ಮೈಸೂರು: ‘ದಲಿತ ಎಂಬುದು ಜಾತಿಯಲ್ಲ. ಎಲ್ಲಾ ಜಾತಿಯಲ್ಲೂ ದಲಿತರಿದ್ದಾರೆ. ಮೇಲ್ವರ್ಗದವರಿಂದ ಶೋಷಿತರಾದವರೇ ದಲಿತರು’ ಎಂದು ಎಂದು ಹಿರಿಯ ಕವಿ ಬಿ.ಎ. ಸನದಿ ಅಭಿಪ್ರಾಯಪಟ್ಟರು.

ಅವರು ದಸರಾ ಪ್ರಧಾನ ಕವಿಗೋಷ್ಠಿಯಲ್ಲಿ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಪಂಪನ ಮಾತನ್ನು ಪ್ರಸ್ತಾಪಿಸಿ, ‘ಜಾತಿ, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ಕಾದಾಡುವುದು ನಿಲ್ಲಬೇಕು’ ಎಂದು ಕಿವಿಮಾತು ಹೇಳಿದರು.

ಕವಿ ಡಾ.ಚೆನ್ನಣ್ಣ ವಾಲೀಕಾರ ಮಾತನಾಡಿ, ಇನ್ನು ಮುಂದೆ ದಸರಾ ಕವಿ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯ, ಭಾರತ ಸಾಹಿತ್ಯ, ಜಾಗತಿಕ ಸಾಹಿತ್ಯ’ ಎಂದು ಮೂರು ವಿಭಾಗದಲ್ಲಿ ಸಮ್ಮೇಳನಗಳು ನಡೆಯಬೇಕು ಎಂದು ತಿಳಿಸಿದರು.

‘ಬರೆಯುವುದಷ್ಟೇ ಕವಿಗಳ ಕೆಲಸವಲ್ಲ, ಒಂದು ಆದರ್ಶಮಯ ಹೊಸ ಜಗತ್ತನ್ನು ನಿರ್ಮಿಸಲು ನೀವು ಏನೇನು ಮಾಡಿದ್ದೀರಿ ಎಂಬುದನ್ನು ಪ್ರಶ್ನಿಸಿಕೊಳ್ಳಿ’ ಎಂದರು. ನಂತರ ಅವರು, ‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನರಿಗಾದ ಎದೆಯ ಬ್ಯಾನಿ...’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.

ಕವನಗಳ ಕುರಿತು: ಪ್ರಧಾನ ಕವಿಗೋಷ್ಠಿಯಲ್ಲಿ ಮಂಡಿಸಿದ ಕವನಗಳಲ್ಲಿ ಒಂದೆರಡು ಕವನಗಳು ಮಾತ್ರ ಕಾಡುವಂತಹದ್ದಾಗಿದ್ದವು. ಬಹಳಷ್ಟು ಕವನಗಳು ಹೊಸತನವಿಲ್ಲದ ಹಳೆಯದರ ಮುಂದುವರಿಕೆಯಾಗಿ ಕಂಡು ಬಂದವು.

ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿದ ಕವನಗಳೂ ಬೆರಳೆಣಿಕೆಯಷ್ಟಿದ್ದವು. ಅದರಲ್ಲೂ ಕೆ. ಕರಿಸ್ವಾಮಿ ಅವರು ಮೊಬೈಲ್ನಲ್ಲಿ ಕವನ ಬರೆದುಕೊಂಡು ತಂದಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಅವರ ಮೊಬೈಲ್ ಕೈಕೊಟ್ಟು ಪರದಾಡಬೇಕಾಯಿತು.
ಸ್ವಲ್ಪ ಸಮಯದ ನಂತರ ಮೊಬೈಲ್ ಸರಿಪಡಿಸಿ, ಅದರಲ್ಲೇ ಕವನವನ್ನು ಅವರು ಓದುವ ಮೂಲಕ ಕಾವ್ಯವು ಪೆನ್ನು, ಕಾಗದದಿಂದ ಮೊಬೈಲ್ ಕಡೆಗೆ ಸ್ಥಿತ್ಯಂತರಗೊಳ್ಳುತ್ತಿರುವುದನ್ನು ಧ್ವನಿಸಿತು.

ಬೇಲೂರು ರಘುನಂದನ್ ಅವರ ‘ನಾ ನಿ ನಿ ನ’ ಎಂದು ಆರಂಭವಾಗುವ ಕವನ ವಿಶಿಷ್ಟವಾಗಿಯೂ ವಿನೂತನವಾದ ರಚನೆಯನ್ನು ಹೊಂದಿತ್ತು. ಅತಿ ಪುಟ್ಟ ಕವನವಾದರೂ ಕೇಳುಗರನ್ನು ಕೆಲ ಕಾಲ ಇದು ಕಾಡದೆ ಬಿಡಲಿಲ್ಲ.

ಬಿ.ಎಂ. ಹನೀಫ್ ಓದಿದ ‘ಮಹಿಷಾಸುರ ಹೇಳಿದ್ದು’ ಕವನ ಪ್ರಸಕ್ತ ರಾಜಕೀಯ, ಸಾಂಸ್ಕೃತಿಕ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.
ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆ ಮಾತನಾಡಿದಂತೆ ಬರೆದ ಅವರ ಕಾವ್ಯ ಶೈಲಿಯೂ ಹೊಸತನದಿಂದ ಕೂಡಿತ್ತು.

ಡಿ. 16 ಹಾಗೂ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಅತ್ಯಾಚಾರ, ಲಿಬಿಯಾ ಇರಾಕಿನಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆ... ಹೀಗೆ ಬಹಳಷ್ಟು ಸಮಕಾಲೀನ ಘಟನೆಗಳಿಗೆ ಇವರ ಕವನ ಸ್ಪಂದಿಸಿತು. ಕವನದ ಕೊನೆಗೆ ‘ಮಹಿಷಾಸುರ ಅಹಿಂದ’ ಎಂದು ಹೇಳುವ ಮೂಲಕ ಪರಂಪರೆಯಲ್ಲಿನ ದಲಿತ ಧ್ವನಿಯನ್ನು ಪ್ರತಿನಿಧಿಸುವ ಮೂಲಕ ದಲಿತ ಬಂಡಾಯ ಕಾವ್ಯದ ಸ್ವರೂಪವನ್ನೂ ಇದು ತಳೆಯಿತು.
ಶಾರಾದಮ್ಮ ಕಂಪಾಲಿ ಅವರು ಓದಿದ ‘ತಲೆಯಂಗಳದಲ್ಲಿ’ ಕವನ ಕೊಳೆಗೇರಿಯ ಹೆಣ್ಣುಮಗಳೊಬ್ಬಳ ದಾರುಣ ಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥೈಸುವಲ್ಲಿ ಸಫಲವಾಯಿತು.

ಲೋಕೇಶ್ ಅಗಸನಕಟ್ಟೆ ಅವರು ಓದಿದ ‘ಕಮಾನ್ ಇಂಡಿಯಾ’ ಕವನವು ‘ಬಾ’ ಎಂಬ ಕನ್ನಡ ಶಬ್ದಕ್ಕೆ ಹೀನಾರ್ಥ ಪ್ರಾಪ್ತಿಯಾಗುತ್ತಿರುವುದು ಆ ಜಾಗಕ್ಕೆ ‘ಕಮಾನ್’ ಎಂಬ ಇಂಗ್ಲಿಷ್ ಪದ ಕೂರುತ್ತಿರುವುದನ್ನು ಧ್ವನಿಸಿತು.

ಇನ್ನುಳಿದಂತೆ ಬಹಳಷು್ಟ ಮಂದಿಯ ಕವಿತೆ ತೀರಾ ವಾಚ್ಯವಾಗಿದ್ದವು. ಅಲ್ವಿನ್ ಡಾಂಟಿ (ಕೊಂಕಣಿ), ಕಸ್ತೂರಿ ಗೋವಿಂದಯ್ಯ(ಕೊಡವ), ವಸಂತಕುಮಾರ್ ಪೆರ್ಲ (ತುಳು), ಹಂಜ್ಹ ಮಲಾರ್ (ಬ್ಯಾರಿ) ಕವನಗಳನ್ನು ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.