ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಜಗದಾಂಬ ಲಾಲೀ...

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಯ ಜಯ ಜಗನ್ಮಾತೆ ಜಯಗೌರಿ ಲಾಲೀ
ಜಯ ಜಯ ಶಿವಪ್ರೀತೆ ಸಾವಿತ್ರಿ ಲಾಲೀ
ಜಯ ಜಯ ಮಹಶಕ್ತಿ ಗಾಯಿತ್ರಿ ಲಾಲೀ
ಜಯ ನಿಗಮ ಸಂಗೀತ ಜಗದಾಂಬ ಲಾಲೀ||

ಹೃದಯದೊಳು ಹಂಸನ ಪೊತ್ತಿರುವೆ ಬಾಲೆ
ಸದಯ ವೃಷಭಾರೂಢ ಮಧ್ಯದಿನ ಲೋಲೆ
ಪದುಳಿಸುವೆ ಗರುಡನ ಸಂಧ್ಯದೋಳ ಲೀಲೆ
ಅದನು ಬಲ್ಲವರ್ಯಾರೆ ಗಿರಿರಾಜ ಬಾಲೆ ||ಲಾಲಿ||

ಲಾಲಿ ಸಾರಂಗದ ಶೇಷ ನಿಗಮನುತವಾಣಿ
ಸಾರಂಗದಳ ನೇತ್ರೆ ಪುಷ್ಪ ಶರಪಾಣಿ
ಸಾರಂಗ ದಾಯಾನು ಕಾಳಾಹಿ ವೇಣಿ
ಶ್ರೀರಂಗ ಸಹಜಾತೆ ಸರ್ವೇಶ್ವರಿ ರಾಣಿ ||ಲಾಲಿ||

ಪಂಚಮುಖ ದಶಭುಜವು ನಿನಗಂದು ಮಾಯೆ
ಪಂಚನಾದೀರು ಶುಭ ವಾಹನಂತಾಯೆ
ಪಂಚರತ್ನ ವಿಜಿತ ಕಾಯೆ
ಚಂಚರದಿ ಜಗಭರಿಸೆ ಪರಶಿವನ ಜಾಯೆ ||ಲಾಲಿ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT