ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಶಸ್ತ್ರಪಡೆಗಳ ವಿಶೇಷಾಧಿಕಾರ ರದ್ದತಿಗೆ ಶಿಫಾರಸು

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ವಿವಾದಿತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ­­ಯನ್ನು ರದ್ದುಪಡಿಸಬೇಕು ಎಂಬುದಕ್ಕೆ ವಿರುದ್ಧವಾದ ಶಿಫಾರ ಸನ್ನು ಗೃಹ ಸಚಿವಾಲಯ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಯ ಸಂಪುಟ ಸಮಿತಿಗೆ ಗೃಹ ಸಚಿವಾಲಯ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಬಿ.ಪಿ. ಜೀವನ್‌ ರೆಡ್ಡಿ ಸಮಿತಿ, ಸಶಸ್ತ್ರ ಪಡೆಯ ವಿಶೇಷಾಧಿಕಾರ ಕಾನೂ ನನ್ನು ಹಿಂದಕ್ಕೆ ಪಡೆಯಬೇಕು ಎಂದು ಸಮಿತಿ ತನ್ನ ವರದಿಯಲ್ಲಿ  ತಿಳಿಸಿತ್ತು. ಈ ಕಾನೂನು ದಬ್ಬಾಳಿಕೆಯ ಚಿಹ್ನೆ. ಆದ್ದರಿಂದ ಇದನ್ನು ತಿರಸ್ಕರಿಸಬೇಕು ಎಂದು ಹೇಳಿತ್ತು. ರೆಡ್ಡಿ ಸಮಿತಿಯ ವರದಿಯನ್ನು ತಿರಸ್ಕರಿ­ಸಬೇಕು ಎಂದು ಸಂಪುಟ ಸಮಿತಿಗೆ ಶಿಫಾರಸು ಮಾಡಿ ರುವುದಾಗಿ ಗೃಹ ಸಚಿವಾಲಯದ ಅಧಿಕಾರಿ ಯೊಬ್ಬರು ಹೇಳಿದ್ದಾರೆ.

ವಿಶೇಷಾಧಿಕಾರ ಕಾಯಿದೆಯಲ್ಲಿ ಯಾವುದೇ ಬದಲಾವಣೆ ಮಾಡು ವುದನ್ನು ರಕ್ಷಣಾ ಸಚಿವಾಲಯ ವಿರೋ­ಧಿಸಿತ್ತು. ಉಗ್ರರ ಉಪಟಳ ಹೆಚ್ಚಾಗಿ­ರುವ ಪ್ರದೇಶಗಳಲ್ಲಿ ಕಾರ್ಯನಿರ್ವ­ಹಿಸುವ ರಕ್ಷಣಾ ಪಡೆಗಳಿಗೆ ವಿಶೇಷಾ­ಧಿಕಾರ ಅಗತ್ಯ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT