ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್‌ಗೆ ಜಯದ ಸಿಂಚನ

Last Updated 2 ಮೇ 2015, 20:22 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಸತತ ಸೋಲು ಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್‌ ಹೈದ ರಾಬಾದ್‌ ತಂಡಕ್ಕೆ ಗೆಲುವಿನ ಸಿಂಚನ ಲಭಿಸಿದೆ. ಡೇವಿಡ್‌ ವಾರ್ನರ್(61)  ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ಎದುರಿನ ಐಪಿಎಲ್‌ ಪಂದ್ಯದಲ್ಲಿ 22ರನ್‌ಗಳ ಗೆಲುವು ದಾಖಲಿಸಿ ಜಯದ ಹಾದಿಗೆ ಮರಳಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸನ್‌ ರೈಸರ್ಸ್‌ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 192 ರನ್‌ ಕಲೆ ಹಾಕಿತು.ಸವಾಲಿನ ಗುರಿ ಬೆನ್ನಟ್ಟಿದ ಸೂಪರ್‌ ಕಿಂಗ್ಸ್‌ 6 ವಿಕೆಟ್‌ಗೆ 170ರನ್‌ ಗಳಿಸಲಷ್ಟೇ ಶಕ್ತವಾಯಿತು. ಸನ್‌ರೈಸರ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಾರ್ನರ್ ಮತ್ತು ಶಿಖರ್‌ ಧವನ್‌ ಉತ್ತಮ ಆರಂಭ ನೀಡಿದರು. 28 ಎಸೆತಗಳನ್ನು ಎದುರಿಸಿದ ವಾರ್ನರ್ ಹನ್ನೊಂದು ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿದಂತೆ 61 ರನ್‌ ಸಿಡಿಸಿದರು. ಇವರ ಆಟಕ್ಕೆ ಉತ್ತಮ ಬೆಂಬಲ ನೀಡಿದ ಧವನ್ 32 ಎಸೆತಗಳಲ್ಲಿ 37 ರನ್‌ ಕಲೆ ಹಾಕಿದರು.

ಮೊಯ್ಸಿಸ್‌ ಹೆನ್ರಿಕ್ಸ್‌ (19; 9ಎ, 1ಬೌಂ, 2ಸಿ), ಎಯೊನ್ ಮಾರ್ಗನ್‌ (ಔಟಾಗದೆ 32; 27ಎ, 1ಬೌಂ, 2ಸಿ) ಮತ್ತು ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ನಮನ್‌ ಓಜಾ (20; 12ಎ, 3ಬೌಂ, 1ಸಿ) ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ್ದರಿಂದ ಸನ್‌ರೈಸರ್ಸ್‌ ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ಸಾಧ್ಯ ವಾಯಿತು.

ಸೂಪರ್‌ ಕಿಂಗ್ಸ್‌ ತಂಡದ ಬ್ರೆಂಡನ್‌ ಮೆಕ್ಲಮ್‌ (12; 5ಎ, 3ಬೌಂ) ಬೇಗನೆ ವಿಕೆಟ್‌ ಒಪ್ಪಿಸಿದರು.  ಇದರ ಬೆನ್ನಲ್ಲೇ ಡ್ವೇನ್‌ ಸ್ಮಿತ್‌ (21; 19ಎ, 3ಬೌಂ, 1ಸಿ) ಕೂಡಾ ಪೆವಿಲಿಯನ್‌ ಸೇರಿಕೊಂಡರು.  ಆ ನಂತರ ಸುರೇಶ್‌ ರೈನಾ (23; 15ಎ, 3ಸಿ) ಮತ್ತು ಫಾಫ್‌ ಡು ಪ್ಲೆಸಿಸ್‌ (33; 22ಎ, 4ಬೌಂ) ಸನ್‌ರೈಸರ್ಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತರು. ಆದರೂ ತಂಡಕ್ಕೆ ಗೆಲುವು ಮರೀಚಿಕೆಯಾಯಿತು.
*
ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್‌ ಹೈದರಾಬಾದ್‌ 7 ಕ್ಕೆ 192 (20 ಓವರ್‌)

ಡೇವಿಡ್‌ ವಾರ್ನರ್‌ ಸಿ ಡ್ವೇನ್‌ ಸ್ಮಿತ್‌ ಬಿ ಸುರೇಶ್‌ ರೈನಾ   61
ಶಿಖರ್ ಧವನ್‌ ರನ್‌ಔಟ್‌ (ರವೀಂದ್ರ ಜಡೇಜ/ದೋನಿ)  37
ಮೊಯ್ಸಿಸ್‌ ಹೆನ್ರಿಕ್ಸ್‌ ಸ್ಟಂಪ್ಡ್‌ ದೋನಿ ಬಿ  ಪವನ್‌ ನೇಗಿ  19
ಎಯಾನ್‌ ಮಾರ್ಗನ್‌ ಔಟಾಗದೆ  32
ನಮನ್‌ ಓಜಾ ಬಿ ಆಶಿಶ್‌ ನೆಹ್ರಾ  20
ಆಶಿಶ್‌ ರೆಡ್ಡಿ ಸಿ ದೋನಿ ಬಿ ಡ್ವೇನ್‌ ಬ್ರಾವೊ  06
ಹನುಮ ವಿಹಾರಿ ಬಿ ಡ್ವೇನ್‌ ಬ್ರಾವೊ  08
ಕರಣ್‌ ಶರ್ಮ ಸಿ ಜಡೇಜ ಬಿ ಡ್ವೇನ್‌ ಬ್ರಾವೊ  04
ಇತರೆ: (ಲೆಗ್‌ ಬೈ 1, ವೈಡ್‌–3, ನೋ ಬಾಲ್‌ 1)  05

ವಿಕೆಟ್‌ ಪತನ: 1–86 (ವಾರ್ನರ್‌;8.1), 2–107 (ಹೆನ್ರಿಕ್ಸ್‌್; 9.6), 3–131 (ಧವನ್‌ 12.6), 4–156 (ಓಜಾ; 16.1), 5–163 (ಆಶಿಶ್‌; 17.2), 6–188 (ವಿಹಾರಿ; 19.4), 7–192 (ಕರಣ್‌ ; 19.6)

ಬೌಲಿಂಗ್‌: ಮೋಹಿತ್‌ ಶರ್ಮ 4–0–58–0, ಆಶಿಶ್‌ ನೆಹ್ರಾ 4–0–31–1, ರೋನಿತ್‌ ಮೋರೆ 2–0–28–0, ಸುರೇಶ್ ರೈನಾ 4–0–29–1, ಡ್ವೇನ್‌ ಬ್ರಾವೊ 4–0–25–3, ಪವನ್‌ ನೇಗಿ 2–0–20–1.

ಚೆನ್ನೈ ಸೂಪರ್‌ ಕಿಂಗ್ಸ್ 6 ಕ್ಕೆ 170 (20 ಓವರ್‌)

ಡ್ವೇನ್‌ ಸ್ಮಿತ್‌ ಸಿ ಹನುಮ ವಿಹಾರಿ ಬಿ ಮೊಯ್ಸಿಸ್‌ ಹೆನ್ರಿಕ್ಸ್‌  21
ಬ್ರೆಂಡನ್‌ ಮೆಕ್ಲಮ್‌ ಬಿ ಭುನವೇಶ್ವರ್‌ ಕುಮಾರ್‌  12
ಸುರೇಶ್ ರೈನಾ ಸಿ ಎಯೊನ್‌ ಮಾರ್ಗನ್‌ ಬಿ ಮೊಯ್ಸಿಸ್‌ ಹೆನ್ರಿಕ್ಸ್‌   23
ಫಾಫ್‌ ಡು ಪ್ಲೆಸಿಸ್ ರನ್ ಔಟ್‌ (ಆಶಿಶ್ ರೆಡ್ಡಿ)  33
ಮಹೇಂದ್ರ ಸಿಂಗ್‌ ದೋನಿ ಬಿ ಆಶಿಶ್‌ ರೆಡ್ಡಿ  20
ಪವನ್‌ ನೇಗಿ ಬಿ ಭುವನೇಶ್ವರ್‌ ಕುಮಾರ್  15
ಡ್ವೇನ್‌ ಬ್ರಾವೊ ಔಟಾಗದೆ 25
ರವೀಂದ್ರ ಜಡೇಜ ಔಟಾಗದೆ  14
ಇತರೆ: (ಲೆಗ್‌ ಬೈ–3, ವೈಡ್‌–4)  07

ವಿಕೆಟ್ ಪತನ: 1–14 (ಮೆಕ್ಲಮ್‌; 1.5), 2–48 (ಸ್ಮಿತ್‌; 5.1), 3–68 (ರೈನಾ; 7.4), 4–114 (ಪ್ಲೆಸಿಸ್; 12.4), 5–114 (ದೋನಿ; 12.5), 6–141 (ನೇಗಿ; 16.3)
ಬೌಲಿಂಗ್‌: ಟ್ರೆಂಟ್‌ ಬೌಲ್ಟ್‌ 4–0–44–0, ಭುವನೇಶ್ವರ್ ಕುಮಾರ್‌ 4–1–32–0, ಪ್ರವೀಣ್‌ ಕುಮಾರ್‌ 4–0–33–0, ಮೊಯ್ಸಿಸ್‌ ಹೆನ್ರಿಕ್ಸ್‌  4–0–20–2, ಕರಣ್‌ ಶರ್ಮಾ 2–0–19–0, ಆಶಿಶ್‌ ರೆಡ್ಡಿ 2–0–19–1.

ಫಲಿತಾಂಶ:  ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ 22 ರನ್‌ .

ಪಂದ್ಯ ಶ್ರೇಷ್ಠ: ಡೇವಿಡ್‌ ವಾರ್ನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT