ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ ಆತ್ಮಕಥೆ ನ.6ಕ್ಕೆ ಲೋಕಾರ್ಪಣೆ

Last Updated 2 ಸೆಪ್ಟೆಂಬರ್ 2014, 11:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಆತ್ಮಕಥೆ  ‘ಪ್ಲೇಯಿಂಗ್‌ ಇಟ್‌ ಮೈ ವೇ’ ನವೆಂಬರ್‌ 6 ರಂದು ಮುಂಬೈನಲ್ಲಿ ಬಿಡುಗಡೆಯಾಗಲಿದೆ.

ಲಂಡನ್‌ನ ಹೊಡ್ಡರ್‌ ಅಂಡ್‌ ಸ್ಟಂಗ್‌ಟನ್‌ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ.  ಕ್ರಿಕೆಟ್‌ ತಜ್ಞ ಬೊರಿಯೊ ಮಜುಂದಾರ್‌ ಈ ಕೃತಿಯ ಸಹ ಲೇಖಕ.

‘ನಾನು ಎಷ್ಟು ಪ್ರಮಾಣಿಕವಾಗಿ ಕ್ರಿಕೆಟ್‌ ಆಡಿದ್ದೇನೆಯೋ, ನನ್ನ ಆತ್ಮಕಥೆಯೂ ಅಷ್ಟೇ ಪ್ರಾಮಾಣಿಕವಾಗಿದೆ. ಸಾರ್ವ­ಜನಿಕವಾಗಿ ನಾನು ವ್ಯಕ್ತ ಪಡಿಸದ ಹಲವು ಸೋಜಿಗದ ಸಂಗತಿಗಳೂ ಇದರಲ್ಲಿವೆ. 35 ವರ್ಷಗಳ ಹಿಂದೆ ಕ್ರಿಕೆಟ್‌ ಬ್ಯಾಟ್‌  ಕೈಗೆತ್ತಿಗೊಂಡ ಮೊದಲ ದಿನದಿಂದ ಹಿಡಿದು ಕೊನೆಯ ಇನಿಂಗ್ಸ್‌ ಮುಗಿಸಿದವರೆಗಿನ ಪ್ರತಿಯೊಂದು ನೆನಪುಗಳೂ ಇದರಲ್ಲಿವೆ’ ಎಂದು ಸಚಿನ್‌  ತಮ್ಮ ಟ್ವಿಟರ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT