ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಕಣ್ಗಾವಲಿಗೆ ರಹಸ್ಯ ಹಡಗು

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಶತ್ರುದೇಶಗಳ ಖಂಡಾಂತರ ಕ್ಷಿಪಣಿಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಹಡಗಿನ (ಒಎಸ್‌ಎಸ್‌) ನಿರ್ಮಾಣಕ್ಕೆ ರಕ್ಷಣಾ ಇಲಾಖೆ ಮಂಜೂರಾತಿ ನೀಡಿದ್ದು, ₨ 725 ಕೋಟಿಯನ್ನು ಬಿಡುಗಡೆ ಮಾಡಿದೆ. 

ವಿಶಾಖಾಪಟ್ಟಣದ ಹಿಂದೂಸ್ತಾನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ಈ ವಿಶೇಷ ಹಡಗನ್ನು ಸಿದ್ಧಪಡಿಸಲಾಗುತ್ತಿದ್ದು, ಇದರ ನಿರ್ಮಾಣದ ಉಸ್ತುವಾರಿ ನೇರವಾಗಿ ಪ್ರಧಾನಿ ಕಚೇರಿ ವ್ಯಾಪ್ತಿಗೆ ಬರುತ್ತದೆ. ಇದಲ್ಲದೇ ಇದು ರಕ್ಷಣಾ ಇಲಾಖೆಯ ಅತ್ಯಂತ ರಹಸ್ಯ ಯೋಜನೆಯ ವ್ಯಾಪ್ತಿಗೆ ಬರುತ್ತದೆ. 2015ರ ಡಿಸೆಂಬರ್‌ನೊಳಗೆ ಹಡಗು ಸಿದ್ಧಪಡಿಸುವಂತೆ ಕಾಲಮಿತಿ ಹಾಕಲಾಗಿದೆ.

ಈ  ಹಡಗು ಸಿದ್ಧವಾದ ತಕ್ಷಣ ಅದನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಕ್ಷಿಪಣಿ ಶೋಧಕ ವ್ಯವಸ್ಥೆಯ ಭಾಗವಾಗಿ ಬಳಸಿಕೊಳ್ಳಲಾಗುವುದು. ನೌಕಾಪಡೆ ಈ ಹಡಗನ್ನು ನಿರ್ವಹಿಸಲಿದೆ. ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ‘ಅರಿಹಂತ್‌’ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. 

ಈ ರಹಸ್ಯ ಹಡಗಿನ  ಒಟ್ಟು ವೆಚ್ಚ ₨ 1500 ಕೋಟಿಯಾಗಿದೆ.175 ಮೀಟರ್‌ ಉದ್ದ 22 ಮೀಟರ್‌ ಅಗಲದ ಈ ಹಡಗಿನಲ್ಲಿ ಹೆಲಿಕಾಪ್ಟರ್‌ ಇಳಿಯಲು ಹಾಗೂ ಹಾರಾಟ ನಡೆಸಲು ಅವಕಾಶವಿದೆ. 300 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮುಂದುವರಿದ ದೇಶಗಳ ಪೈಕಿ ಅಮೆರಿಕ ಮಾತ್ರ ಇಂತಹ ಕ್ಷಿಪಣಿ ಕಣ್ಗಾವಲು ಹಡಗನ್ನು ಹೊಂದಿದೆ. ಅಲ್ಲದೇ ಮಿತ್ರ ದೇಶಗಳಾದ ಜಪಾನ್‌, ದಕ್ಷಿಣ ಕೊರಿಯಾಕ್ಕೂ ರಕ್ಷಣೆ ಒದಗಿಸುತ್ತದೆ.

ಕ್ಷಿಪಣಿ ರಕ್ಷಣಾ ವ್ಯವಸ್ಥೆ
ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ಎರಡು ಹಂತಗಳಿವೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ (ಎಎಡಿ) 15ರಿಂದ  30 ಕಿ.ಮೀ. ದೂರ ಇರುವಾಗ ಶತ್ರು ಕ್ಷಿಪಣಿಗಳನ್ನೂ ನಾಶಪಡಿಸಬಲ್ಲದು. ಪೃಥ್ವಿ ವಾಯು ರಕ್ಷಣಾ ವ್ಯವಸ್ಥೆ (ಪಿಎಡಿ) 50ರಿಂದ 80 ಕಿ.ಮೀ. ದೂರದಲ್ಲಿ ಇರುವಾಗಲೇ ಶತ್ರು ಕ್ಷಿಪಣಿಗಳನ್ನು ನಾಶಪಡಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT