ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಅನುದಾನ ಏರಿಕೆ

ಸ್ವಚ್ಛ ಭಾರತ ನಿರ್ಮಾಣಕ್ಕೆ ಒತ್ತು: ಕೇಂದ್ರ ಸರ್ಕಾರದಿಂದ ಪ್ರಸ್ತಾವ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾ­ಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ಒತ್ತು ಕೊಡುವಂತೆ ಗ್ರಾಮೀಣ ಪ್ರದೇಶದ ಮನೆ­ಗಳಲ್ಲಿ ನಿರ್ಮಾಣ­ವಾಗುವ ಶೌಚಾ­ಲಯಗಳಿಗೆ ನೀಡುವ ಸಹಾಯ­ಧನವನ್ನು ಹೆಚ್ಚಿಸುವ ಪ್ರಸ್ತಾಪ­ವನ್ನು ಕೇಂದ್ರ ಸರ್ಕಾರ ಹೊಂದಿದೆ. ಶಾಲೆಗಳು ಮತ್ತು ಅಂಗನ­­ವಾಡಿ­ಗಳಲ್ಲಿ ನಿರ್ಮಾಣ­ವಾ­ಗುವ ಶೌಚಾ­­­ಲಯ­­ಗಳಿಗೆ ನೀಡುವ ಹಣ­ವನ್ನೂ ಹೆಚ್ಚಿಸಲು ಯೋಚಿಸ­ಲಾಗಿದೆ.

ಶೌಚಾಲಯ ನಿರ್ಮಾಣ ಕಾರ್ಯ­ಕ್ರಮ­­ವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಪ್ರತ್ಯೇಕಿಸುವ ನಿರ್ಧಾರ­ವನ್ನೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರಕಟಿಸಿದ್ದಾರೆ. ಕುಡಿ­ಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹೆಚ್ಚು­ವರಿ ಹೊಣೆಯನ್ನು ಅವರು ಹೊಂದಿದ್ದಾರೆ. ಹಿಂದಿನ ಯುಪಿಎ ಸರ್ಕಾರ ಈ ಯೋಜನೆಯನ್ನು ಆರಂಭಿ­­ಸಿದ್ದು ಅದು ಪರಿಣಾಮಕಾರಿಯಾಗಿ ಕೆಲಸ ಮಾಡು­ತ್ತಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳ­ಲಾಗಿದೆ ಎಂದು ಅವರು ಅವರು ಹೇಳಿದ್ದಾರೆ.

ಹೆಣ್ಣುಮಕ್ಕಳಿಗೆ ಶೌಚಾಲಯ: ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿ­ದಂತೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿ­ಸಲು ಕ್ರಿಯಾ ಯೋಜನೆ ರೂಪಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

ಸುರಕ್ಷತೆಗೆ ಕ್ರಮ: ಶಾಲಾ ಪ್ರವಾಸದ ವೇಳೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಗೊಳಿಸು­ವು­ದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವಾಲಯವು ರಾಜ್ಯ­ಗಳಿಗೆ ಸೂಚನೆ ನೀಡಿದೆ.

ಮನೆಯ ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯ­ಧನವನ್ನು ರೂ 10 ಸಾವಿರ­­ದಿಂದ ರೂ 15 ಸಾವಿ­ರಕ್ಕೆ ಹೆಚ್ಚಿ­ಸುವ ಪ್ರಸ್ತಾವವನ್ನು ಸಿದ್ಧಪಡಿಸ­ಲಾ­ಗಿದೆ. ಶಾಲಾ ಶೌಚಾಲಯ ನಿರ್ಮಾ­ಣಕ್ಕೆ ನೀಡುವ ಅನು­ದಾನ­­ವನ್ನು ರೂ 35 ಸಾವಿರ­ದಿಂದ ರೂ 54 ಸಾವಿರಕ್ಕೆ, ಅಂಗನ­­ವಾಡಿ ಶೌಚಾಲಯಕ್ಕೆ ನೀಡುವ ಮೊತ್ತ­ವನ್ನು ರೂ 8 ಸಾವಿರದಿಂದ ರೂ 20 ಸಾವಿರಕ್ಕೆ ಮತ್ತು ಸಮು­­ದಾಯ ಶೌಚಾ­ಲಯ ನಿರ್ಮಾ­ಣಕ್ಕೆ ನೀಡುವ ಹಣ­ವನ್ನು ರೂ 2 ಲಕ್ಷ­ದಿಂದ ರೂ 6 ಲಕ್ಷಕ್ಕೆ ಏರಿ­ಸುವ ಪ್ರಸ್ತಾವ ಸಿದ್ಧಪಡಿಸ­ಲಾ­ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT