ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ದೃಶ್ಯಗಳು ಅಂಗಿ ಮೇಲೆ ಮೂಡಿದಾಗ...

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ತಣ್ಣಗೆ ಬೀಸುತ್ತಿದ್ದ ಗಾಳಿ, ತಂಪಾದ ಇಳಿ ಸಂಜೆ, ಬಣ್ಣ ಬಣ್ಣದ ಬೆಳಕು, ಹಿತವಾದ ಸಂಗೀತದ ಅಲೆಯ ಮಧ್ಯೆ ರ್‍್ಯಾಂಪ್‌ ಮೇಲೆ ಬೆಕ್ಕಿನ ನಡಿಗೆ ಹಾಕುತ್ತಿದ್ದ ಲಲನೆಯರು...

ಇವೆಲ್ಲವೂ ಒಂದೇ ಕಡೆ ಮೇಳೈಸಿದ್ದು  ನಗರದಲ್ಲಿ snapdeal.com ಆಯೋಜಿಸಿದ್ದ  ಫ್ಯಾಷನ್‌ ಷೋನಲ್ಲಿ.

ಅಲ್ಲಿ ಭಾರತೀಯ ಸಾಂಸ್ಕೃತಿಕ ಶೈಲಿಯ ಘಾಗ್ರಾ–ಚೋಲಿ, ಲಂಗ–ದಾವಣಿಯಂತಹ ವಿವಿಧ ವಿನ್ಯಾಸದ ಉಡುಪುಗಳನ್ನು ಧರಿಸಿದ್ದ ಲಲನೆಯರು ಬಳುಕುತ್ತ ರ್‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರು.

ನೈಸರ್ಗಿಕ ಚಿತ್ತಾರದ ಬಳ್ಳಿ, ಹೂಗಳು, ‘ಸಮುದ್ರದ ಜೀವನ’ ಎಂಬ ಪರಿಕಲ್ಪನೆ ಇರಿಸಿಕೊಂಡು ರಿಯಾ ಕೊಡಾಲಿ ವಿನ್ಯಾಸಗೊಳಿಸಿದ್ದ ವಿವಿಧ ಬಟ್ಟೆಗಳನ್ನು ಈ ಷೋನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಅಂದಿನ ಷೋನ ಇನ್ನೊಂದು ಪ್ರಮುಖ  ಆಕರ್ಷಣೆ ಬಾಲಿವುಡ್ ನಟಿ ಲೀಸಾ ರೇ.

ಸಮುದ್ರದ ದೃಶ್ಯವನ್ನೇ ಮೈಮೇಲೆ ಹೊದ್ದಂತೆ ಇರುವ ಬಟ್ಟೆ ಧರಿಸಿದ್ದ  ಲೀಸಾ  ರೇ, ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್‌ ಷೋಗೆ ಇನ್ನಷ್ಟು ಮೆರುಗು ತಂದರು.

ಸಮುದ್ರ ತಟದಲ್ಲಿರುವ ಬಣ್ಣದ ಮೀನುಗಳು, ಪಾಚಿ ಸಸ್ಯಗಳಂತಹ ಸಮುದ್ರ ಜೀವಿಗಳು ಜೀವ ತಳೆದಿರುವ  ಆಕಾಶ ನೀಲಿ ಬಣ್ಣದ ಬಟ್ಟೆ ಧರಿಸಿದ್ದ ಲೀಸಾ ರೇ ಅವರ ಬೆಕ್ಕಿನ ನಡಿಗೆ ನೆರೆದವರ ಮನ ರಂಜಿಸಿತು.

ಈ ಸುಂದರ ಕ್ಷಣಗಳಿಗೆ ಸ್ನ್ಯಾಪ್‌ಡೀಲ್‌ನ ಪ್ರಾಯೋಜಕತ್ವದಲ್ಲಿ ಮೂಡಿಬಂದ ಡಿಎಫ್‌ ಸಿಲ್ವರ್ ಲೈನ್‌ ಬೆಂಗಳೂರು ಫ್ಯಾಷನ್ ಸಪ್ತಾಹ ಸಾಕ್ಷಿಯಾಯಿತು.  

ಈ ಫ್ಯಾಷನ್‌ ಷೋ ಇತ್ತೀಚೆಗೆ ನಗರದ ಶೆರ್‌ಟನ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

ಜುಲೈ 23ರಿಂದ 26ರವರೆಗೆ ನಡೆದ ಈ ಷೋನಲ್ಲಿ ರಿಯಾಜ್ ಗಂಜಿ, ಗೌರಂಗ್‌ ಷಾ, ಮೊನಪಲಿ ಹಾಗೂ ರೆಹಾನೆ ಸೇರಿದಂತೆ 26 ಆಯ್ದ ವಿನ್ಯಾಸಕಾರರ ರಚನೆಗಳಿರುವ ವಿವಿಧ ವಿನ್ಯಾಸದ ಉಡುಪುಗಳು ಪ್ರದರ್ಶನಗೊಂಡಿದ್ದವು.

ಷೋನಲ್ಲಿ ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ನ ಅನೇಕ ನಟ–ನಟಿಯರು ಭಾಗವಹಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು.
ಪ್ಯಾಷನ್‌ ಷೋನಲ್ಲಿ ಭಾಗವಹಿಸಿದ್ದ ವಿವಿಧ ವಿನ್ಯಾಸಕರು ಒಂದೊಂದು ಪರಿಕಲ್ಪನೆಯಲ್ಲಿ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದರು.
ಪಶ್ಚಿಮ ಭಾರತದ ಸಂಸ್ಕೃತಿ, ಬಂಗಾಳದ ಕೈಮಗ್ಗ, ಬೇಲೂರಿನ ಮೂರ್ತಿಗಳು, ಹೀಗೆ ಧಾರ್ಮಿಕ, ಸಾಂಸ್ಕೃತಿಕ ನೆಲೆಯ ಹಲವು ವಿನ್ಯಾಸದ ಬಟ್ಟೆಗಳು ಅಲ್ಲಿ ಪ್ರದರ್ಶನಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT