ಬೆಂಗಳೂರು: `ನಾವೀಗ ರೈತರ ಆತ್ಮಹತ್ಯೆ, ಹಳ್ಳಿಯಿಂದ ನಗರಕ್ಕೆ ವಲಸೆ, ವಿದೇಶಿ ಖಾಸಗಿ ಕಂಪೆನಿಗಳ ಹಾವಳಿ ಹಾಗೂ ಭೂಮಿ ಬಿಸಿ'ಯಾಗುವಂತಹ ನಾಲ್ಕು ಮಹಾ ವಿಪ್ಲವಗಳನ್ನು ಎದುರಿಸುತ್ತಿದ್ದು, ಇಂಥ ವಿಪ್ಲವಗಳ ಪರಿಣಾಮವನ್ನು ಸೂಕ್ಷ್ಮವಾಗಿ ಅರಿತು ಸಮಾಜಕ್ಕೆ ಮಾಹಿತಿ ನೀಡುವಂತಹ ಸಂವೇದನಾ ಶೀಲ ಬರಹಗಾರರು ಅವಶ್ಯಕತೆ ಇದೆ' ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಆಯೋಜಿಸಿದ್ದ ಲೇಖಕ ಡಾ. ಗಣೇಶ ಹೆಗಡೆ ನೀಲೇಸರ ಅವರ `ಸುಸ್ಥಿರ ಕೃಷಿಗೆ ಹತ್ತಾರು ದಾರಿ' ಹಾಗೂ `ಡೇರಿ ಡಾಕ್ಟರ್ ಹೋರಿ ಮಾಸ್ಟರ್' ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ವಿಪ್ಲವಗಳ ದುಷ್ಪರಿಣಾಮಗಳನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸವಾಗಬೇಕು. ಇದಕ್ಕಾಗಿ ಮಾಧ್ಯಮಗಳು, ಕೃಷಿ ಮತ್ತು ಪಶುವೈದ್ಯಶಾಸ್ತ್ರದ ವೃತ್ತಿಪರ ವಿಜ್ಞಾನಿಗಳು ಸಂವೇದನಾಶೀಲರಾಗಿ ರೈತರಿಗೆ ಮಾಹಿತಿ ಒದಗಿಸಬೇಕಿದೆ' ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿಕ ಬೆಂಗಳಿ ವೆಂಕಟೇಶ್ ಮಾತನಾಡಿ, `ಕೃಷಿ ಬದುಕು ನಷ್ಟ ಎನ್ನುತ್ತಾರೆ. ನನಗೆಂದೂ ಹಾಗನ್ನಿಸಿಲ್ಲ. ನನಗೆ ಒಂದು ಎಕರೆ ಮೂವತ್ತೇಳು ಗುಂಟೆ ಜಮೀನಿದೆ. ಅಷ್ಟು ಜಮೀನಿನಿಂದ ವರ್ಷಕ್ಕೆ ಒಬ್ಬ ಎಂಜಿನಿಯರ್ ಪಡೆಯುವ ಸಂಬಳಕ್ಕಿಂತ ಹೆಚ್ಚು ಹಣ ಗಳಿಸುತ್ತೇನೆ. ನನ್ನ ಒಂದು ದಿನದ ಸಂಬಳ ್ಙ 3 ಸಾವಿರ' ಎಂದು ಹೇಳಿ ಅಚ್ಚರಿ ಮೂಡಿಸಿದರು.

ಜಲ ಪತ್ರಕರ್ತ `ಶ್ರೀ' ಪಡ್ರೆ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಸ್.ಯತಿರಾಜ್ ಅವರು ಭೂಮಿ ಬುಕ್ಸ್ ಪ್ರಕಾಶನದ `ಡೇರಿ ಡಾಕ್ಟರ್ ಹೋರಿ ಮಾಸ್ತರ್' ಹಾಗೂ ಕೃಷಿ ಮಾಧ್ಯಮ ಕೇಂದ್ರದ ಸುಸ್ಥಿರ ಕೃಷಿಗೆ ಹತ್ತಾರು ದಾರಿ' ಕೃತಿಗಳನ್ನು ಬಿಡುಗಡೆ ಮಾಡಿದರು. ಕೃತಿ ಕುರಿತು ಮಾತನಾಡಿದರು.

ಕೃಷಿ ಮಾಧ್ಯಮ ಕೇಂದ್ರದ ಕಾರ್ಯನಿರ್ವಾಹಕ ಟ್ರಸ್ಟೀ ಅನಿತಾ ಪೈಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಸೇರಿದಂತೆ ಪಶುವೈದ್ಯಕೀಯ ಮಾಹಾವಿದ್ಯಾಲಯದ ವಿವಿಧ ಪ್ರಾಧ್ಯಾಪಕರು, ಲೇಖಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.