್ನೂ ನಿಗೂಢ

ಹಿರಿಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌ ಅಭಿಮತ
Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಂಗಳ ಗ್ರಹದ ಬಗ್ಗೆ ನಮಗೆ ಗೊತ್ತಿರುವುದು ಶೇ 5ರಷ್ಟು ಮಾತ್ರ. ಶೇ 95 ಅಂಶವನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ’ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು. ಆರ್‌.ರಾವ್‌ ಅಭಿಪ್ರಾಯಪಟ್ಟರು.

ಜವಾಹರ್‌ಲಾಲ್‌ ನೆಹರೂ ತಾರಾಲಯ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಹಯೋಗದಲ್ಲಿ  ತಾರಾಲಯದಲ್ಲಿ ಬುಧವಾರ ಆರಂಭಗೊಂಡ ‘ಮಂಗಳದತ್ತ ಭಾರತದ ಮುನ್ನಡೆ–ಒಂದು ಉತ್ಸವ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭೂಮಿ ತೊಟ್ಟಿಲು ಇದ್ದಂತೆ. ಇಲ್ಲಿನ ಸಂಪನ್ಮೂಲ  ಬಹುತೇಕ ಬಳಕೆ ಆಗಿದೆ. ಹೀಗಾಗಿ ಅನ್ಯ ಗ್ರಹದತ್ತ ಮನುಷ್ಯ ಕಣ್ಣು ಹಾಯಿಸುವುದು ಅನಿವಾರ್ಯ ಆಗಿದೆ. ಅಂಗಾರಕನಲ್ಲಿರುವ ಸಂಪನ್ಮೂಲ ಶೋಧಕ್ಕಾಗಿ ನಾವೀಗ ಹೊರಟಿದ್ದೇವೆ’ ಎಂದರು.

‘ಇದೇ 24ರಂದು ಬೆಳಿಗ್ಗೆ 7.30ಕ್ಕೆ  ಇಸ್ರೊ ನೌಕೆ ಮಂಗಳನ ಕಕ್ಷೆ ಸೇರಲಿದೆ. ಇದರ ಮೊದಲ ಮಾಹಿತಿ ‘ನಾಸಾ’ದ ಕ್ಯಾನ್‌ಬೆರಾ

ಮಂಗಳ ಗ್ರಹ ವಿಶ್ವರೂಪ ದರ್ಶನ
*ಚಂದ್ರನಲ್ಲಿಗೆ ನಮ್ಮ ನೌಕೆ ಹೋಗಲು ಸಾಧ್ಯ ಎಂದು ಪ್ರತಿಪಾದಿಸಿದ ಮೊದಲಿಗ ಯಾರು?
ವಿಜ್ಞಾನಿ ರಾಬರ್ಟ್‌ ಗೊಡ್ಡಾರ್ಡ್‌ (1882–1945) ಅವರು. ಅವರ ಆ ವಾದ ಆಗ ಅಪಹಾಸ್ಯಕ್ಕೆ ಈಡಾಗಿತ್ತು.
*ಇಸ್ರೊ ಮುಂದಿನ ಯೋಜನೆ ಯಾವುದು?
‘ಚಂದ್ರಯಾನ–2’ ಯೋಜನೆಗೆ ಚಾಲನೆ ನೀಡುವ ಪ್ರಯತ್ನದಲ್ಲಿ ಸಂಸ್ಥೆ ಇದೆ. ಇದರಲ್ಲಿ ಚಂದ್ರನ ಅಧ್ಯಯನದ ಜೊತೆಗೆ ಮೇಲ್ಮೈ ಗುಣಗಳನ್ನು ಪರಿಶೀಲಿ­ಸುವ ಲ್ಯಾಂಡರ್‌ ಒಂದನ್ನು ಇಳಿಸ­ಲಾಗುವುದು.
ಇಂತಹ ನೂರಾರು ಪ್ರಶ್ನೆಗಳಿಗೆ ‘ಮಂಗಳದತ್ತ ಭಾರತದ ಮುನ್ನಡೆ–ಒಂದು ಉತ್ಸವ’ ಉತ್ತರ ನೀಡುತ್ತಿದೆ.  ಉತ್ಸವದಲ್ಲಿ ಭಿತ್ತಿಚಿತ್ರಗಳ ಪ್ರದರ್ಶನ, ಕಮ್ಮಟ, ಪ್ರಾತ್ಯಕ್ಷಿಕೆ, ಉಪನ್ಯಾಸ ಮಾಲಿಕೆ ಇರಲಿದೆ.
ಇಸ್ರೊ ‘ಮಂಗಳಯಾನ’ ನೌಕೆ   ಮಂಗಳನ ಕಕ್ಷೆ ಸೇರಲು ದಿನಗಣನೆ ಶುರು­ವಾಗಿರುವ ಹೊತ್ತಲ್ಲಿ ಬಾಹ್ಯಾ­ಕಾಶ ಕ್ಷೇತ್ರದಲ್ಲಿನ ಭಾರತದ ಸಾಧನೆ ಬಗ್ಗೆ ಬೆಳಕು ಚೆಲ್ಲಲು ಈ ಉತ್ಸವ ಸಂಘಟಿಸಲಾಗಿದೆ.
*‘ಅಂತರಿಕ್ಷ ಎಂದರೇನು?’ ‘ಅದರ ವಿಸ್ತಾರವೆಷ್ಟು?’
‘ಅಂತರಿಕ್ಷ ಯಾನ–ಕಲ್ಪನಾ ಲೋಕದಲ್ಲಿ’, ‘ಮಂಗಳ–ಭೂಮಿ ಹೋಲಿಕೆ’, ‘ಬಾಹ್ಯಾಕಾಶ ಕ್ಷೇತ್ರ­ದಲ್ಲಿ ಭಾರತದ ಸಾಧನೆ’ ಮತ್ತಿತರ ವಿಷಯ­ಗಳ ಕುರಿತು ಪುಟ್ಟ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಚಿತ್ರ ಸಹಿತ ಸರಳ ವ್ಯಾಖ್ಯಾನ ನೀಡಲಾಗಿದೆ.

ಕೇಂದ್ರದಲ್ಲಿರುವ 70 ಮೀಟರ್‌ನ ಆಂಟೆನಾ ನೆರವಿನಿಂದ  ದೊರಕಲಿದೆ. ಬ್ಯಾಲಾಳುವಿನಲ್ಲಿರುವ 32 ಮೀಟರ್‌ನ ಆಂಟೆನಾದಲ್ಲಿ ಬೆಳಿಗ್ಗೆ 11 ಗಂಟೆ ವೇಳೆ ಮಾಹಿತಿ ದೊರಕಲಿದೆ. ಇಲ್ಲಿರುವ ಆಂಟೆನಾ ದೊಡ್ಡ ಆಲದ ಮರಕ್ಕಿಂತಲೂ ದೊಡ್ಡದು’ ಎಂದು ಅವರು ಬಣ್ಣಿಸಿದರು.

‘ಮಂಗಳನ ಕಕ್ಷೆಗೆ ಸೇರಲು ಜಗತ್ತಿನ ವಿವಿಧ ರಾಷ್ಟ್ರಗಳು 50ಕ್ಕೂ ಅಧಿಕ ಬಾರಿ ಪ್ರಯತ್ನ ನಡೆಸಿವೆ. ಇದರಲ್ಲಿ 25ಕ್ಕೂ ಹೆಚ್ಚಿನ ಪ್ರಯತ್ನಗಳು ವಿಫಲವಾಗಿವೆ. ಭಾರತದ ನೌಕೆ ಮೊದಲ ಪ್ರಯತ್ನದಲ್ಲೇ ಕೆಂಪು ಗ್ರಹದ ಕಕ್ಷೆ ಸೇರಲು ಸಿದ್ಧವಾಗಿದೆ. ಇದರಲ್ಲಿ ಯಶಸ್ವಿಯಾದರೆ ಮೊದಲ ಪ್ರಯತ್ನದಲ್ಲೇ ನೌಕೆಯನ್ನು ಮಂಗಳನ ಕಕ್ಷೆ ಸೇರಿಸಿದ ಜಗತ್ತಿನ ಮೊದಲ ರಾಷ್ಟ್ರ ಆಗಲಿದೆ. ಭಾರತದ ಈ ನಡೆಯನ್ನು ಬೇರೆ ರಾಷ್ಟ್ರಗಳೂ ಕೌತುಕದಿಂದ ಗಮನಿಸುತ್ತಿವೆ’ ಎಂದು ಅವರು ತಿಳಿಸಿದರು.

‘ಮಂಗಳದ ವೈಜ್ಞಾನಿಕ ಅನ್ವೇಷಣೆಗಾಗಿ ಇಸ್ರೊ ನೌಕೆಯಲ್ಲಿ ಐದು ಉಪಕರಣಗಳನ್ನು ಅಳವಡಿಸಲಾಗಿದೆ. ಅದರಲ್ಲಿರುವ ವರ್ಣ ಕ್ಯಾಮೆರಾ ಮಂಗಳದ ಛಾಯಾಚಿತ್ರ ತೆಗೆಯಲಿದೆ. ಇನ್ನೊಂದು ಉಪಕರಣ ಮಂಗಳದ ವಾತಾವರಣದಲ್ಲಿ ನೀರು ಹೇಗೆ ಕಳೆದು ಹೋಗುತ್ತಿದೆ ಎಂಬುದನ್ನು ತಿಳಿಸಲಿದೆ. ಮತ್ತೊಂದು ಮಂಗಳದ ವಾತಾವರಣದಲ್ಲಿ ಇರಬಹುದಾದ ಸಣ್ಣ ಪ್ರಮಾಣದ ಮಿಥೇನ್‌ ಬಗ್ಗೆ ಅಧ್ಯಯನ ಮಾಡಲಿದೆ’ ಎಂದು ಅವರು ವಿಶ್ಲೇಷಿಸಿದರು.

‘ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ, ನಮ್ಮ ಟಿ.ವಿ. ಚಾನೆಲ್‌ಗಳು ಪ್ರತಿದಿನ ಕನಿಷ್ಠ ಪಕ್ಷ ಎರಡು ಗಂಟೆಗಳ ಕಾಲ ವಾಸ್ತು ಶಾಸ್ತ್ರದ ಬಗ್ಗೆ ಕಾರ್ಯಕ್ರಮ ನೀಡುತ್ತಿವೆ’ ಎಂದು ಅವರು ಹರಿಹಾಯ್ದರು.

ಇದೇ ವೇಳೆ ಪುಟ್ಟ ರಾಕೆಟ್‌ ಹಾರಿಸುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ್‌ ಉತ್ಸವಕ್ಕೆ ಚಾಲನೆ ನೀಡಿದರು.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ತನುಶ್ರೀ ದೇಬ್‌ ವರ್ಮಾ, ಜವಾಹರ್‌ ಲಾಲ್‌ ನೆಹರೂ ತಾರಾಲಯದ ನಿರ್ದೇಶಕಿ ಬಿ.ಎಸ್‌.ಶೈಲಜಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT